ಮನೆಯಿಂದಲೇ ಕೆಲಸಕ್ಕೆ ಒಗ್ಗದ ಜಪಾನಿಗರು
Team Udayavani, Apr 27, 2020, 1:00 PM IST
ಕೋವಿಡ್ ವೈರಸ್ ಹೆಚ್ಚಾದ ಬಳಿಕ ಹಠಾತ್ ಜಪಾನ್ ಕಂಪೆನಿಗಳೆಲ್ಲವು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಉದ್ಯೋಗಿಗಳಿಗೆ ಸೂಚಿಸಿದವು. ಆದರೆ ಕಡಿಮೆ ತಂತ್ರ ಜ್ಞಾನದಿಂದಾಗಿ ಜಪಾನ್ ನೌಕರರು ಪರದಾಟ ನಡೆಸಿದ್ದಾರೆ ಎಂಬುದು ಅಧ್ಯಯನದಿಂದ ಬಹಿರಂಗಗೊಂಡಿದೆ. ಮನೆಯಲ್ಲಿ ಕೆಲಸ ನಿರ್ವಹಿಸಲು ಬೇಕಾಗಿರುವ ಕನಿಷ್ಠ ಸಲಕರಣೆಗಳು ಕೂಡ ಜಪಾನ್ ಜನರ ಬಳಿ ಇರಲಿಲ್ಲ. ಇದರಿಂದಾಗಿ ಲಾಕ್‌ಡೌನ್ ಘೋಷಣೆಯಾದ ಬೆನ್ನಲ್ಲೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಉದ್ಯೋಗಿಗಳು ಮುಗಿಬಿದ್ದರು.
ಜತೆಗೆ ಹೆಚ್ಚಿನ ಕಚೇರಿಗಳಲ್ಲಿ ಇನ್ನೂ ಕೂಡ ಕಾರ್ಪೋರೇಟ್ ಸಂಸ್ಕೃತಿ ಇರುವುದು ಲಾಕ್‌ಡೌನ್ ವೇಳೆ ಜಪಾನ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇ ಮೇಲ್ ಇದ್ದರೂ ಅಲ್ಲಿನ ಹೆಚ್ಚಿನ ಜನ ಈಗಲೂ ಫ್ಯಾಕ್ಸ್ ಅನ್ನೇ ಅವಲಂಬಿಸುತ್ತಿದ್ದಾರೆ. ಇದು ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದೆ, ಜತೆಗೆ ಹೈ ಸ್ಪೀಡ್ ಇಂಟರ್ನೆಟ್ ಕೂಡ ಇರಲಿಲ್ಲ.
ಇದೀಗ ಮನೆಯಲ್ಲಿ ಕಂಪ್ಯೂಟರ್ ಇಲ್ಲದಿದ್ದರೂ ಮೊಬೈಲ್ ಮೂಲಕ ಟೆಲಿವರ್ಕಿಂಗ್ ಅನ್ನು ಜಪಾನ್ ಕಂಪೆನಿಗಳು ಆರಂಭಿಸಿದೆ. ಆನ್‌ಲೈನ್ ಮೂಲಕ ಸಾವಿರಾರು ನೌಕರರಿಗೆ ತರಬೇತಿ ನೀಡಿದ ಬಳಿಕ ಟೆಲಿವರ್ಕಿಂಗ್ ಆರಂಭಿಸಲಾಗಿದೆ. ಇದರಿಂದಾಗಿ ಅಲ್ಪ ಸ್ವಲ್ಪ ಕೆಲಸವನ್ನು ಜಪಾನ್ ಉದ್ಯೋಗಿಗಳು ಮಾಡುವಂತಾಗಿದೆ.w
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.