ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ಕೀ ವರ್ಡ್!
Team Udayavani, Apr 27, 2020, 2:01 PM IST
ಸಾಂದರ್ಭಿಕ ಚಿತ್ರ
ತಂತ್ರಜ್ಞಾನ ಸಂಸ್ಥೆ ಗೂಗಲ್, ಇತ್ತೀಚಿಗಷ್ಟೆ 6,000 ಕೋಟಿಗೂ ಹೆಚ್ಚು ಹಣವನ್ನು ಕೋವಿಡ್-19 ಸಹಾಯ ಕಾರ್ಯ ಗಳಿಗೆ ದೇಣಿಗೆ ನೀಡಿತ್ತು. ಈ ನೆರವು ಹಣ, ಜಾಹೀರಾತು, ಕ್ಲೌಡ್ ಸೇವೆ ಮತ್ತಿತರ ಮೂಲಗಳ ಮುಖಾಂತರ ಸಂದಾಯವಾಗಲಿದೆ. ಅವೆಲ್ಲಕ್ಕಿಂತಲೂ ಮುಖ್ಯವಾಗಿ, ಜಗತ್ತಿನಾದ್ಯಂತ ವೈರಸ್ ವಿರುದ್ಧ ಹೋರಾಡು ತ್ತಿರುವ ಜನರಲ್ಲಿ ನೈತಿಕ ಸ್ಥೈರ್ಯ ತುಂಬುವ ಪುಟ್ಟ
ವಿಡಿಯೋವೊಂದನ್ನು ಸಂಸ್ಥೆ ಬಿಡುಗಡೆಗೊಳಿಸಿದೆ. ಆ ವಿಡಿಯೋದ ಘೋಷ ವಾಕ್ಯ Where There’s Help, There’s Hope. ಎಲ್ಲಿ ಸಹಾಯ ಲಭಿಸುವುದೋ, ಅಲ್ಲಿ ಭರವಸೆ ಇರುತ್ತದೆ ಎಂಬುದು ಅದರ ಅರ್ಥ. ಅಪಾಯವನ್ನು ಲೆಕ್ಕಿಸದೆ ಸೇವೆಯಲ್ಲಿ ತೊಡಗಿರುವ ಆರೋಗ್ಯ ಸಂಸ್ಥೆಯ ಕಾರ್ಯಕರ್ತರು, ಜನಸಾಮಾನ್ಯರು ಮತ್ತು ಸ್ವಯಂಸೇವಕರಿಗೆ, ಗೂಗಲ್ ಈ ವಿಡಿಯೋವನ್ನು ಅರ್ಪಿಸಿದೆ. ಒಂದೂವರೆ ನಿಮಿಷದ ವಿಡಿಯೋದಲ್ಲಿ ಲಾಕ್ ಡೌನ್ ಇರುವ ಪ್ರದೇಶಗಳಲ್ಲಿ ಜನರು ಯಾವ ರೀತಿ ಕೋವಿಡ್ ವಿರುದ್ಧ ಸಮರ ಸಾರುತ್ತಿದ್ದಾರೆ ಎಂಬುದನ್ನು ಮನೋಜ್ಞವಾಗಿ ಸೆರೆ ಹಿಡಿದು, ಅವರಿಗೆ ಥ್ಯಾಂಕ್ಸ್ ಹೇಳಿದೆ. ಗೂಗಲ್ ಬಿಡುಗಡೆಗೊಳಿಸಿರುವ ಮಾಹಿತಿಯಂತೆ, ಗೂಗಲ್ ಸರ್ಚ್ ಜಾಲತಾಣದಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟಿರುವ ಕೀವರ್ಡ್ “ಸಹಾಯ ಮಾಡುವುದು ಹೇಗೆ?’ ಎಂಬುದು. ಜನರು ಈ ಸಂದರ್ಭದಲ್ಲಿ, ತಾವು ಯಾವ ರೀತಿ ಇತರರಿಗೆ ನೆರವಾಗಬಹುದು ಎಂದು ಚಿಂತಿಸುತ್ತಿರುವುದು ನಿಜಕ್ಕೂ ಆಶಾಭಾವದ ಸಂಕೇತ. ಈ ಹಿನ್ನೆಲೆಯಲ್ಲಿಯೇ, ಗೂಗಲ್ ಈ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ವಿಡಿಯೊ ಕೊಂಡಿ- tinyurl.com/yx6vh7xx
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.