ಇಂಡೋನೇಷ್ಯಾ ಸಾರಿಗೆ ಸಂಚಾರ ಸಂಪೂರ್ಣ ನಿಷೇಧ
Team Udayavani, Apr 27, 2020, 2:39 PM IST
ಜಕಾರ್ತ: ರಂಜಾನ್ ದಿನ ಆರಂಭವಾಗುತ್ತಿರುವಾಗಲೇ ಇಂಡೋನೇಷ್ಯಾ ತನ್ನ ಎಲ್ಲಾ ಸಂಚಾರವನ್ನು ನಿಷೇಧಿಸಿದೆ. ಕೋವಿಡ್ ವೈರಸ್ ಸೋಂಕು ಹರಡುವುದನ್ನು ತಡೆಯಲು ಅಲ್ಲಿನ ಸರಕಾರ ಈ ಕ್ರಮ ಕೈಗೊಂಡಿದೆ. ಶುಕ್ರವಾರದಿಂದ ಜಾರಿಗೆ ಬರುವ ಹಾಗೆ ರಸ್ತೆ, ವಾಯು ಮತ್ತು ಸಮುದ್ರ ಪ್ರಯಾಣವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಇಂಡೋನೇಷ್ಯಾ ಅತಿ ಹೆಚ್ಚು ಮುಸ್ಲಿಂ ಸಮುದಾಯದವರನ್ನು ಹೊಂದಿದೆ. ಇಡೀ ದೇಶವೇ ರಂಜಾನ್ ಹಬ್ಬದಲ್ಲಿ ಭಾಗಿಯಾಗುತ್ತದೆ. ಪ್ರತಿ ವರ್ಷ ರಂಜಾನ್ ಆಚರಣೆಯಲ್ಲಿ ಜನರು ತಮ್ಮ ಕುಟುಂಬಸ್ಥರು ಮತ್ತು ಗೆಳೆಯರ ಬಳಗದೊಂದಿಗೆ ಜತೆಗೂಡುತ್ತಾರೆ. ಅವರ ಮನೆಗಳಿಗೆ ತೆರಳುವುದು, ಅವರ ಆಚರಣೆಯಲ್ಲಿ ತಾವೂ ಭಾಗವಹಿಸುವುದು ಸಾಮಾನ್ಯ. ಈ ಆಚರಣೆಯನ್ನು ಮುಡಿಕ್ ಎಂದು ಹೇಳುತ್ತಾರೆ.
ಆದರೆ ಈ ವರ್ಷ ರಂಜಾನ್ ಹಬ್ಬ ಎಂದಿನಂತೆ ಕಳೆಗಟ್ಟಲು ಸಾಧ್ಯವಿಲ್ಲ. ಕೋವಿಡ್-19 ಇಡೀ ಜಗತ್ತನ್ನೇ ಈ ಪರಿಯಾಗಿ ಕಾಡುತ್ತಿದ್ದು ಇದಕ್ಕೆ ಇಂಡೋನೇಷ್ಯಾ ಹೊರತಾಗಿಲ್ಲ. ರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕವಾಗಿ ಆಚರಿಸಲಾಗುತ್ತಿರುವ ಹಬ್ಬಕ್ಕೆ ಲಾಕ್‌ಡೌನ್ ಕಡಿವಾಣ ಹಾಕಲಾಗಿದೆ.
ಮಾರ್ಚ್ ತನಕ ಯಾವುದೇ ಪ್ರಕರಣ ರಾಷ್ಟ್ರದಲ್ಲಿ ದಾಖಲಾಗಿರಲಿಲ್ಲ. ಆದರೆ ಬಳಿಕ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಾಯಿತು. ಹಾಗಾಗಿ ಅನಿವಾರ್ಯವಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಜಕಾರ್ತ ಮುಂದಾಯಿತು. ಈ ಆಗ್ನೇಯ ಏಷ್ಯಾದಲ್ಲಿ ಸಿಂಗಾಪುರದ ಬಳಿಕ ಎರಡನೇ ಅತಿ ಹೆಚ್ಚು ಸೋಂಕು ಹೊಂದಿದ ರಾಷ್ಟ್ರವಾಗಿ ಇಂಡೋನೇಷ್ಯಾ ಬದಲಾಗಿದೆ. ಈ ಹಿನ್ನೆಲೆಯಲ್ಲಿ ರೋಗವು ಮತ್ತಷ್ಟು ಹರಡುವುದನ್ನು ತಡೆಯಲು, ದೇಶದ ಎÇÉಾ ಪ್ರಯಾಣವನ್ನು ನಿಷೇಧಿಸಿದೆ. ಪ್ರಮುಖ ನಗರಗಳ ನಡುವಿನ ಸಾರ್ವಜನಿಕ ಸಾರಿಗೆಯನ್ನು ಮೇ 31ರ ವರೆಗೆ ಸ್ಥಗಿತಗೊಳಿಸಿದ್ದು, ನಗರದ ಅಲ್ಲಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.
ಕೆಲವು ಪ್ರದೇಶಗಳನ್ನು “ರೆಡ್ ಝೋನ್’ ಎಂದು ಗುರುತಿಸಲಾಗಿದ್ದು, ಖಾಸಗಿ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿದೆ. ಈ ಸ್ಥಳಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ರಾಜಧಾನಿ ಜಕಾರ್ತ ಕೋವಿಡ್ ಹಾಟ್‌ಸ್ಟಾಟ್ ಆಗಿ ಗುರುತಿಸಿಕೊಂಡಿದೆ.
ಬಹಳ ವಿಶಿಷ್ಟವಾದ ಸನ್ನಿವೇಶಗಳು ಜಗತ್ತನ್ನು ಆವರಿಸಿಕೊಂಡಿರುವಾಗ ರಂಜಾನ್ ಹಬ್ಬ ಬಂದಿದೆ. ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕ್ರಮಗಳು ಕುಟುಂಬಗಳು ಮತ್ತು ಸ್ನೇಹಿತರನ್ನು ಪರಸ್ಪರ ಭೇಟಿ ಮಾಡುವುದನ್ನು ತಡೆಯುತ್ತದೆ. ಪ್ರತಿ ವರ್ಷ ನಡೆಯುತ್ತಿದ್ದ ಇಫ್ತಾರ್ ಕೂಟ ಈ ವರ್ಷ ನಡೆಯುವುದು ಅನುಮಾನ. ಮಸೀದಿಗಳಲ್ಲಿ ಒಟ್ಟಾಗಿ ಪ್ರಾರ್ಥನೆ ಮಾಡಬಾರದು ಎಂದು ಇಂಡೋನೇಷ್ಯಾದ ಉಲೆಮಾ ಕೌನ್ಸಿಲ್ ಮತ್ತು ದೇಶದ ಅತಿದೊಡ್ಡ ಇಸ್ಲಾಮಿಕ್ ಸಂಘಟನೆಯಾದ ನಹಾª$Éತುಲ್ ಉಲಮಾ ಕರೆ ನೀಡಿವೆ. ಈ ಮಧ್ಯೆಯಾವುದೇ ಮಸೀದಿಗಳನ್ನು ಮುಚ್ಚುವ ನಿರ್ಧಾರಕ್ಕೆ ಸರಕಾರ ಬಂದಿಲ್ಲ. ಜತೆಗೆ ರಾಷ್ಟ್ರ ಪೂರ್ತಿ ಲಾಕ್ ಡೌನ್ ನಡಿ ನಿರ್ಬಂಧಿಸಿಲ್ಲ.
ರಾಷ್ಟ್ರದ ಅಧ್ಯಕ್ಷರೂ ಈ ಸಂಬಂಧ ನಾಗರಿಕರೊಂದಿಗೆ, ಮನೆಯಲ್ಲೇ ಪ್ರಾರ್ಥನೆಯನ್ನು ಮಾಡುವ ಮೂಲಕ ವೈಯಕ್ತಿಕ ಸುರಕ್ಷತೆಗೆ ಹೆಚ್ಚು ಗಮನ ಕೊಡಬೇಕು ಎಂದು ಕರೆ ನೀಡಿದ್ದಾರೆ.
ಸಾಮಾನ್ಯವಾಗಿ ಜಕಾರ್ತಾ ಮತ್ತು ಇತರ ದೊಡ್ಡ ನಗರಗಳ ಬಹುತೇಕ ನಿವಾಸಿಗಳು ತಮ್ಮ ಹಿರಿಯರಿರುವ ಮತ್ತು ತಮ್ಮ ಮೂಲ ಹಳ್ಳಿಗಳಿಗೆ ತೆರಳಿ ರಂಜಾನ್ ಆಚರಣೆಯಲ್ಲಿ ಭಾಗಿಯಾಗುವುದು ಕ್ರಮವಾಗಿತ್ತು. ಜೂನ್ 15ರ ವರೆಗೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಜೂನ್ 1ರ ವರೆಗೆ ವಿಮಾನ ಪ್ರಯಾಣದ ನಿಷೇಧ ಜಾರಿಯಲ್ಲಿರುತ್ತದೆ. ಸಮುದ್ರ ಮೂಲಕ ಏರ್ಪಡುವ ಸಂಚಾರವನ್ನು ಜೂನ್ 8ರ ತನಕ ತಡೆಹಿಡಿಯಲಾಗಿದೆ. ಲಾಜಿಸ್ಟಿಕ್ಸ್, ಆಹಾರ ಪೂರೈಕೆ, ಮೆಡಿಕಲ್ ಸೇವೆ, ವೈದ್ಯರಿಗೆ ಸಾರಿಗೆ, ಅಗ್ನಿಶಾಮಕ ಇಲಾಖೆ ಮತ್ತು ಆಂಬ್ಯುಲೆನ್ಸ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಈ ತನಕದ ನಿರ್ಬಂಧಗಳ ಹೊರತಾಗಿಯೂ ಶೇ. 24 ಜನರು ಇನ್ನೂ ಮನೆಗೆ ಪ್ರಯಾಣಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ