ಪರೀಕ್ಷೆಗೆ ಬಾಕಿಯಿದೆ 500ಕ್ಕೂ ಹೆಚ್ಚು ಗಂಟಲ ದ್ರವ ಮಾದರಿ
ಪ್ರಯೋಗಾಲಯಕ್ಕೆ ಹೆಚ್ಚಿದ ಒತ್ತಡ
Team Udayavani, Apr 28, 2020, 5:30 AM IST
ಸಾಂದರ್ಭಿಕ ಚಿತ್ರ..
ಮಂಗಳೂರು: ಪಡೀಲಿನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿನ ಕೋವಿಡ್ 19 ಸೋಂಕು ಪ್ರಕರಣವು ಜಿಲ್ಲಾಡಳಿತಕ್ಕೂ ಬಹುದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದರಿಂದಾಗಿ ಸೋಂಕು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವ ವೆನ್ಲಾಕ್ ನ ಪ್ರಯೋಗಾಲಯದಲ್ಲಿರುವ ವೈದ್ಯರ ಕೆಲಸದ ಒತ್ತಡವೂ ಜಾಸ್ತಿಯಾಗಿದ್ದು, ಶಂಕಿತರ ಗಂಟಲು ಮಾದರಿಗಳನ್ನು ಮತ್ತೆ ಬೆಂಗಳೂರಿಗೆ ಕಳುಹಿಸಿ ಕೊಡಬೇಕಾದ ಅನಿವಾರ್ಯತೆಯೂ ಎದುರಾಗಿದೆ.
ದಕ್ಷಿಣ ಕನ್ನಡದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಅವರೊಂದಿಗಿನ ಪ್ರಥಮ-ದ್ವಿತೀಯ ಹಂತದ ಸಂಪರ್ಕದ ವ್ಯಕ್ತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿರುವುದರಿಂದ ದಿನೇ ದಿನೇ ವೆನ್ಲಾಕ್ ನ ಪ್ರಯೋಗಾಲಯಕ್ಕೆ ತಪಾಸಣೆಗೆ ಬರುತ್ತಿರುವ ಗಂಟಲು ದ್ರವ ಮಾದರಿಗಳ ಸಂಖ್ಯೆಯೂ ಏರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆ ಪ್ರಕರಣದಿಂದಾಗಿ ಒಂದೆಡೆಯಿಂದಲೇ ಏಕಾಏಕಿ 300ಕ್ಕೂ ಹೆಚ್ಚು ಸ್ಯಾಂಪಲ್‌ಗಳು ಬಂದಿರುವುದರಿಂದ ವೈದ್ಯರು, ಸಿಬಂದಿ ಹಗಲಿರುಳು ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಇನ್ನೊಂದೆಡೆ ಉಡುಪಿ, ಕಾರವಾರ, ದ.ಕ. ಜಿಲ್ಲೆಯ ಇತರೆಡೆಗಳಿಂದ ಬಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾದ ಕೊರೊನಾ ಶಂಕಿತ ರೋಗಿಗಳ ಗಂಟಲ ದ್ರವ ಮಾದರಿ ಸಹಿತ ಒಟ್ಟು 500ಕ್ಕೂ ಹೆಚ್ಚು ಜನರ ಮಾದರಿಗಳು ಇನ್ನೂ ಪರೀಕ್ಷೆಗೆ ಬಾಕಿ ಇವೆ. ಇವೆಲ್ಲದರ ಪರೀಕ್ಷೆಗೆ ಹೆಚ್ಚಿನ ಕಾಲಾವಕಾಶವೂ ಅನಿವಾರ್ಯ.
ವರದಿ ತಡವಾದರೂ ಅಪಾಯ
ವೆನ್ಲಾಕ್ ನಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿರುವ 50ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ. ಈಗಾಗಲೇ 500ಕ್ಕೂ ಹೆಚ್ಚು ಸ್ಯಾಂಪಲ್‌ಗಳ ಪರೀಕ್ಷೆಗೆ ಬಾಕಿ ಇರುವುದರಿಂದ ಅವರಿಗೆ ಕೋವಿಡ್ 19 ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲಾಗುವುದಿಲ್ಲ. ಅತೀ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವವರು ಅಥವಾ ದೀರ್ಘಕಾಲಿಕ ಸಮಸ್ಯೆಗಳಿಂದ ಬಳಲುತ್ತಿರುವ ಯಾರಾದರೂ ಈ 500 ಮಂದಿಯಲ್ಲಿ
ಇದ್ದರೆ, ಅವರ ವರದಿ ತಡವಾದರೆ ಅಪಾಯ ವಾಗುತ್ತದೆ. ಆದರೆ ಒಬ್ಬರ ವರದಿ ಬರಲು ಕನಿಷ್ಠ ಒಂದು ಗಂಟೆ ಸಮಯ ಅಗತ್ಯವಿರುವುದರಿಂದ ಈ ಎಲ್ಲರ ವರದಿಯನ್ನು ವೈದ್ಯರಿಗೆ ತತ್‌ಕ್ಷಣಕ್ಕೇ ನೀಡುವುದೂ ಸಾಧ್ಯವಾಗುವುದಿಲ್ಲ. ಒಟ್ಟು ಪ್ರಕರಣಗಳ ಸಂಖ್ಯೆ ದಿನೇದಿನೆ ಏರುತ್ತಿರುವುದರಿಂದ ಜಿಲ್ಲಾಡಳಿತಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ.
ಕೋವಿಡ್ 19 ಸೋಂಕಿನ ಸರಣಿ
ಗುರುವಾರ ಮೃತಪಟ್ಟ 75 ವರ್ಷದ ವೃದ್ಧೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಎ. 19ರಂದು ಮೃತಪಟ್ಟ ಆಕೆಯ ಸೊಸೆಯೂ ಅದೇ ಆಸ್ಪತ್ರೆಗೆ ಬಂದು ಹೋಗಿದ್ದವರು. ಕೋವಿಡ್ 19 ದೃಢಪಟ್ಟು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 67 ವರ್ಷದ ವೃದ್ಧೆ ಈ ಇಬ್ಬರು ಮೃತರ ನೆರೆ ಮನೆಯವರು. 67 ವರ್ಷದ ವೃದ್ಧೆಯ ಪುತ್ರಿಗೆ ತಾಯಿಯಿಂದಲೇ ಸೋಂಕು ತಗಲಿದೆ. ಸೋಮವಾರ ಪತ್ತೆಯಾದ ಪ್ರಕರಣದಲ್ಲಿ 80 ವರ್ಷದ ವೃದ್ಧೆಯೂ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಕೋವಿಡ್ 19 ದೃಢಪಟ್ಟ ಆಕೆಯ ಪುತ್ರ ತಾಯಿಯನ್ನು ನೋಡಿಕೊಳ್ಳಲೆಂದು ಅದೇ ಆಸ್ಪತ್ರೆಯಲ್ಲಿದ್ದವರು. ಆ ಮೂಲಕ ಒಂದೇ ಆಸ್ಪತ್ರೆಯ ಮುಖಾಂತರ ಮೂರು ಕುಟುಂಬಗಳ ತಲಾ ಇಬ್ಬರಿಗೆ ಸೋಂಕು ತಗಲಿದಂತಾಗಿದೆ.
ಬೆಂಗಳೂರಿಗೆ ಕಳುಹಿಸಲು ಚಿಂತನೆ
ಕೋವಿಡ್ 19 ಪರೀಕ್ಷೆ ಪ್ರಯೋಗಾಲಯದಲ್ಲಿ ಒತ್ತಡ ತೀರಾ ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಪರೀಕ್ಷೆಗೆ ಬರುವ ಗಂಟಲ ದ್ರವ ಮಾದರಿಯ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿಗೂ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲು ಚಿಂತಿಸಲಾಗುತ್ತಿದೆ.
– ಡಾ| ರಾಮಚಂದ್ರ ಬಾಯರಿ,
ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.