ಮತ್ತೆ ಬಹುಭಾಷಾ ಚಿತ್ರದಲ್ಲಿ ಯಶ್
Team Udayavani, Apr 28, 2020, 9:54 AM IST
ಸ್ಟಾರ್ ನಟರ ಸುತ್ತ ಒಂದಲ್ಲ ಒಂದು ಸುದ್ದಿಗಳು ಓಡಾಡುತ್ತಲೇ ಇರುತ್ತವೆ. ಆ ಸುದ್ದಿ ಎಲ್ಲಿಂದ ಹುಟ್ಟುತ್ತದೆ, ಅದರ ಮೂಲ ಎಲ್ಲಿದೆ ಎಂದು ಹುಡುಕೋದು ಸ್ವಲ್ಪ ಕಷ್ಟವೇ. ಆದರೆ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನ ಸಿನಿಮಾ ಕುರಿತಾದ ಸುದ್ದಿಗಳನ್ನು ಸಖತ್ ಎಂಜಾಯ್ ಮಾಡುತ್ತಾರೆ. ಈಗ ಯಶ್ ಸುತ್ತ ಮತ್ತೂಂದು ಸುದ್ದಿ ಹರಿದಾಡುತ್ತಿದೆ. ಅದು ಅವರ ಹೊಸ ಸಿನಿಮಾದ ಸುದ್ದಿ. ಸದ್ಯ ಯಶ್ ಕೆಜಿಎಫ್ -ನಲ್ಲಿ ತೊಡಗಿದ್ದಾರೆ. ಲಾಕ್ ಡೌನ್ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ಚಿತ್ರೀಕರಣ ಪೂರ್ಣಗೊಳ್ಳುತ್ತಿತ್ತು. ಆದರೆ, ಈಗ ಯಶ್ ತಮ್ಮ ಮನೆಯಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.
ಈ ಸಮಯದಲ್ಲಿ ಅವರ ಮುಂದಿನ ಚಿತ್ರದ ಕುರಿತಾದ ಸುದ್ದಿಯೊಂದು ಕೇಳಿಬಂದಿದೆ. ಹೌದು, ಕೆಜಿಎಫ್-2 ಬಿಡುಗಡೆ ಬಳಿಕ ಯಶ್ ಮತ್ತೆ ಬಹುಭಾಷಾ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಈಗಾಗಲೇ ಮಾತುಕತೆ ಕೂಡಾ ನಡೆದಿದೆ ಎಂಬ ಸುದ್ದಿಯಂತೂ ಜೋರಾಗಿ ಕೇಳಿಬರುತ್ತಿದೆ. ಇಷ್ಟೇ ಅಲ್ಲ, ಈ ಸಿನಿಮಾ ಕುರಿತಾದ ನಾಯಕಿಯ ವಿಚಾರ ಮತ್ತಷ್ಟು ಸೌಂಡ್ ಮಾಡುತ್ತಿದೆ. ಅದು ತಮನ್ನಾ ಭಾಟಿಯಾ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ತಮನ್ನಾ ಯಶ್ ಅವರ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ. ಈಗಾಗಲೇ ತಮನ್ನಾ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಕೆಜಿಎಫ್ ಚಿತ್ರದ ಹಾಡೊಂದರಲ್ಲಿ ತಮನ್ನಾ ಕಾಣಿಸಿಕೊಂಡಿದ್ದರು.
ಆದರೆ, ಈ ಬಾರಿ ನಾಯಕಿಯಾಗಿ ಯಶ್ ಜೊತೆ ನಟಿಸಲಿದ್ದಾರೆನ್ನಲಾಗಿದೆ. ಆದರೆ, ಈ ಬಗ್ಗೆ ಯಶ್ ಆಗಲಿ, ಅವರ ಹೊಸ ಸಿನಿಮಾಕ್ಕೆ ಸಂಬಂಧ ಪಟ್ಟವರಾಗಲಿ ಮಾತನಾಡಿಲ್ಲ. ಆದರೆ, ಯಶ್ ಮುಂದಿನ ಸಿನಿಮಾ ಕುರಿತಾಗಿ ಚರ್ಚೆಯಾಗುತ್ತಿರೋದಂತೂ ನಿಜ. ಸದ್ಯ ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಚಿತ್ರದಲ್ಲಿ ಕೆಜಿಎಫ್ 2 ಕೂಡಾ ಒಂದು. ಈಗಾಗಲೇ ಬಿಡುಗಡೆಯಾಗರುವ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಮೂಲಕ ಯಶ್ ಅವರಿಗೆ ಪರಭಾಷೆಯಲ್ಲೂ ಅಭಿಮಾನಿಗಳು ಸಂಘಗಳು ಹುಟ್ಟಿಕೊಂಡಿವೆ. ಈಗ ಚಾಪ್ಟರ್ 2 ಕೂಡಾ ಮುಗಿದಿದ್ದು, ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಈ ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.