ನೀತು ಕಣ್ಣಲ್ಲಿ ರಾಜಕೀಯ ಕನಸು!
Team Udayavani, Apr 28, 2020, 10:26 AM IST
ಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬ ನಟ-ನಟಿಯರಿಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು. ಈ ಮೂಲಕ ಕಲಾವಿದರಾಗಿ ತೃಪ್ತಭಾವ ಪಡಬೇಕು ಎಂಬ ಆಸೆ ಇರುತ್ತದೆ. ಹಾಗಾಗಿಯೇ ಬೇರೆ ಬೇರೆ ಪಾತ್ರಗಳ ತಲಾಶ್‌ನಲ್ಲಿರುತ್ತಾರೆ. ನಟಿ ನೀತು ಕೂಡಾ ಇಂತಹದ್ದೇ ಆಸೆಯಿಂದಲೇ ಹೊಸ ಪಾತ್ರಗಳತ್ತ ಎದುರುನೋಡುತ್ತಿರುತ್ತಾರೆ. ಈಗ ಅವರಿಗೆ ಸಿಕ್ಕಿರುವ ಪಾತ್ರವೊಂದರ ಕುರಿತು ನೀತು ಎಕ್ಸೈಟ್ ಆಗಿದ್ದಾರೆ.
ಹೌದು, ನೀತು 1888 ಎಂಬ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ರಾಜಕಾರಣಿಯಾಗಬೇಕೆಂದು ಕನಸು ಕಂಡು, ಆ ನಿಟ್ಟಿನಲ್ಲಿ ಸಾಗುವ ಪಾತ್ರ ಮಾಡುತ್ತಿದ್ದಾರಂತೆ. ಈ ಪಾತ್ರ ನೀತು ಅವರಿಗೆ ತುಂಬಾ ಖುಷಿ ನೀಡಿದೆಯಂತೆ. ಸಾಮಾನ್ಯವಾಗಿ ನಟಿಯರಿಗೆ ಚಿತ್ರರಂಗದಲ್ಲಿ ಹೆಚ್ಚು ವರ್ಷ ಅವಕಾಶಗಳು ಸಿಗೋದಿಲ್ಲ ಎಂಬ ಮಾತಿದೆ. ಆದರೆ, ನೀತು ವಿಷಯದಲ್ಲಿ ಅದು ಸುಳ್ಳಾಗಿದೆ.
ನೀತು ಕನ್ನಡ ಚಿತ್ರರಂಗ ಪ್ರವೇಶಿಸಿ ಹತ್ತು ವರ್ಷ ಕಳೆದಿದೆ. ಈ ಹತ್ತು ವರ್ಷಗಳಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿದ್ದಾರೆ. ಸೋಲು-ಗೆಲುವು, ಕೆರಿಯರ್‌ನಲ್ಲಾಗುವ ಏರಿಳಿತಗಳನ್ನು ನೋಡಿದ್ದಾರೆ. ಆದರೆ, ನೀತು ಮಾತ್ರ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾ ಬಂದಿದ್ದಾರೆ. ಇನ್ನು, 1888 ಎಂಬ ಟೈಟಲ್ ಕೂಡಾ ಭಿನ್ನವಾಗಿದೆ. ಅದಕ್ಕೆ ಕಾರಣವೇನು ಎಂಬುದನ್ನು ತೆರೆಮೇಲೆಯೇ ನೋಡಬೇಕು. ಈ ಚಿತ್ರದ ಟೀಸರ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದ್ದು, ಈ ಬಗ್ಗೆ ನಟಿ ನೀತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಚಿತ್ರದ ಟೀಸರ್ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ನಟಿ ನೀತು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಸಾಫ್ಟ್ವೇರ್ ಮಂದಿ ಸೇರಿಕೊಂಡು ಮಾಡಿದ್ದಾರೆ. ಚಿತ್ರದ ಕಥೆ ಬಹುತೇಕ ನೀತು ಸುತ್ತವೇ ಸುತ್ತುವುದರಿಂದ ಈ ಸಿನಿಮಾ ಮೇಲೆ ನೀತು ಅವರ ನಿರೀಕ್ಷೆ ಕೂಡಾ ಹೆಚ್ಚಿದೆ.
ಈ ನಡುವೆಯೇ ನೀತು ಒಂದಷ್ಟು ಮಂದಿ ಸಮಾನ ಮನಸ್ಕರ ಜೊತೆ ಸೇರಿಕೊಂಡು ಕೋವಿಡ್ 19 ದಿಂದ ಸಂಕಷ್ಟಕ್ಕೀಡಾಗಿರುವವರಿಗೆ ಆಹಾರದ ವ್ಯವಸ್ಥೆ ಕೂಡಾ ಮಾಡುತ್ತಾ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.