ಪಾತ್ರೆ ತೊಳೆದ ನಟ ಶ್ರೀಮುರಳಿ
ತೊಳೆಯದಿದ್ದರೆ ಊಟ ಕೊಡಲ್ಲ ಅಂದರಂತೆ ಅವರ ಶ್ರೀಮತಿ!
Team Udayavani, Apr 28, 2020, 10:38 AM IST
ಲಾಕ್ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದಾರೆ. ಈ ಸಮಯದಲ್ಲಿ ಸಿನಿಮಾ ಸ್ಟಾರ್ಗಳು ಪ್ರತಿ ದಿನ ಒಂದಲ್ಲ ಒಂದು ಸಿನಿಮಾ ಚಟುವಟಿಕೆಯಲ್ಲೇ ಇದ್ದಾರೆ. ಹಲವರು ಸಿನಿಮಾ ಕಾರ್ಮಿಕರಿಗೆ, ಪೋಷಕ ಕಲಾವಿದರಿಗೆ ಇತರೆ ವಿಭಾಗದ ದಿನಗೂಲಿ ನೌಕರರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸದ್ಯಕ್ಕೆ ಒಂದಷ್ಟು ಸಿನಿಮಾ ನೋಡುವುದು, ಪುಸ್ತಕ ಓದುವುದು ಸೇರಿದಂತೆ ಹಲವು ಕೆಲಸಗಳಲ್ಲಿ ನಿರತರಾಗಿದ್ದಾರೆ. ಇತ್ತ, ನಟ ಶ್ರೀಮುರಳಿ ಕೂಡ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಹೌದು, ನಿತ್ಯವೂ ಒಂದಿಲ್ಲೊಂದು ಕಾರ್ಯಕ್ರಮಗಳು, ಚಿತ್ರೀಕರಣ ಅದು ಇದೂ ಅಂತ ಬಿಝಿಯಾಗಿರುತ್ತಿದ್ದ ಶ್ರೀಮುರಳಿ, ಲಾಕ್ ಡೌನ್ನಿಂದಾಗಿ ಮನೆಯಲ್ಲೇ ಇದ್ದಾರೆ. ಅವರು ತಮ್ಮ ಮನೆಯಲ್ಲೇ ಮಕ್ಕಳು, ಮಡದಿ, ಅಪ್ಪ, ಅಮ್ಮನೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವ ಫೋಟೋವೊಂದನ್ನು ಪೋಸ್ಟ್ ಮಾಡಿ, ಪಾತ್ರೆ ತೊಳೆಯದಿದ್ದರೆ ಹೆಂಡತಿ ಊಟ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾನು ಪಾತ್ರೆ ತೊಳೆಯುತ್ತಿದ್ದೇನೆ. ಇದು ಬಹಳ ಕಷ್ಟದ ಕೆಲಸ ನನಗೆ . ಬೆವರು ಬಂದು ಬಿಟ್ಟಿದೆ ಎಂದು ಬರೆದುಕೊಂಡಿದ್ದಾರೆ ಶ್ರೀಮುರಳಿ.
ಸದ್ಯಕ್ಕೆ ಶ್ರೀಮುರಳಿ ಹಂಚಿಕೊಂಡಿರುವ ಫೋಟೋ ಮತ್ತು ಬರಹಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಗುತ್ತಿದೆ. ಅದೇನೆ ಇರಲಿ, ಲಾಕ್ಡೌನ್ ಎಲ್ಲರಿಗೂ ಒಂದೊಂದು ಪಾಠ ಕಲಿಸಿದೆ. ಅದರಲ್ಲೂ ಮನೆಯ ಹೆಣ್ಣುಮಕ್ಕಳ ಕಷ್ಟ ಏನು ಎಂಬುದನ್ನೂ ಅರಿತುಕೊಳ್ಳುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.