ಪ್ರಶಾಂತ ಮನಃಸ್ಥಿತಿಗೆ ಬೇಕು ಪ್ರಾಣಾಯಾಮ
Team Udayavani, Apr 28, 2020, 11:45 AM IST
ಸಾಂದರ್ಭಿಕ ಚಿತ್ರ
ಮನಸ್ಸೆಂಬ ಮರ್ಕಟವನ್ನು ಕಟ್ಟಿಹಾಕಲು ಯೋಗದಿಂದ ಸಾಧ್ಯವಿದೆ. ಅದಕ್ಕೆ ಹೀಗೆ ಮಾಡಿ: ವಜ್ರಾಸನದಲ್ಲಿ ಕೂತು, ಹಾಗೇ ಕಣ್ಣು ಮುಚ್ಚಿ. ಗಾಳಿ ನೇರ ನಿಮ್ಮ ಮುಖಕ್ಕೆ ಬರುವಂತಿರಲಿ. ಆರಂಭದಲ್ಲಿ ನಾಲಿಗೆಯನ್ನು ಸುರಳಿಯಾಕಾರ ಮಾಡಿ, ಗಾಳಿಯನ್ನು ಒಳಗೆ ಎಳೆದುಕೊಳ್ಳಿ. ನಾಲಿಗೆ ತುದಿಯಿಂದ ಗಂಟಲವರೆಗಿನ ಭಾಗ ತಣ್ಣಗಾಗುತ್ತದೆ. ಹೀಗೆ, ನಾಲ್ಕೈದು ಸಲ ಮಾಡಿದರೆ, ನಾಲಿಗೆ ಸೋಸಿದ ಶುದ್ಧ ಗಾಳಿ, ನೇರವಾಗಿ ನಿಮ್ಮ ಶ್ವಾಸಕೋಶಕ್ಕೆ ತಲುಪುತ್ತದೆ. ಆನಂತರ, ಸುಖ ಪ್ರಾಣಾಯಾಮ ಮಾಡಲು ಶುರುಮಾಡಿ. ಅಂದರೆ, ಬಲಮೂಗಿಂದ ಗಾಳಿಯನ್ನು ಎಳೆದುಕೊಂಡು, ಎಡ ಮೂಗಿಂದ ಬಿಡುವುದು. ಇದನ್ನು ಕಣ್ಣು ಮುಚ್ಚಿಯೇ ಮಾಡಬೇಕು.
ಗಾಳಿಯನ್ನು ಒಳಕ್ಕೆ ಎಳೆದುಕೊಳ್ಳುವುದನ್ನು ನೀವು ಫಿಲ್ ಮಾಡಬೇಕು. ಹಾಗೆ ಎಳೆದುಕೊಂಡ ಉಸಿರನ್ನು, ನಿಧಾನಕ್ಕೆ ಹೊರಗೆ ಹಾಕಿ. ಸುಮಾರು 10-15 ಸಲ ಈ ರೀತಿಮಾಡುತ್ತಾ ಹೋಗಿ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕಣ್ಣು ಬಿಡಬಾರದು.
ಧ್ಯಾನಕ್ಕೆ ಕೂರುವ ಮೊದಲೇ, ನನ್ನ ತಲೆಯಲ್ಲಿ ಯಾವುದೇ ಯೋಚನೆ ಇಲ್ಲ. ಮನಸ್ಸು ಪೂರ್ತಿ ಖಾಲಿಯಾಗಿದೆ ಅಂತ ಮನಸ್ಸಿಗೊಂದು ಲಕ್ಷ್ಮಣ ರೇಖೆ ಹಾಕಿಕೊಳ್ಳೋದು ಒಳ್ಳೆಯದು. ನೀವು ಪ್ರಾಣಾಯಾಮ ಮಾಡುವಾಗಲೇ, ಎಲ್ಲ ಯೋಚನೆಗಳೂ ನಿಮ್ಮನ್ನು ಹುಡುಕಿ ಬರುತ್ತವೆ. ಆಗ, ನಾಳೆ ಬಾ ಅಂತ ಹೇಳುತ್ತಿರಬೇಕು. ಆರಂಭದಲ್ಲಿ ಇದು ಕಿರಿಕಿರಿ ಅನಿಸಿದರೂ, ನಂತರ ರೂಢಿಯಾಗುತ್ತದೆ. ಎಷ್ಟು ಹೊತ್ತು ಪ್ರಾಣಾಯಾಮ ಮಾಡುತ್ತೀರೋ, ಅಷ್ಟು ಹೊತ್ತೂ ಸಮಸ್ಯೆಗಳಿಂದ ದೂರ ಉಳಿಯಬೇಕು. ಆಗ ನೋಡಿ, ಮನಸ್ಸು ನೀವು ಹೇಳಿದಂತೆ ಕೇಳುತ್ತದೆ. ಕೋತಿಯ ರೀತಿ ಹಾರುವುದಿಲ್ಲ. ಗೊತ್ತಲ್ಲ; ಮನಸ್ಸನ್ನು ಗೆದ್ದವರು, ಜಗತ್ತನ್ನೇ ಗೆಲ್ಲಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.