ಉ.ಕೊರಿಯಾಕ್ಕೆ ಮಹಿಳೆ ಆಡಳಿತ?
Team Udayavani, Apr 28, 2020, 1:15 PM IST
ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಹಲವು ರೀತಿಯ ವದಂತಿಗಳು ಚಾಲ್ತಿಯಲ್ಲಿವೆ. ಪೂರಕವಾಗಿ ಉನ್ ಸಹೋದರಿ ಕಿಮ್ ಯೋ ಜಾಂಗ್ (30) ಅವರೇ ಮುಂದಿನ ಆಡಳಿತದ ನೇತೃತ್ವ ವಹಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಟ್ರಂಪ್ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆಗೆ ನಡೆದ ಮಾತು ಕತೆಗಳ ಅಜೆಂಡಾ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ಜಾಂಗ್ ವಹಿಸಿದ್ದರು.
ಹೀಗಾಗಿ, ಪುರುಷರ ಪ್ರಧಾನ ವ್ಯವಸ್ಥೆಯನ್ನು ಮುರಿದು ಕಿಮ್ ಯೋ ಜಾಂಗ್ ಆಡಳಿತದ ನೇತೃತ್ವ ವಹಿಸಿಕೊಳ್ಳುವುದು ಖಚಿತವಾಗುತ್ತ ಸಾಗಿದೆ. ಇದರ ಹೊರತಾಗಿಯೂ ಎಚ್ಚರಿಕೆಯ ಮಾತುಗಳು ಕೇಳಿಬಂದಿವೆ. ಉತ್ತರ ಕೊರಿಯಾದಲ್ಲಿ ಜಮೀನ್ದಾರಿ ವ್ಯವಸ್ಥೆಯ ಆಡಳಿತ ಇರುವುದರಿಂದ ಮತ್ತು ಪುರುಷ ಪ್ರಧಾನವಾಗಿರುವ ವ್ಯವಸ್ಥೆ ಮಹಿಳೆ ನೇತೃತ್ವ ವಹಿಸುವುದಕ್ಕೆ ಆಕ್ಷೇಪ ವ್ಯಕ್ತವಾಗಬಹುದು. ಒಂದು ವೇಳೆ ಕಿಮ್ ಯೋ ನೇತೃತ್ವ ವಹಿಸಿದರೂ ಅಧಿಕಾರ ಸೀಮಿತವಾಗಿರಬಹುದೆಂದು ಕೊರಿಯಾ ವಿವಿಯಲ್ಲಿ ಉತ್ತರ ಕೊರಿಯಾ ವಿಚಾರಗಳ ಪ್ರಾಧ್ಯಾಪಕ ಯೂ ಹೋ-ಯೋಲ್ ಅಭಿಪ್ರಾಯಪಟ್ಟಿದ್ದಾರೆ.
2011ರಲ್ಲಿ ಕಿಂಗ್ ಜಾಂಗ್ ಉನ್ ತಂದೆಯ ನಿಧನದ ಬಳಿಕ ಆಡಳಿತ ವಹಿಸಿಕೊಂಡ ಬಳಿಕ ಅವರು ಸುಸೂತ್ರವಾಗಿ ಆಡಳಿತ ನಡೆಸಬಲ್ಲರೇ ಎಂಬ ಸಂಶಯ ವ್ಯಕ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.