ಮಂಗನ ಕಾಯಿಲೆ ಭೀತಿ, ಅರಣ್ಯ ಇಲಾಖೆ ತಾತ್ಸಾರ?
Team Udayavani, Apr 28, 2020, 5:36 PM IST
ಸಾಂದರ್ಭಿಕ ಚಿತ್ರ
ಬಂಗಾರಪೇಟೆ: ತಾಲೂಕಿನ ಬೂದಿಕೋಟೆ ಹೋಬಳಿಯ ಕೋಡಗುರ್ಕಿ ಗ್ರಾಮದಲ್ಲಿ ಮಂಗಗಳಿಗೆ ಕೆಮ್ಮು ಹಾಗೂ ಸುಸ್ತು ಕಂಡು ಬಂದಿದ್ದು, ಕನಿಷ್ಠ ಸೌಜನ್ಯಕ್ಕಾದರೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮಂಗಗಳು ವಾಸವಾಗಿವೆ. ಒಂದು ವಾರದಿಂದಲೂ ಅತಿಯಾದ ಕೆಮ್ಮು ಹಾಗೂ ನಿತ್ರಾಣದಿಂದ ಅಸ್ವಸ್ತಗೊಂಡಿವೆ. ಈ ಮಂಗಗಳು ಆಹಾರ ಹಾಗೂ ನೀರನ್ನು ಸೇವಿಸುತ್ತಿಲ್ಲ. ತಲೆ ತಿರುಗಿ ಎಲ್ಲೆಂದರಲ್ಲಿ ಮಲಗಿದ್ದು, ಜನರು ಓಡಿಸಲು ಪ್ರಯತ್ನ ಮಾಡಿದರೂ ಯಾವುದೇ ಮಂಗಗಳು ಎದ್ದು ಹೋಗುತ್ತಿಲ್ಲ. ಆದರೂ ತಾಲೂಕು ಅರಣ್ಯಾಧಿಕಾರಿ ಸುಧಾಕರ್ ಅವರು ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ತಾಲೂಕಿನ ಬೂದಿಕೋಟೆ ಹೋಬಳಿಯ ಅರಣ್ಯ ಪ್ರದೇಶವು ಮಾಲೂರು ತಾಲೂಕಿನ ಅರಣ್ಯ ಇಲಾಖೆಗೆ ಸೇರುವುದರಿಂದ ಮಾಲೂರು ತಾಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿ ಈ ಕಡೆ ತಿರುಗಿ ನೋಡಲೇ ಇಲ್ಲ. ಕೋಡ ಗುರ್ಕಿಯಲ್ಲಿ ಮಂಗಗಳ ಸ್ಥಿತಿ ಚಿಂತಜನಕವಾಗಿದ್ದರೂ ಕೋವಿಡ್ ವೈರಸ್ ಹೆಸರಿನಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಸದ್ಯಕ್ಕೆ 20ಕ್ಕೂ ಹೆಚ್ಚು ಮಂಗಗಳು ಸಾವಿನ ಸ್ಥಿತಿಯನ್ನು ಎದುರಿಸುತ್ತಿರುವುದರಿಂದ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ತುರ್ತುಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.