ಗ್ರಾಮಗಳಲ್ಲಿ ಗ್ರಾಮೀಣ ಕಾರ್ಯಪಡೆ ನಿಗಾ
ಕೋವಿಡ್-19 ವೈರಸ್ ಹಿಮ್ಮೆಟ್ಟಿಸುವ ಕಾರ್ಯ ನಿರಂತರ
Team Udayavani, Apr 29, 2020, 5:57 AM IST
ಸಾಂದರ್ಭಿಕ ಚಿತ್ರ..
ಉಡುಪಿ ಜಿಲ್ಲೆ ಹಸುರು ವಲಯಕ್ಕೆ ಬಂದಿದ್ದರೂ ಕೋವಿಡ್ ಜಾಗೃತಿ, ಮುನ್ನೆಚ್ಚರಿಕೆ, ಸಾಮಾಜಿಕ ಅಂತರ ಮೊದಲಾದವು ಮೊದಲಿನಂತೆಯೇ ಮುಂದುವರಿಯಲಿದೆ. ಪ್ರತಿ ಗ್ರಾಮಮಟ್ಟದಲ್ಲಿ ಇದರ ಮೇಲುಸ್ತುವಾರಿಗಾಗಿ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಿತಿ ಪ್ರತಿ ಆಗು ಹೋಗುಗಳ ಬಗ್ಗೆ ನಿಗಾ ವಹಿಸುತ್ತದೆ.
ಉಡುಪಿ: ಕೋವಿಡ್-19 ವೈರಸ್‌ನಿಂದ ಜನರನ್ನು ರಕ್ಷಿಸಲು ಹಳ್ಳಿಗಳಲ್ಲಿ ಬಿಗಿಯಾದ ಮುಂಜಾಗ್ರತಾ ಕ್ರಮಗಳನ್ನು ಗ್ರಾಮೀಣ ಕಾರ್ಯಪಡೆ ನಿರ್ವಹಿಸುತ್ತಿವೆ.
ಕೋವಿಡ್-19 ನಿಯಂತ್ರಿಸುವ ಉದ್ದೇಶ ದಿಂದ ಸರಕಾರದ ಸೂಚನೆಯಂತೆ ಪ್ರತಿ ಗ್ರಾ.ಪಂ., ಕಂದಾಯ ಗ್ರಾಮಗಳಲ್ಲಿ ಗ್ರಾಮೀಣ ಕಾರ್ಯಪಡೆ ರಚನೆಯಾ ಗಿದೆ. ಗ್ರಾ.ಪಂ. ಅಧ್ಯಕ್ಷರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪಿಡಿಒ ಕಾರ್ಯದರ್ಶಿ ಯಾಗಿರುತ್ತಾರೆ. ಪಂಚಾಯತ್ ಉಪಾ ಧ್ಯಕ್ಷರು, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಗ್ರಾಮದ ಬೀಟ್ ಪೊಲೀಸ್, ಗ್ರಾಮದ ಆರೋಗ್ಯ ಕೇಂದ್ರದ ಸಿಬಂದಿ, ಅಂಗನ ವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನೋಂದಾ ಯಿತ ಸ್ಥಳಿಯ ವೈದ್ಯರು ಸಮಿತಿಯ ಸದಸ್ಯರಾಗಿರುವರು. ಗ್ರಾ.ಪಂ. ಮತ್ತು ಕಂದಾಯ ಗ್ರಾಮಗಳ ಹಳ್ಳಿಗಳಲ್ಲಿ ತಂಡವು ಸುತ್ತಾಡಿ ಜನರು ಅನಾವಶ್ಯಕವಾಗಿ ಮನೆಗಳಿಂದ ಹೊರ ಬರದಂತೆ ನೋಡಿ ಕೊಳ್ಳುತ್ತಿದ್ದಾರೆ.
ಕಾರ್ಯಪಡೆಯ ಕಾರ್ಯಗಳೇನು?
ಗ್ರಾಮಗಳಲ್ಲಿ ಮದುವೆ ಇನ್ನಿತರ ಕಾರ್ಯಗಳಿಗೆ ಜನರು ಗುಂಪುಗೂಡದಂತೆ ಕ್ರಮವಹಿಸುವುದು. ಸಾರ್ವಜನಿಕ ಸ್ಥಳ ಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಗ್ರಾ.ಪಂ. ಕಚೇರಿ, ಬಸ್ ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೀರು ವ್ಯವಸ್ಥೆ ಕಲ್ಪಿಸುವುದು, ಮೂಲಕ ನಿಯಮ ಪಾಲನೆ ಮಾಡುವಂತೆ ಮನವೊಲಿಸುವ ಕಾರ್ಯ ಸಮಿತಿ ಮಾಡುತ್ತಿದೆ.
ಅನುದಾನ ಬಳಸಲು ಜಿ.ಪಂ. ಅವಕಾಶ
ಕೋವಿಡ್ -19 ನಿಯಂತ್ರಿಸುವುದಕ್ಕಾಗಿ ಗ್ರಾ.ಪಂ.ನ 14ನೇ ಹಣಕಾಸು ಬಳಕೆಗೆ ಜಿ.ಪಂ. ಅವಕಾಶ ನೀಡಿದೆ. ಕ್ರಿಯಾಯೋಜನೆ ಬದಲಿಸಿಕೊಂಡು ಹಣವನ್ನು ಪಡಿತರ ಇಲ್ಲದವರಿಗೆ, ವಲಸೆ ಕಾರ್ಮಿಕರಿಗೆ, ನಿರ್ಗತಿಕರಿಗೆ ದಿನಸಿ, ಆಹಾರ ಒದಗಿಸಲು ಬಳಸಿಕೊಳ್ಳಬಹುದಾಗಿದೆ. ಇನ್ನುಳಿದ ಕೆಲ ಅನುದಾನದಲ್ಲಿ ಬ್ಲೀಚಿಂಗ್ ಪೌಡರ್, ಮಾಸ್ಕ್ ಸ್ಯಾನಿಟೈಸರ್, ಕೈ-ಕಾಲುಗಳಿಗೆ ರಕ್ಷಣಾ ಕವಚ, ಹ್ಯಾಂಡ್ ವಾಷ್ ಲಿಕ್ವಿಡ್, ಖರೀದಿ ಮಾಡಬೇಕಿದೆ.
ಕಾರ್ಯಪಡೆ ಆದ್ಯತೆಯ ಕೆಲಸಗಳೇನು?
1.ಸ್ವಚ್ಚತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ
2 ದಿನಸಿ ಅಂಗಡಿ ಓಪನ್ ಮಾಡಿಸಿ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದು.
3 ಅಗತ್ಯ ಪಡಿತರ ಸಾಮಗ್ರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದು.
4 ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುವಂತೆ ತಿಳಿ ಹೇಳುವುದು.
5 ಬೇರೆ ಊರುಗಳಿಂದ ಬರುವ ಅಧಿಕಾರಿಗಳಿಗೆ ಊಟ ನೀಡುವುದರ ಜತೆಗೆ ನೈತಿಕ ಬೆಂಬಲ ನೀಡುವುದು.
6 ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಹಳ್ಳಿಗಳಿಗೆ ಬಂದಿರುವ ಮತ್ತು ಬರುತ್ತಿರುವವರ ಬಗ್ಗೆ ನಿಗಾ ವಹಿಸಿ, ಅವರ ಆರೋಗ್ಯ ತಪಾಸಣೆ ಮಾಡಿಸುವುದು. ಹೋಂ ಕ್ವಾರಂಟೈನ್‌ಗೆ ಸೂಚಿಸುವುದು.
6 ಹೊರಗಿನಿಂದ ಹಳ್ಳಿಗಳಿಗೆ ಬಂದಿರುವವರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವುದು.
6 ಧ್ವನಿವರ್ಧಕದ ಮೂಲಕ ಕೋವಿಡ್-19 ಬಗ್ಗೆ ಪ್ರಚಾರ,ಜಾಗೃತಿ ಮೂಡಿಸುವುದು.
ಹಣಕಾಸಿನ ನೆರವು
ಸರಕಾರ ಬಿಡುಗಡೆಗೊಳಿಸಿದ 20,000 ರೂ ಮೊತ್ತದ ಹಣವನ್ನು ಗ್ರಾಮ ಮಟ್ಟದ ಪ್ರತಿ ಟಾಸ್ಕ್ ಪೋರ್ಸ್ ಕಮಿಟಿಗೆ ಬಳಕೆಗೆ ನೀಡಿದೆ. ಹೆಚ್ಚುವರಿ ಹಣಕಾಸಿನ ನೆರವನ್ನು ಕೂಡ ಬಳಸಿಕೊಳ್ಳಲಾಗಿದೆ. ಎಸ್‌ಬಿಎಂ ಅಡಿಯಲ್ಲಿ ಗ್ರಾ.ಪಂ. ಕಾರ್ಮಿಕರು, ಸ್ವಚ್ಚತೆ ಕಾರ್ಮಿಕರಿಗೆ ಅಗತ್ಯ ಬಳಕೆಗೆ ಸ್ಯಾನಿಟೈಸರ್, ಮಾಸ್ಕ್ , ಕೈಗವಸು ಖರೀದಿ ಹಾಗೂ ಹೆಚ್ಚುವರಿ ಇತರ ಹಣವನ್ನು ಬಳಸಿಕೊಳ್ಳಲು ಗ್ರಾ.ಪಂಗಳಿಗೆ ಸೂಚನೆ ನೀಡಲಾಗಿದೆ.
-ಪ್ರೀತಿ ಗೆಹ್ಲೋಟ್,
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿ.ಪಂ., ಉಡುಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.