ಕೋವಿಡ್ 19 ವೈರಸ್ ವೈರಸ್‌ದಶಾವತಾರ ; ಎ2ಎ ವೈರಾಣು ಪ್ರಭಾವವೇ ಹೆಚ್ಚು
ವುಹಾನ್‌ನಲ್ಲಿ ಕಂಡುಬಂದ ವೈರಸ್‌ನ 10 ರೂಪಾಂತರಗಳ ಗುರುತಿಸಿದ ವಿಜ್ಞಾನಿಗಳು ; ಈ ಪೈಕಿ ಎ2ಎ ಎಂಬುದೇ ಅತ್ಯಂತ ಪ್ರಬಲ ಕಣ.
Team Udayavani, Apr 29, 2020, 6:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಚೀನದಲ್ಲಿ ಮೊದಲು ಕಂಡು ಬಂದ ಕೋವಿಡ್ 19 ವೈರಸ್ 10 ವಿಧಗಳಾಗಿ ರೂಪಾಂತರಗೊಂಡಿದೆ.
ಆ ಪೈಕಿ ಎ2ಎ ಎಂಬ ಒಂದು ವಿಧವು ಜಗತ್ತಿನಾದ್ಯಂತ ಹೆಚ್ಚಿನ ಪ್ರದೇಶಗಳಿಗೆ ಹಬ್ಬುವ ಮೂಲಕ ಪ್ರಬಲ ಕಣವಾಗಿ ಮಾರ್ಪಾಡಾಗಿದೆ ಎಂದು ಭಾರತೀಯ ಸಂಸ್ಥೆಯೊಂದರ ಜಾಗತಿಕ ಅಧ್ಯಯನ ವರದಿ ಹೇಳಿದೆ.
ಪಶ್ಚಿಮ ಬಂಗಾಲದ ಕಲ್ಯಾಣಿಯಲ್ಲಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಬಯೋ ಮೆಡಿಕಲ್ ಜೆನಾಮಿಕ್ಸ್ ಎಂಬ ಸಂಸ್ಥೆಯ ನಿಧಾನ್ ಬಿಸ್ವಾಸ್ ಮತ್ತು ಪಾರ್ಥ ಮಜುಂದಾರ್ ಅವರೇ ಈ ಅಧ್ಯಯನ ನಡೆಸಿದವರು. ಈ ಅಧ್ಯಯನ ವರದಿಯು ಸದ್ಯದಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಟಿಸುವ ವೈದ್ಯಕೀಯ ಜರ್ನಲ್ ನಲ್ಲಿ ಪ್ರಕಟವಾಗಲಿದೆ.
ಎ2ಎ ರೂಪಾಂತರದ ವೈರಸ್ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವೇಗವಾಗಿ ಮಾನವನ ಶ್ವಾಸಕೋಶದೊಳಕ್ಕೆ ಪ್ರವೇಶ ಪಡೆಯುತ್ತದೆ. ಈ ಹಿಂದೆ ಅಂದರೆ 10 ವರ್ಷಗಳ ಹಿಂದೆ ವಿಶ್ವದ 800 ಮಂದಿಯನ್ನು ಬಲಿಪಡೆದಿದ್ದ ಸಾರ್ಸ್-ಕೋವ್ ವೈರಸ್ ಕೂಡ ಶ್ವಾಸಕೋಶವನ್ನು ಕ್ಷಿಪ್ರವಾಗಿ ಪ್ರವೇಶಿಸುವ ಸಾಮರ್ಥ್ಯ ಹೊಂದಿತ್ತಾದರೂ, ಅದು ಎ2ಎಯಷ್ಟು ಪ್ರಬಲವಾಗಿರಲಿಲ್ಲ ಎಂದೂ ವರದಿ ಹೇಳಿದೆ.
ಈ ವರದಿಯು ಕೋವಿಡ್ 19 ವೈರಸ್ ಗೆ ಲಸಿಕೆ ಅಭಿವೃದ್ಧಿಪಡಿಸುವವರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ.
ಕೋವಿಡ್ 19 ವೈರಸ್ ನ ಪೂರ್ವದ ಹಂತ “0′ ದಿಂದ ಈ ಹತ್ತು ವಿಧಗಳು ಸೃಷ್ಟಿಯಾಗಿವೆ. ಇವುಗಳು ರೂಪಾಂತರಗೊಳ್ಳಲು 4 ತಿಂಗಳು ತೆಗೆದುಕೊಂಡಿವೆ. ಮಾರ್ಚ್ ಅಂತ್ಯದಲ್ಲಿ ಎ2ಎ ವಿಧವು ಜಗತ್ತಿನಾದ್ಯಂತ ಇತರೆ ಎಲ್ಲ ವಿಧಗಳನ್ನೂ ಹಿಂದಿಕ್ಕಿತು.
ಕೋವಿಡ್ 19 ವೈರಸ್ ನ ಪ್ರಬಲ ಹಾಗೂ ಬಲಿಷ್ಠ ರೂಪಾಂತರ ಎಂಬ ಹೆಸರು ಪಡೆಯಿತು ಎಂದು ಮಜುಂದಾರ್ ಹೇಳಿದ್ದಾರೆ. ಜತೆಗೆ, 2019ರ ಡಿಸೆಂಬರ್‌ನಿಂದ 2020ರ ಎಪ್ರಿಲ್ 6ರವರೆಗೆ 55 ದೇಶ ಗಳ 3,600 ಕೋವಿಡ್ 19 ವೈರಸ್ ಸೋಂಕಿತರ ಆರ್‌ಎನ್‌ಎಗಳನ್ನು ಸಂಗ್ರಹಿಸಿ ಈ ಅಧ್ಯಯನ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.