ಹಚ್ಚೆ ಹಾಕಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ
Team Udayavani, Apr 29, 2020, 12:34 PM IST
ಸ್ವೀಡನ್ : ಕೋವಿಡ್-19 ವಿಶ್ವದೆಲ್ಲೆಡೆ ಹಲವು ವಿಚಾರಧಾರೆಗಳನ್ನು, ಗಂಭೀರ ಪರಿಸ್ಥಿತಿಯನ್ನು ನಿಭಾಯಿಸುವ ಮನೋಪ್ರವೃತ್ತಿಯನ್ನು, ದೇಶಕ್ಕೆ ಸಂಕಷ್ಟ ಎದುರಾದಾಗ ಪ್ರಜೆಗಳು ಹೇಗೆ ಸ್ಪಂದಿಸುತ್ತಾರೆ ಎಂಬುದೆಲ್ಲವನ್ನೂ ಪರಿಚಯಿಸುತ್ತಿದೆ.
ಕೆಲವೆಡೆಯಂತೂ ಮುಖ್ಯ ಭೂಮಿಕೆಯಲ್ಲಿ ಕಾರ್ಯಾಚರಿಸುತ್ತಿರುವ ಅಧಿಕಾರಿಗಳ ಮೇಲೆ, ಸಿಬಂದಿ ಮೇಲೆ ಹಲ್ಲೆಯೂ ನಡೆದಿದೆ. ಆದರೆ ಇಂತಹ ವಿಕೃತ ಮನೋಭಾವ ಮೆರೆಯುತ್ತಿರುವ ಒಂದು ಸಮೂಹದ ನಡುವೆ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರ, ದಾದಿಯರ, ಪೊಲೀಸರಅವರ ಕಾರ್ಯ ವೈಖರಿಗೆ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಿರುವ ಜನರೂ ಇದ್ದಾರೆ. ಆದರೆ ಇಲ್ಲೊಬ್ಬ ಸ್ವೀಡನ್ನಿನ ಪ್ರಜೆಯ ಅಭಿನಂದನೆ, ಗೌರವ ಸಲ್ಲಿಕೆ ಬಹಳ ವಿಶೇಷವಾದ ರೀತಿಯಲ್ಲಿ.
ತನ್ನ ದೇಶದ ರಾಜ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಹಚ್ಚೆಯನ್ನು ಹಾಕಿಸಿಕೊಳ್ಳುವ ಮೂಲಕ ತನ್ನ ಗೌರವ ವ್ಯಕ್ತಪಡಿಸಿದ್ದಾನೆ ಸ್ಟಾಕೊØàಮ್‌ನ ಗುಸ್ತಾವ್ ಲಾಯx… ಅಗಬ್ಲಾರ್ಡ್. ಕೋವಿಡ್-19 ವಿರುದ್ಧ ಹೋರಾಡುತ್ತಿರುವ ರಾಜ್ಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ನಿಲ್ಸ… ಆಂಡರ್ಸ್ ಟೆಗ್ನೆಲ್ ಅವರ ಛಾಯಾಚಿತ್ರವನ್ನೇ ತಮ್ಮ ಎಡಗೈಯ ಮೇಲೆ ಹಚ್ಚಿ ಹಾಕಿಸಿಕೊಂಡಿದ್ದಾನೆ ಲಾಯ್ಡ.
ಕಾರ್ಯ ವೈಖರಿಗೆ ಮೆಚ್ಚುಗೆ
“ನನಗೆ ಏನನ್ನಾದರೂ ಒಂದು ಘಟನೆಯನ್ನು ಅಥವಾ ವಸ್ತುವನ್ನು ಪ್ರತಿನಿಧಿಸುವ ಹಚ್ಚೆ ಹಾಕಿಸಿಕೊಳ್ಳಬೇಕೆಂಬ ಆಸೆ ಇತ್ತು. ಹಾಗಾಗಿ ನನ್ನ ಪ್ರಕಾರ ಸದ್ಯ ವಿಶ್ವದೆಲ್ಲೆಡೆ ಹರಡಿರುವ ಕೋವಿಡ್-19 ಜೀವನದ ಒಂದು ಭಾಗ. ಅದರ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಹೋರಾಡುತ್ತಿರುವ ವೈದ್ಯರ ಹಚ್ಚೆ ಹಾಕಿಸಿಕೊಳ್ಳುವುದೇ ಸೂಕ್ತವೆನ್ನಿಸಿತು. ಜೀವನ ಪರ್ಯಾಂತ ಈ ಘಟನೆ ನೆನಪು ಉಳಿಯಲಿದ್ದು, ವೈದ್ಯ ಸಮುದಾಯಕ್ಕೆ ಗೌರವ ಸಲ್ಲಿಸಿದಂತೆಯೂ ಆಗುತ್ತದೆ. ಹಾಗಾಗಿ ಟೆಗ್ನೆಲ್ ಅವರ ಕಾರ್ಯ ವೈಖರಿಯನ್ನು ಮೆಚ್ಚಿ ಈ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆ ಲಾಯ್ಡ.
ಯುರೋಪ್‌ನ ಇತರೆ ದೇಶಗಳಿಗೆ ಹೋಲಿಸಿದ್ದರೆ ಸ್ವೀಡನ್ ಸರಕಾರ ತನ್ನ ದೇಶದಲ್ಲಿ ಬಹಳ ಕಠಿಣ ಲಾಕ್‌ಡೌನ್ ನಿಯಮಗಳನ್ನೇನೂ ಜಾರಿಗೊಳಿಸಿಲ್ಲ. ಹೊರತಾಗಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಹೊಣೆಯನ್ನು ಸಾರ್ವಜನಿಕರ ಮೇಲೆಯೇ ಹೊರಿಸಲಾಗಿತ್ತು. ಜತೆಗೆ ನಿಗದಿತ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿತ್ತು. ಸ್ವೀಡನ್‌ನಲ್ಲಿ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, 2, 355 ಮಂದಿ ಮೃತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.