ಕೆ.ಸಿ.ವ್ಯಾಲಿ ನೀರು ಹರಿಸಿದ್ದಕ್ಕೆ ಗಲಾಟೆ
Team Udayavani, Apr 29, 2020, 12:14 PM IST
ಕೋಲಾರ: ತಾಲೂಕಿನ ಎಸ್.ಅಗ್ರಹಾರ ಕೆರೆಯಲ್ಲಿದ್ದ ಕೆ.ಸಿ.ವ್ಯಾಲಿ ನೀರನ್ನು ಅಧಿಕಾರಿಗಳ ಮತ್ತು ಪೊಲೀಸರ ಬೆಂಗಾವಲಲ್ಲಿ ಕೆರೆಯ ತೂಬುಗಳನ್ನು ತೆಗೆದು ಜನ್ನಘಟ್ಟ ಕೆರೆಗೆ ಹರಿಸಿದ್ದರಿಂದಾಗಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಎಸ್.ಅಗ್ರಹಾರ ಕೆರೆ ಬಳಿ ಆಗಮಿಸಿ ಕೆರೆಯ ತೂಬುಗಳ ಮೂಲಕ ನೀರನ್ನು ಹೊರ ಬಿಟ್ಟರು. ಇದರಿಂದ ಗ್ರಾಮಸ್ಥರು ಅಧಿಕಾರಿಗಳ ಕ್ರಮವನ್ನು ಖಂಡಿಸಿದರು.
ತಾಲೂಕಿನ ಎಸ್. ಅಗ್ರಹಾರ ಕೆರೆಯಲ್ಲಿ ತುಂಬಿರುವ ಕೆ.ಸಿ.ವ್ಯಾಲಿ ನೀರನ್ನು ಕೋಡಿ ಮೂಲಕ ಹರಿಯಲು ಬಿಡದೆ ಕೆರೆ ಕಟ್ಟೆ ಮಧ್ಯ ಭಾಗದಲ್ಲಿರುವ ತೂಬಿನ ಮೂಲಕ ಹರಿಸಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಂದಾಗಿದ್ದು, ಇದರಿಂದ ಎಸ್.ಅಗ್ರಹಾರ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದರು. ಎಸ್.ಅಗ್ರಹಾರ ಕೆರೆಗೆ ಕಳೆದ ಕೆಲವು ದಿನಗಳಿಂದ ನೀರು ಹರಿದು ಬರುತ್ತಿದ್ದು ಕೋಡಿ ಹರಿಯುವ ಹಂತಕ್ಕೆ ಬಂದಿದೆ. ಆದರೆ, ರಮೇಶ್ ಕುಮಾರ್ ತಮ್ಮ ಶ್ರೀನಿವಾಸಪುರ ಕ್ಷೇತ್ರಕ್ಕೆ ಕೊಂಡೊಯ್ಯಲು ಪೊಲೀಸರ ಬಂದೋಬಸ್ತ್ನಲ್ಲಿ ಕೆರೆಯ ತೂಬು ಗಳನ್ನು ಎರಡು ಭಾಗದಲ್ಲಿ ಕಿತ್ತು ನೀರು ಹರಿಯು ತೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಕೆ.ಸಿ. ವ್ಯಾಲಿ ನೀರು ಕಾಲುವೆಗಳ ಮೂಲಕ ಹರಿದು ಬಂದು ಕೆರೆ ತುಂಬುವಂತಿತ್ತು, ಕೆರೆಗೆ ನೀರು ಹರಿದು ಬಂದಿದ್ದರಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಕಾಣಿಸಿಕೊಂಡಿದ್ದವು, ಬಾವಿಗಳಲ್ಲೂ ನೀರು ಕಾಣಿಸಿಕೊಳ್ಳತೊಡಗಿತು. ಆದರೆ, ರಮೇಶ್ ಕುಮಾರ್ ಅವರು ಜನ್ನಘಟ್ಟ ಕೆರೆಯನ್ನು ಬೇಗನೆ ತುಂಬಿಸಿ ಅಲ್ಲಿಂದ ತಮ್ಮ ಶ್ರೀನಿವಾಸಪುರ ಕ್ಷೇತ್ರಕ್ಕೆ ತೆಗೆದುಕೊಂಡು
ಹೋಗುವ ಅವಸರದಲ್ಲಿ ಇಲ್ಲಿನ ಜನರ ಕ್ಷೇಮವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್.ಅಗ್ರಹಾರ ಕೆರೆಯಲ್ಲಿ ಶೇ.50 ನೀರು ಉಳಿಸಿ ಉಳಿದ ನೀರನ್ನು ಮುಂದಿನ ಕೆರೆಗಳಿಗೆ ಬಿಡಲಾಗುತ್ತಿದೆ, ಕೆರೆಯ ಸಂಪೂರ್ಣ ನೀರನ್ನು ಕೆರೆ ತೂಬುಗಳಿಂದ ಬಿಡುವುದಿಲ್ಲ ಎಂದು ಸಣ್ಣ
ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನೀಯರ್ ಸುರೇಶ್ ಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.