ಭಾರತಿಬೈಲ್‌ನಲ್ಲಿ 50 ಕ್ಕೂ ಹೆಚ್ಚು ಮಂದಿಗೆ ಹೊಟ್ಟೆ ನೋವು-ಬೇಧಿ

ಗ್ರಾಮಕ್ಕೆ ತಾಲೂಕು ವೈದ್ಯಾ ಧಿಕಾರಿಗಳ ಭೇಟಿ „5 ಸಾವಿರ ಹಾಲೋಜಿನ್‌ ಮಾತ್ರೆಗಳ ವಿತರಣೆ „ಗ್ರಾಮದ ಕುಡಿಯುವ ನೀರಿನ ಮಾದರಿ ಲ್ಯಾಬಿಗೆ ರವಾನೆ

Team Udayavani, Apr 29, 2020, 1:03 PM IST

29-April-10

ಕೊಟ್ಟಿಗೆಹಾರ: ಭಾರತಿಬೈಲ್‌ ಗ್ರಾಮದಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿರುವ ಗ್ರಾಮಸ್ಥರ ಮನೆಗಳಿಗೆ ತಾಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.

ಕೊಟ್ಟಿಗೆಹಾರ: ಬಿ. ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಭಾರತಿಬೈಲ್‌ ಗ್ರಾಮದಲ್ಲಿ 50 ಕ್ಕೂ ಹೆಚ್ಚು ಮಂದಿಗೆ ಹೊಟ್ಟೆನೋವು, ಬೇಧಿ ಕಾಣಿಸಿಕೊಂಡಿದ್ದು ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

ಕಳೆದ ಮೂರು ದಿನಗಳಿಂದ ಗ್ರಾಮದ ಕೆಲವರಿಗೆ ಹೊಟ್ಟೆನೋವು, ಬೇಧಿ ಕಾಣಿಸಿಕೊಂಡಿದ್ದು ಮಂಗಳವಾರ ಗ್ರಾಮದಲ್ಲಿ ಹಲವರಿಗೆ ಹೊಟ್ಟೆನೋವು, ಬೇಧಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಮಂಗಳವಾರದವರೆಗೆ ಭಾರತಿಬೈಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಕ್ಕೂ ಹೆಚ್ಚು ಮಂದಿ ಹೊಟ್ಟೆನೋವು ಮತ್ತು ಬೇಧಿಗೆ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮದಲ್ಲಿ ಯಾವ ಕಾರಣದಿಂದ ಏಕಕಾಲದಲ್ಲಿ ಹಲವರಿಗೆ ಹೊಟ್ಟೆನೋವು, ಬೇಧಿ ಕಾಣಿಸಿಕೊಂಡಿದೆ ಎಂಬುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಡಿಯುವ ನೀರಿನಿಂದ ಈ ರೀತಿ ಆಗಿರಬಹುದು ಎಂದು ವೈದ್ಯಾಧಿ ಕಾರಿಗಳು ಅನುಮಾನಿಸಿದ್ದು ಪ್ರಯೋಗಾಲಯಕ್ಕೆ ಕುಡಿಯುವ ನೀರಿನ ಮಾದರಿಯನ್ನು ಕಳಿಸಿದ್ದು ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ.

ಭಾರತಿಬೈಲಿನ ಕುಡಿಯುವ ನೀರಿನ ಟ್ಯಾಂಕ್‌, ಹೊಟ್ಟೆನೋವು ಮತ್ತು ಬೇಧಿಯಿಂದ ಬಳಲುತ್ತಿರುವವರ ಮನೆಗಳಿಗೆ ತಾಲೂಕು ಆರೋಗ್ಯಾಧಿಕಾರಿ ಸುಂದರೇಶ್‌, ವೈದ್ಯಾಧಿಕಾರಿ ಮಧುಸೂಧನ್‌, ಬಿ. ಹೊಸಳ್ಳಿ ಗ್ರಾಪಂ ಅಧ್ಯಕ್ಷ ರವಿಗೌಡ ಭೇಟಿ ನೀಡಿ ಮಾಹಿತಿ ಪಡೆದರು. ವೈದ್ಯಾಧಿಕಾರಿ ಮಧುಸೂಧನ್‌ ಮಾತನಾಡಿ, ಗ್ರಾಮ ವ್ಯಾಪ್ತಿಯ ಕುಡಿಯುವ ನೀರಿನ ಟ್ಯಾಂಕನ್ನು
ವಾರಕ್ಕೆ 2 ಬಾರಿ ಬ್ಲೀಚಿಂಗ್‌ ಪೌಡರ್‌ ಹಾಕಿ ಸ್ವತ್ಛಗೊಳಿಸಲು ಸೂಚಿಸಲಾಗಿದೆ. ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬರಲು 36 ಗಂಟೆ ಬೇಕಾಗಿದೆ. ಮೇಲ್ನೋಟಕ್ಕೆ ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಕಂಡು ಬಂದಿದ್ದು ವರದಿಯ ನಂತರ ಸತ್ಯಾಂಶ ಹೊರಬರಲಿದೆ ಎಂದರು.

ಗ್ರಾಮದ ಸುಮಾರು 250 ಮನೆಗಳಿಗೆ 5 ಸಾವಿರ ಹಾಲೋಜಿನ್‌ ಮಾತ್ರೆಗಳನ್ನು ವಿತರಿಸಲಾಗಿದ್ದು ಈ ಮಾತ್ರೆಗಳನ್ನು 20 ಲೀಟರ್‌ ನೀರಿಗೆ 1 ಮಾತ್ರೆಯನ್ನು ಹಾಕಿ ಸೇವಿಸಬೇಕು ಎಂದರು. ಗ್ರಾಮಸ್ಥ ಶಿವಪ್ರಸಾದ್‌ ಮಾತನಾಡಿ, ಮಂಗಳವಾರದಿಂದ ನನಗೆ ಹೊಟ್ಟೆನೋವು ಪ್ರಾರಂಭವಾಗಿದೆ. ಭಾರತಿಬೈಲ್‌ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇನೆ. ನಮ್ಮ ಮನೆಯಲ್ಲಿ ಕಾಯಿಸಿ ಆರಿಸಿದ ನೀರನ್ನೇ ಬಳಸುತ್ತೇವೆ. ಗ್ರಾಮದಲ್ಲಿ ಹೊಟ್ಟೆನೋವು, ಬೇಧಿ ಹಲವರಿಗೆ ಕಾಣಿಸಿಕೊಂಡಿದೆ ಎಂದರು. ಬಿ. ಹೊಸಳ್ಳಿ ಗ್ರಾಪಂ ಅಧ್ಯಕ್ಷ ರವಿಗೌಡ, ಪಿಡಿಒ ಸಮಿವುಲ್ಲಾ ಶರೀಫ್‌, ಕಿರಿಯ ಪುರುಷ ಆರೋಗ್ಯ ಸಹಾಯಕ ದಿನೇಶ್‌, ಶುಶೂಶ್ರಕಿ ಹರಿಣಾಕ್ಷಿ, ಪ್ರಮೀಳಾ ಮತ್ತಿತರರು ಇದ್ದರು.

ಟಾಪ್ ನ್ಯೂಸ್

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.