ಜಿಲ್ಲೆಯಲ್ಲಿ ಕೋವಿಡ್ 19 ವೈರಸ್‌ ರಣಕೇಕೆ


Team Udayavani, Apr 29, 2020, 3:12 PM IST

BK-TDY-1

ಬಾಗಲಕೋಟೆ:  ಕೋವಿಡ್ 19 ಸೋಂಕಿತರ ಪಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಗೆ 5ನೇ ಸ್ಥಾನ ಬಂದಿದೆ. ಎಷ್ಟೇ ಕಟ್ಟುನಿಟ್ಟಿನ ಲಾಕ್‌ಡೌನ್‌ ಮುಂದುವರಿದರೂ ಸೋಂಕಿಗೆ ತುತ್ತಾದವರ ಮನೆ, ಪಕ್ಕದ ಮನೆ, ಸಂಪರ್ಕದಲ್ಲಿದವರಿಗೆ ವಿಸ್ತರಣೆಯಾಗುತ್ತಲೇ ಇದೆ.

ಹೌದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 29 ಜನರಿಗೆ ಈ ಸೋಂಕು ಖಚಿತಪಟ್ಟಿದೆ. ಅದರಲ್ಲಿ ಬಾಗಲಕೋಟೆ ನಗರದ ಓರ್ವ ವೃದ್ಧ ಮೃತಪಟ್ಟರೆ, ಮುಧೋಳದಲ್ಲಿ ಗುಜರಾತ್ ಧರ್ಮಗುರು ಒಬ್ಬ, ಬಾಗಲಕೋಟೆಯ ಐವರು ಸೇರಿ ಒಟ್ಟು ಆರು ಜನ ಕೋವಿಡ್ 19  ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಮೂರು ತಾಲೂಕು ಕೆಂಪು ವಲಯ: ಜಿಲ್ಲೆಯ ಹಳೆಯ ಮತ್ತು ಹೊಸ ತಾಲೂಕು ಸಹಿತ ಒಟ್ಟು 10 ತಾಲೂಕುಗಳಲ್ಲಿ ಬಾಗಲಕೋಟೆ, ಮುಧೋಳ ಮತ್ತು ಜಮಖಂಡಿ ತಾಲೂಕು, ಸೋಂಕು ವಿಸ್ತರಣೆಯಲ್ಲಿ ಕೆಂಪು ವಲಯದ ಪಟ್ಟಿಗೆ ಸೇರಿವೆ. ಕೋವಿಡ್ 19 ನಿಯಂತ್ರಣದಲ್ಲಿರದೇ ವಿಸ್ತರಣೆಯಾಗುತ್ತಿರುವ 7 ಜಿಲ್ಲೆಗಳ 14 ತಾಲೂಕುಗಳಲ್ಲಿ ನಮ್ಮ ಜಿಲ್ಲೆಯ ಮೂರು ತಾಲೂಕುಗಳು ಸ್ಥಾನ ಪಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಏ. 2ರಂದು ಬಾಗಲಕೋಟೆ ನಗರದಲ್ಲಿ ಕಾಣಿಸಿಕೊಂಡ ಈ ಸೋಂಕು, ನಗರದ ಒಟ್ಟು 13 ಜನರಿಗೆ ವಿಸ್ತರಿಸಿದೆ. ಇನ್ನು ಮುಧೋಳದಲ್ಲಿದ್ದ ಗುಜರಾತ್ ಧರ್ಮಗುರುವಿಗೆ ಏ. 7ರಂದು ಸೋಂಕು ಪತ್ತೆಯಾಗಿದ್ದು, ಆತ ಸಹಿತ ಮುಧೋಳದಲ್ಲಿ ಒಟ್ಟು 7 ಜನರಿಗೆ ಈ ಮಾರಿ ಅಂಟಿಕೊಂಡಿದೆ.

ಇನ್ನು ಜಮಖಂಡಿಯಲ್ಲಿ ಒಂದೂ ಸೋಂಕು ಕಾಣಿಸಿರಲಿಲ್ಲ. ಆದರೆ, ಮುಧೋಳದ ಮದರಸಾದಲ್ಲಿ ಕಾರ್ಯ ನಿರ್ವಹಿಸಿದ ಪೇದೆಗೆ ಏ. 15ರಂದು ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದು, ಈತ ಜಮಖಂಡಿಯಿಂದ ಮುಧೋಳಕ್ಕೆ ಹೋಗಿ ಬರುತ್ತಿದ್ದರಿಂದ, ಜಮಖಂಡಿಗೂ ವಿಸ್ತರಣೆಯಾಗಿತ್ತು. ಇದೀಗ ಜಮಖಂಡಿ ನಗರವೊಂದರಲ್ಲೇ ಒಟ್ಟು 9 ಜನರಿಗೆ ಸೋಂಕು ತಗುಲಿದೆ.

ಪುರುಷರೇ ಹೆಚ್ಚು: ಸೊಂಕು ತಗುಲಿದವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿದ್ದಾರೆ. 10 ಜನ ಮಹಿಳೆಯರಿಗೆ ಸೋಂಕು ತಗುಲಿದ್ದರೆ, 19 ಜನ ಪುರುಷರಿಗೆ ಕೊರೊನಾ ಖಚಿತಪಟ್ಟಿದೆ. ಈ 10 ಜನ ಮಹಿಳೆಯರಿಗೆ ಅವರ ಮನೆ ಇಲ್ಲವೇ ಪಕ್ಕದ ಮನೆಯ ಪುರುಷ ಸೋಂಕಿತರಿಂದಲೆ ತಗುಲಿದೆ. ಒಟ್ಟಾರೆ, ಜಿಲ್ಲೆಯಲ್ಲಿ ಏ. 2ರಿಂದ ಕೋವಿಡ್ 19  ಕೇಕೆ ಹಾಕುತ್ತಿದ್ದು, ಮೂವತ್ತರ ಗಡಿಗೆ ಬಂದು ತಲುಪಿದೆ. ಜಿಲ್ಲಾ ಕೇಂದ್ರ ಬಾಗಲಕೋಟೆ ನಗರದಲ್ಲಿ ಏ.18ರಿಂದ ಯಾವುದೇ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ನಗರದ ಜನ ಒಂದಷ್ಟು ನಿಟ್ಟುಸಿರು ಬಿಟ್ಟಿದ್ದಾರೆ.

 

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.