ಪಡಿತರ ದಾಸ್ತಾನು ವಿವರ ಪ್ರದರ್ಶಿಸಲು ಸೂಚಿಸಿ
Team Udayavani, Apr 29, 2020, 3:31 PM IST
ಚಿತ್ರದುರ್ಗ: ಸಚಿವ ಕೆ. ಗೋಪಾಲಯ್ಯ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದರು.
ಚಿತ್ರದುರ್ಗ: ಪಡಿತರ ವಿತರಣೆ ತೂಕದಲ್ಲಿ ವ್ಯತ್ಯಾಸ ಹಾಗೂ ಪಡಿತರದಾರರಿಂದ ಹಣ ಪಡೆಯಬಾರದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ. ಗೋಪಾಲಯ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಜಿಲ್ಲೆಯಲ್ಲಿ ಶೇ. 94 ರಷ್ಟು ಪಡಿತರ ವಿತರಣೆಯಾಗಿದೆ. ಪಡಿತರಚೀಟಿಗೆ ಅರ್ಜಿ ಸಲ್ಲಿಸಿರುವ 3594 ಅರ್ಜಿದಾರರಿಗೂ ಪಡಿತರ ತಲುಪಬೇಕು. ಜಿಲ್ಲೆಯಲ್ಲಿರುವ 580 ನ್ಯಾಯಬೆಲೆ ಅಂಗಡಿಗಳ ಮುಂದೆ ಸರ್ಕಾರ ಉಚಿತವಾಗಿ ನೀಡುವ ಪಡಿತರ ವ್ಯವಸ್ಥೆಯ ದಾಸ್ತಾನು ವಿವರದ ಮಾಹಿತಿ ಹಾಗೂ ಉಚಿತವಾಗಿ ನೀಡುತ್ತಿರುವ ಅಕ್ಕಿಯ ವಿವರ ಪ್ರದರ್ಶಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಪಿಲ್ ಕಾರ್ಡ್‌ದಾರರಿಗೂ ಪ್ರತಿ ತಿಂಗಳು 10 ಕೆಜಿ ಕೆಜಿ ಅಕ್ಕಿಯನ್ನು 15 ರೂ.ನಂತೆ ನೀಡಬೇಕು. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 3 ಸಾವಿರ ಫಲಾನುಭವಿಗಳಿದ್ದು ಏಪ್ರಿಲ್, ಮೇ, ಜೂನ್ ರೀಪಿಲ್ ಉಚಿತವಾಗಿ ನೀಡಲಾಗುತ್ತದೆ. ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಒಟ್ಟು 1,31,328 ಫಲಾನುಭವಿಗಳಿದ್ದು, 1,26508 ಫಲಾನುಭವಿಗಳ ಖಾತೆಗೆ ಏಪ್ರಿಲ್ ಮಾಹೆ ಹಣ ಪಾವತಿಯಾಗಿದೆ. 75,330 ಫಲಾನುಭವಿಗಳು ರೀಫಿಲ್ ಪಡೆದಿದ್ದಾರೆ ಎಂದರು.
ಆಹಾರ, ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಧುಸೂದನ್ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ 1,51,460 ಕ್ವಿಂಟಾಲ್ ಅಕ್ಕಿ ಮತ್ತು 14700 ಕ್ವಿಂಟಾಲ್ ಗೋಧಿಯನ್ನು ಆಹಾರ ನಿಗಮದ ಗೋದಾಮುಗಳಿಂದ ಕೇವಲ ಎರಡು ದಿನಗಳ ಅವಧಿಯೊಳಗೆ ಸಾಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4,05,097 ಪಿಎಚ್‌ಎಚ್ ಮತ್ತು ಎಎವೈ
ಪಡಿತರ ಚೀಟಿಗಳಿದ್ದು, ಇದರಲ್ಲಿ 3,81,264 ಪಡಿತರ ಚೀಟಿಗಳಿಗೆ ಆಹಾರಧಾನ್ಯ ವಿತರಣೆ ಮಾಡಲಾಗಿದೆ. ಒಟ್ಟು 7529 ಎನ್‌ಪಿಎಚ್ ಎಚ್ ಪಡಿತರ ಚೀಟಿದಾರರಿದ್ದು, ಇದರಲ್ಲಿ 3952 ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ. ಪಡಿತರ ಚೀಟಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸಿರುವ 274 ಅರ್ಜಿದಾರರಿಗೂ 10 ಕೆಜಿಯಂತೆ ಅಕ್ಕಿಯನ್ನು ಈಗಾಗಲೇ ವಿತರಿಸಲಾಗಿದೆ ಎಂದರು.
ಏಪ್ರಿಲ್ ಮತ್ತು ಮೇ ತಿಂಗಳಿಗೆ ಕೇಂದ್ರ ಸರ್ಕಾರದಿಂದ “ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ ಅಡಿ ಜಿಲ್ಲೆಗೆ ಒಟ್ಟು 1,40,770 ಕ್ವಿಂಟಾಲ್ ಅಕ್ಕಿ ಮತ್ತು 4060 ಕ್ವಿಂಟಾಲ್ ತೊಗರಿಬೇಳೆ ಬಿಡುಗಡೆಯಾಗಿದೆ. ಬಿಪಿಎಲ್ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 1 ಕೆಜಿಯಂತೆ ತೊಗರಿಬೇಳೆಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಎಎವೈ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 10 ಕೆಜಿಯಂತೆ ಅಕ್ಕಿ ಹಾಗೂ ಪ್ರತಿ ಎಎಐ ಪಡಿತರ ಚೀಟಿಗೆ 1 ಕೆಜಿಯಂತೆ ತೊಗರಿ ಬೇಳೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಜಾಗೃತದಳ ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಆಕಸ್ಮಿಕ ಭೇಟಿ ನೀಡಿ ಲೋಪ ದೋಷ ಕಂಡುಬಂದ ಒಟ್ಟು 12 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
3165 ಅನರ್ಹ ಪಡಿತರ ಚೀಟಿ ರದ್ದು: ಜಿಲ್ಲೆಯಲ್ಲಿ ಆಹಾರ ಶಿರಸ್ತೆದಾರರು, ಆಹಾರ ನಿರೀಕ್ಷಕರು 3165 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಿದ್ದು, ಒಟ್ಟು 84 ಸಾವಿರ ರೂ. ದಂಡ ವಿ ಧಿಸಲಾಗಿದೆ. 375 ಅನರ್ಹ ಪಡಿತರ ಚೀಟಿದಾರರು ಸ್ವಯಂ ಪ್ರೇರಣೆಯಿಂದ ಕಚೇರಿಗೆ ಹಿಂದಿರುಗಿಸಿದ್ದಾರೆ ಎಂದು ತಿಳಿಸಲಾಯಿತು. ಸಭೆಯಲ್ಲಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಪಂ ಸಿಇಒ ಎಸ್. ಹೊನ್ನಂಬ, ಅಪರ ಜಿಲ್ಲಾ ಧಿಕಾರಿ ಸಿ. ಸಂಗಪ್ಪ ಹಾಗೂ ತಹಶೀಲ್ದಾರರು ಭಾಗವಹಿಸಿದ್ದರು.
ಮೇ 31 ರವರೆಗೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ
ಮೇ 31 ರವರೆಗೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲಾಗುತ್ತಿದೆ. ಆದರೆ ಮಣ್ಣು, ಕಲ್ಲು, ಧೂಳಿನಿಂದ ಕೂಡಿದ ರಾಗಿ ಖರೀದಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾ ಧಿಕಾರಿಗೆ ಸೂಚನೆ ನೀಡಿದ್ದು ಗೋದಾಮುಗಳನ್ನು ಪರಿಶೀಲಿಸಲಾಗುತ್ತದೆ. ಗುಣಮಟ್ಟದ ರಾಗಿ ಖರೀದಿಸದ ಆಹಾರ ನಿಗಮದ ಅ ಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು. ಈ ಬಗ್ಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಸ್ತಾಪ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.