ಉದಯವಾಣಿ ಫಾಲೋ ಅಪ್‌ : ಅನ್ಯ ರಾಜ್ಯದವರ ಮೀನುಗಾರಿಕೆಗೆ ಬೀಳದ ಕಡಿವಾಣ

ಕರಾವಳಿ ಮೀನುಗಾರರ ಆಕ್ರೋಶ ; ಗೋವಾ, ಮಹಾರಾಷ್ಟ್ರ ಮೀನು ರವಾನೆಗೆ ವಿರೋಧ

Team Udayavani, Apr 30, 2020, 5:46 AM IST

ಉದಯವಾಣಿ ಫಾಲೋ ಅಪ್‌ : ಅನ್ಯ ರಾಜ್ಯದವರ ಮೀನುಗಾರಿಕೆಗೆ ಬೀಳದ ಕಡಿವಾಣ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕುಂದಾಪುರ: ಕರ್ನಾಟಕ ಕರಾವಳಿಯಲ್ಲಿ ಗೋವಾ ಮೀನುಗಾರರು ನಡೆಸುತ್ತಿರುವ ಅಕ್ರಮ ಬೆಳಕು ಮೀನುಗಾರಿಕೆ (ಲೈಟ್‌ ಫಿಶಿಂಗ್‌) ಬಗ್ಗೆ ರಾಜ್ಯದ ಮೀನುಗಾರರು ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಸರಕಾರದ ಕ್ರಮದ ಬಗ್ಗೆ ಮೀನುಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಲಾಕ್‌ಡೌನ್‌ ಕಾರಣಕ್ಕೆ ರಾಜ್ಯದ ಮೀನುಗಾರರು ಮನೆಯಲ್ಲಿ ಕುಳಿತಿದ್ದರೆ ಅತ್ತ ಗೋವಾದ ಮೀನುಗಾರರು ರಾಜ್ಯದ ಕರಾವಳಿಗೆ ಅಕ್ರಮವಾಗಿ ನುಸುಳಿ ಬೆಳಕು ಮೀನುಗಾರಿಕೆ (ಲೈಟ್‌ ಫಿಶಿಂಗ್‌) ನಡೆಸುತ್ತಿದ್ದಾರೆ. ಈ ಬಗ್ಗೆ ಉದಯವಾಣಿ ಎ. 19ರಂದು ವಿಶೇಷ ವರದಿ ಪ್ರಕಟಿಸಿತ್ತು.

ಕೇಂದ್ರ ಒಪ್ಪಿದರೂ…
ಕೇಂದ್ರ ಸರಕಾರ ಎಲ್ಲ ರೀತಿಯ ಮೀನುಗಾರಿಕೆಗೆ ಅವಕಾಶ ನೀಡಿದೆ. ಗೋವಾ, ಮಹಾರಾಷ್ಟ್ರದಲ್ಲೂ ಅವಕಾಶ ಇದೆ. ಆದರೆ ರಾಜ್ಯ ಸರಕಾರ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ಕಲ್ಪಿಸಿರುವುದು ಸಮಸ್ಯೆಗೆ ಕಾರಣ. ಗೋವಾ ಮೀನುಗಾರರು ನಮ್ಮ ರಾಜ್ಯದಿಂದ ಹಿಡಿದ ಮೀನನ್ನು ಮತ್ತೆ ನಮ್ಮಲ್ಲಿಗೇ ಕಳುಹಿಸಿ ದುಬಾರಿ ಬೆಲೆಗೆ ಮಾರುತ್ತಿದ್ದಾರೆ.

ದಡಕ್ಕೆ ಬರುವುದೇ ಇಲ್ಲ
ಗೋವಾದ ಬಹುತೇಕ ಬೋಟುಗಳು ಅಲ್ಲಿನ ರಾಜಕೀಯ ನಾಯಕರಿಗೆ ಸೇರಿದ್ದು, ನಮ್ಮ ಕರಾವಳಿಗೆ ಬಂದು ರಾತ್ರಿ ಮೀನುಗಾರಿಕೆ ನಡೆಸಿ ಕಡಲಲ್ಲೇ ಇರುತ್ತವೆ. ಸಣ್ಣ ಬೋಟುಗಳು ಬಂದು ಮೀನನ್ನು ತುಂಬಿಕೊಂಡು ಮರಳುತ್ತವೆ. ದೊಡ್ಡ ಬೋಟುಗಳು ಅಕ್ರಮ ಚಟುವಟಿಕೆ ಮುಂದುವರಿಸುತ್ತವೆ ಎನ್ನುತ್ತಾರೆ ಇಲ್ಲಿನ ಮೀನುಗಾರರು.

ಅಪಾಯಕಾರಿ ಅಲ್ಲವೇ?
ಲಾಕ್‌ಡೌನ್‌ ಆದೇಶವನ್ನು ನಾವು ಮಾತ್ರ ಪಾಲಿಸಬೇಕಾ ? ಗೋವಾ ಮತ್ತು ಮಹಾರಾಷ್ಟ್ರದಿಂದ ಬರುವ ಲೈಟ್‌ಫಿಶಿಂಗ್‌ ಬೋಟ್‌ಗಳು ನಮ್ಮ ದಾರಿಯ ಮೂಲಕವೇ ಕೇರಳಕ್ಕೂ ಸಾಗುತ್ತಿವೆ. ಅತೀ ಹೆಚ್ಚು ಸೋಂಕು ಇರುವ ಮಹಾರಾಷ್ಟ್ರ ದ ಮೀನುಗಾರರಿಗೆ ನಿರ್ಬಂಧ ಯಾಕಿಲ್ಲ?

ಕಳೆದ ವರ್ಷ ನಮ್ಮ ಮೀನುಗಾರಿಕೆಗೆ ತಕರಾರು ತೆಗೆದ ಗೋವಾದವರಿಗೆ ಈಗ ನಮ್ಮಲ್ಲಿಗೇ ಬಂದು ಬೆಳಕು ಮೀನುಗಾರಿಕೆ ನಡೆಸಲು ಬಿಟ್ಟಿರುವುದೇಕೆ? ಎಂದು ಮೀನುಗಾರಿಕಾ ಸಚಿವರು, ಜಿಲ್ಲಾಡಳಿತ ಮತ್ತು ಕರಾವಳಿ ಕಾವಲು ಪಡೆಯನ್ನು ಇಲ್ಲಿನ ಮೀನುಗಾರರು ಪ್ರಶ್ನಿಸಿದ್ದಾರೆ.

ಗೋವಾದ ನೂರಾರು ಮೀನುಗಾರಿಕಾ ಬೋಟುಗಳು ರಾತ್ರಿ ಸಮಯದಲ್ಲಿ ಮಲ್ಪೆಯಿಂದ ಹೊನ್ನಾವರ ಭಾಗದವರೆಗೆ ಮೀನುಗಾರಿಕೆ ನಡೆಸುತ್ತಿವೆ. ಮೀನುಗಾರಿಕಾ ಸಚಿವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ರತ್ನಗಿರಿ, ಅಲಿಬಾಗ್‌, ಗೋವಾದ ಮೀನುಗಳನ್ನು ಇಲ್ಲಿಗೆ ತಂದು ದುಬಾರಿ ಬೆಲೆಗೆ ಮಾರುವುದು ಸರಿಯಲ್ಲ.
– ರಮೇಶ್‌ ಕುಂದರ್‌, ಅಧ್ಯಕ್ಷರು ಪರ್ಸಿನ್‌ ಮೀನುಗಾರರ ಸಹಕಾರಿ ಸಂಘ ಗಂಗೊಳ್ಳಿ

ಕರಾವಳಿ ಕಾವಲು ಪಡೆಯಿಂದ 12 ನಾಟಿಕಲ್‌ ಮೈಲ್‌ ಒಳಗೆ ಎಲ್ಲ ಕಡೆಗಳಲ್ಲಿ ಪೆಟ್ರೋಲಿಂಗ್‌ ಮಾಡಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಹೊರ ರಾಜ್ಯದ ಮೀನುಗಾರರು ಮೀನುಗಾರಿಕೆ ಮಾಡುತ್ತಿರುವುದು ಕಂಡುಬಂದಿಲ್ಲ. ಮೀನುಗಾರಿಕೆ ಇಲಾಖೆ ಅಥವಾ ಮೀನುಗಾರರಿಂದಲೂ ದೂರುಗಳು ಬಂದಿಲ್ಲ. ಗೋವಾದವರ ಲೈಟ್‌ ಫಿಶಿಂಗ್‌ ಕಂಡುಬಂದಲ್ಲಿ ನನ್ನ ಮೊಬೈಲ್‌ಗೆ (94808 00555) ತತ್‌ಕ್ಷಣ ಮಾಹಿತಿ ನೀಡಲಿ, ಕ್ರಮ ಕೈಗೊಳ್ಳುತ್ತೇವೆ.
– ಆರ್‌. ಚೇತನ್‌, ಪೊಲೀಸ್‌ ಅಧೀಕ್ಷಕರು, ಉಡುಪಿ ಜಿ. ಕರಾವಳಿ ಕಾವಲು ಪೊಲೀಸ್‌ ಪಡೆ

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1

Kundapura; ಜಪ್ತಿ: ಅಂಗಡಿಗೆ ಬೆಂಕಿ: ‘ದ್ವೇಷದ ಕಿಡಿ’ ಎಂಬ ಶಂಕೆ; ದೂರು

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.