ದಿನಸಿ ತರಲು ಕಳುಹಿಸಿದರೆ ಪತ್ನಿಯನ್ನು ಕರೆತಂದ:ಮಗನ ರಹಸ್ಯಮದುವೆ ತಿಳಿಯದ ತಾಯಿ ಮಾಡಿದ್ದೇನು?
Team Udayavani, Apr 30, 2020, 8:34 AM IST
ಘಾಜಿಯಾಬಾದ್: ದೇಶಾದ್ಯಂತ ಲಾಕ್ ಡೌನ್ ಇರುವ ಕಾರಣದಿಂದ ದಿನಸಿ ಸಾಮಾಗ್ರಿ ತರುವಂತೆ ಅಂಗಡಿಗೆ ಕಳುಹಿಸಿದರೆ, ಪತ್ನಿಯನ್ನು ಕರೆತಂದು ನಿಲ್ಲಿಸಿದ ಪುತ್ರನನ್ನು ಕಂಡು ತಾಯಿಯೊಬ್ಬರೂ ಆಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.
ಸಾಹಿದಾಬಾದ್ ಏರಿಯಾದಲ್ಲಿ ವಾಸವಿದ್ದ ಗುಡ್ಡು (26) ಎಂಬ ವ್ಯಕ್ತಿಯನ್ನು ಆತನ ತಾಯಿ ದಿನಸಿ ತರುವಂತೆ ಕಳುಹಿಸಿದ್ದರು. ಆದರೇ ಆತ ಹಿಂದಿರುವಾಗ ದಿನಸಿಯೊಂದಿಗೆ ಹೆಂಡತಿಯನ್ನೂ ಕರೆತಂದಿದ್ದ. ಎರಡು ತಿಂಗಳ ಹಿಂದೆ ಗುಟ್ಟಾಗಿ ಮದುವೆಯಾಗಿದ್ದ ಭೂಪ, ಲಾಕ್ ಡೌನ್ ಕಾರಣದಿಂದ ಆಕೆಯನ್ನು ಮನೆಗೆ ಕರೆತರಲು ಆಗಿರಲಿಲ್ಲ. ಇದೀಗ ಲಾಕ್ ಡೌನ್ ಕೊಂಚ ಸಡೀಲವಾದ್ದರಿಂದ ದಿನಸಿ ತರುವ ನೆಪದಲ್ಲಿ ಪತ್ನಿಯನ್ನು ಕರೆತಂದಿದ್ದಾನೆ.
ವಿಷಯ ತಿಳಿಯದ ತಾಯಿ ಗಾಬರಿಗೊಂಡಿದ್ದು ಮಾತ್ರವಲ್ಲದೆ ಈ ವಿವಾಹವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಎರಡು ತಿಂಗಳ ಹಿಂದೆಯೇ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದೆ. ಆದರೆ, ಲಾಕ್’ಡೌನ್ ಇದ್ದ ಪರಿಣಾಮ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಮಾತ್ರವಲ್ಲದೆ ಮದುವೆಗೆ ಸಾಕ್ಷಿಗಳ ಕೊರತೆಯಿತ್ತು. ಈ ಕಾರಣದಿಂದ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇದೀಗ ಪತ್ನಿಯನ್ನು ಮನೆಗೆ ಕರೆತರಲು ನಿರ್ಧರಿಸಿದ್ದೆ ಎಂದು ಗುಡ್ಡು ಹೇಳಿದ್ದಾರೆ.
ಸೊಸೆಯನ್ನು ಮನೆಯೊಳಗೆ ಸೇರಿಸಲು ಗುಡ್ಡು ತಾಯಿ ಒಪ್ಪದ ಕಾರಣ ಇದೀಗ ಪೊಲೀಸರು ಸವಿತಾ ನೆಲೆಯೂರಿದ್ದ ದೆಹಲಿಯ ಬಾಡಿಗೆ ಮನೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದು, ದಂಪತಿಗಳು ನೆಲೆಯೂರಲು ಅವಕಾಶ ಮಾಡಿಕೊಡುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
Ayodhya ರಾಮಮಂದಿರಕ್ಕೆ ಇಂದು ವರ್ಷಪೂರ್ಣ: ಹೇಗಿರಲಿದೆ ಕಾರ್ಯಕ್ರಮ?
Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.