ಜೂನ್, ಜುಲೈಯಲ್ಲಿ ಮುಂಗಾರು ಮುನಿಸು
Team Udayavani, Apr 30, 2020, 11:37 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಈ ವರ್ಷವೂ ಮುಂಗಾರು ಕಣ್ಣಾಮುಚ್ಚಾಲೆ ಆಡುವ ಸಾಧ್ಯತೆ ಇದೆ. ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ. ಜುಲೈಯಲ್ಲಿ ಬಹುತೇಕ ಭಾಗದಲ್ಲಿ ಮಳೆ ಇರುವುದಿಲ್ಲ. ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಕಳೆದ ವರ್ಷದಂತೆ ಅತಿವೃಷ್ಟಿ ಸಂಭವಿಸಲಿದೆ ಎಂಬ ಮಾಹಿತಿ ಸರಕಾರದ ಆಂತರಿಕ ಮೌಲ್ಯಮಾಪನ ಟಿಪ್ಪಣಿಯಿಂದ ತಿಳಿದು ಬಂದಿದೆ. ಗುಜರಾತ್, ಪಶ್ಚಿಮದ ಮಧ್ಯ ಪ್ರದೇಶ, ಮಹಾರಾಷ್ಟ್ರದ ವಾಯವ್ಯ ಭಾಗದಲ್ಲಿ ಶೇ.50- 60ರಷ್ಟು ಮಳೆ ಸುರಿಯಲಿದೆ. ಬಂಗಾಲ, ಒಡಿಶಾ, ಮಿಜೋರಾಂನಲ್ಲಿ ಕಡಿಮೆ ಮಳೆ ಇರಲಿದೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಸುರಿಯಲಿದೆ.
ಈಗಲೇ ನಾಮಕರಣ!
ಪಿಂಕು, ಲುಲು, ಗಾಟಿ, ಶಾಹೀನ್, ಗುಲಾಬ್, ತೇಜ್, ಅಗ್ನಿ ಮತ್ತು ಆಗ್… ಇವೆಲ್ಲಾ ಭವಿಷ್ಯದಲ್ಲಿ ಬಂದೆರಗಲಿರುವ ಚಂಡಮಾರುತ ಗಳಿಗೆ ಆಯ್ಕೆ ಮಾಡಿರುವ ಹೆಸರುಗಳು. ಉತ್ತರ ಭಾರತದ ಸಮುದ್ರ ತೀರದ ಕಡೆಯಿಂದ ಈ ಬಾರಿ ಹಲವಾರು ಚಂಡಮಾರುತಗಳು ಏಳಲಿದ್ದು, ಇದಕ್ಕಾಗಿ 13 ದೇಶಗಳ ಪ್ರಾದೇಶಿಕ ಹವಾ ಮಾನ ವಿಭಾಗಗಳು ಮುಂಚಿತವಾಗೇ ಹುಡುಕಿ ಟ್ಟಿರುವ ಹೆಸರುಗಳನ್ನು ಭಾರತೀಯ ಹವಾ ಮಾನ ಇಲಾಖೆ ಘೋಷಿಸಿದೆ. ಈ ರೀತಿ ಒಟ್ಟು 169 ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಬರುವ ಕಡೆಯ ಚಂಡಮಾರುತದ ಹೆಸರು ಅಂಫಾನ್ ಆಗಿದ್ದು, ಇದನ್ನು ಥೈಲ್ಯಾಂಡ್ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.