ನಗರದತ್ತ ಹರಿದು ಬಂದ ಜನಸಂದಣಿ
ಅಂಗಡಿ ಮಳಿಗೆಗಳಿಗೆ ಹಸಿರು-ಹಳದಿ-ಕೆಂಪು ಗುರುತುಕಲರ್ ಕೋಡ್ ಮೂಲಕ ವಹಿವಾಟಿಗೆ ಸೂಚನೆ
Team Udayavani, Apr 30, 2020, 12:11 PM IST
ರಾಯಚೂರು: ವ್ಯಾಪಾರ ಮಳಿಗೆ ಮುಂಭಾಗ ಹಸಿರು ಬಣ್ಣ ಬಳಿದ ನಗರಸಭೆ ಸಿಬ್ಬಂದಿ.
ರಾಯಚೂರು: ಲಾಕ್‌ಡೌನ್ ಸಿಡಿಲಿಕೆಗಾಗಿ ಕಾದು ಕುಳಿತಿದ್ದ ಜನರು ಬುಧವಾರ ನಗರಕ್ಕೆ ಪುಂಖಾನುಪುಂಖವಾಗಿ ಆಗಮಿಸಿದರು. ಸಾಕಷ್ಟು ವ್ಯವಹಾರಗಳಿಗೆ ಆಸ್ಪದ ನೀಡದಿದ್ದರೂ ನಗರದಲ್ಲಿ ಜನದಟ್ಟಣೆಗೆ ಕೊರತೆ ಕಂಡು ಬರಲಿಲ್ಲ.
ಚಂದ್ರಮೌಳೇಶ್ವರ, ತೀನ್ ಕಂದಿಲ್, ಸ್ಟೇಶನ್ ರಸ್ತೆ, ಮಹಾವೀರ ಸರ್ಕಲ್ ಸೇರಿ ವಿವಿಧ ಸ್ಥಳಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಈ ಮುಂಚೆ ಕೃಷಿ ಮತ್ತು ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬಳಿಕ ಕೊರೊನಾ ವೈರಸ್ ಪ್ರಕರಣಗಳಿಲ್ಲದ ಕಾರಣಕ್ಕೆ ಹಸಿರು ವಲಯವನ್ನಾಗಿ ಗುರುತಿಸಿದ್ದರಿಂದ ಕೆಲವೊಂದು ಷರತ್ತುಗಳನ್ವಯ ಲಾಕ್‌ಡೌನ್ ಸಡಿಲಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವಹಿವಾಟು ನಡೆಸಬೇಕು ಎಂಬ ಕಟ್ಟೆಚ್ಚರ ನೀಡಲಾಗಿದೆ.
ಇದರಿಂದ ಅನೇಕ ಅಂಗಡಿ ಮುಂಗಟ್ಟುಗಳನ್ನು ತೆರಯಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಸಾಲುಗಟ್ಟಿದ್ದಾರೆ. ಮಾಲ್‌ಗಳು ಭರ್ತಿಯಾಗಿದ್ದವು. ಬೈಕ್, ಕಾರುಗಳ ಓಡಾಟ ಹೆಚ್ಚಾಗಿತ್ತು. ಆದರೆ, ಆಟೋಗಳಾಗಲಿ, ಸಾರಿಗೆ ಬಸ್‌ಗಳಾಗಲಿ ರಸ್ತೆಗೆ ಇಳಿಯಲಿಲ್ಲ. ಬಟ್ಟೆ ಅಂಗಡಿಗಳಾಗಲಿ, ಆಭರಣ ಅಂಗಡಿಗಳಾಗಲಿ ತೆರೆಯದ ಕಾರಣ ತುಸು ನಿರಾಳತೆ ಕಂಡು ಬಂತು.
ಕಲರ್ ಕೋಡ್ ಜಾರಿ
ಲಾಕ್‌ಡೌನ್ ವಿನಾಯಿತಿ ನೀಡಿದ ಮಾತ್ರಕ್ಕೆ ಮೈ ಮರೆಯದ ಜಿಲ್ಲಾಡಳಿತ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜನ ಮತ್ತು ವರ್ತಕರ ಹಿತದೃಷ್ಟಿಯಿಂದ ಕಲರ್ ಕೋಡ್ ಪದ್ಧತಿ ಜಾರಿಗೊಳಿಸಿದೆ. ನಗರದಲ್ಲಿರುವ ಅಂಗಡಿ ಮಳಿಗೆಗಳಿಗೆ ಹಸಿರು, ಹಳದಿ, ಕೆಂಪು ಬಣ್ಣಗಳ ಗುರುತು ಹಾಕಲಾಗುತ್ತಿದೆ. ಯಾವ ಬಣ್ಣದ ಗುರುತು ಉಳ್ಳವರು ಯಾವ ದಿನ ವಹಿವಾಟು ನಡೆಸಬೇಕು ಎಂದು ನಿರ್ದೇಶನ ನೀಡಿದೆ. ಆ ಮೂಲಕ ಜನದಟ್ಟಣೆ ಕಡಿಮೆ ಮಾಡುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ತಂತ್ರ ಅನುಸರಿಸಿದೆ. ಹಸಿರು ಬಣ್ಣ ಬಳಿದಿರುವ ಅಂಗಡಿಗಳು ಸೋಮವಾರ ಮತ್ತು ಗುರುವಾರ ತೆರೆಯಬೇಕು. ಹಳದಿ ಬಣ್ಣ ಬಳೆದಿರುವ ಅಂಗಡಿಗಳು ಮಂಗಳವಾರ ಮತ್ತು ಶುಕ್ರವಾರ, ಕೆಂಪು ಬಣ್ಣ ಬಳೆದಿರುವ ಅಂಗಡಿಗಳು ಬುಧವಾರ, ಶನಿವಾರ ತೆರೆಯಬೇಕು ವಹಿವಾಟು ನಡೆಸಬೇಕು ಎಂದು ತಿಳಿಸಲಾಗಿದೆ.
ನಗರದ ಮೂರು ಸಾವಿರಕ್ಕೂ ಅಧಿಕ ಅಂಗಡಿ ಮುಂಗಟ್ಟುಗಳಿಗೆ ಹಸಿರು, ಕೆಂಪು, ಹಳದಿ ಬಣ್ಣ ಬಳಿದು ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಡಲಾಗು ವುದು. ಎಲ್ಲ ವ್ಯಾಪಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾನಿಟೈಸರ್ ಬಳಸ ಬೇಕು. ಅಂಗಡಿ ಮಾಲೀಕರು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ತಿಳಿಸಲಾಗುತ್ತಿದೆ.
ಡಾ| ದೇವಾನಂದ ದೊಡ್ಡಮನಿ,
ನಗರಸಭೆ ಪೌರಾಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.