ಅಮೆರಿಕ: ಚಟುವಟಿಕೆ ಪುನಾರಂಭಕ್ಕೆ ಹಿಂಜರಿಕೆ
Team Udayavani, Apr 30, 2020, 4:29 PM IST
ನ್ಯೂಯಾರ್ಕ್: ಆದಷ್ಟು ಬೇಗ ಅಮೆರಿಕದಲ್ಲಿ ಎಲ್ಲ ಚಟುವಟಿಕೆಗಳನ್ನು ಆರಂಭಿಸಬೇಕೆಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹದಾಸೆಗೆ ಜನರು ತಣ್ಣೀರೆರಚಿದ್ದಾರೆ.
ಪಿಬಿಎಸ್ ನ್ಯೂಸ್ ಅವರ್, ಎನ್‌ಪಿಆರ್ ಹಾಗೂ ಮಾರಿಸ್ಟ್ ಪೋಲ್‌ಗೆ ಪ್ರತಿಕ್ರಿಯಿಸಿರುವ ಜನರು, ಈ ಕೂಡಲೇ ಒಟ್ಟಿಗೇ ಸಹಜ ಸ್ಥಿತಿಗೆ ತರುವ ಪ್ರಯತ್ನ ಅಪಾಯಕಾರಿ ಆಗಬಲ್ಲದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಸಾಮಾಜಿಕ ಅಂತರದಂಥ ಸೋಂಕು ನಿಯಂತ್ರಣ ಕ್ರಮಗಳನ್ನು ಎಲ್ಲ ಸ್ಥಿತಿಯಲ್ಲೂ ಅನುಸರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಪರೀಕ್ಷೆಗೊಳಪಡಿಸದೇ ಶಾಲೆಗಳಿಗೆ ಹೋಗುವುದು ಸರಿಯೇ ಎಂಬುದಕ್ಕೆ ಶೇ. 86 ರಷ್ಟು ಮಂದಿ ತಪ್ಪು ಎಂದಿದ್ದಾರೆ. ರೆಸ್ಟೋರೆಂಟ್‌ಗಳ ಮರು ಆರಂಭಕ್ಕೆ ಶೇ. 71 ರಷ್ಟು ಮಂದಿ ಸಹಮತ ವ್ಯಕ್ತಪಡಿಸಿಲ್ಲ. ಕ್ರೀಡೆಯೂ ಸೇರಿದಂತೆ ಇತರೆ ಚಟುವಟಿಕೆಗಳ ಆರಂಭಕ್ಕೆ ಶೇ. 8 ರಷ್ಟು ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ. ಶೇ. 79 ರಷ್ಟು ಮಂದಿಗೆ ಕೋವಿಡ್ ಎರಡನೇ ಅಲೆ ಬಂದು ಬಿಟ್ಟರೆ ಎಂಬ ಭಯ ಕಾಡುತ್ತಿದೆ. ಜತೆಗೆ ಜನ ಜೀವನ ಸಹಜ ಸ್ಥಿತಿಗೆ ಬರುವುದು ಅಂದುಕೊಂಡಷ್ಟು ಸುಲಭವಲ್ಲ ಹಾಗೂ ಒಮ್ಮೆಲೆ ಸಾಧ್ಯವೂ ಇಲ್ಲ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ. ಸೋಂಕು ಪ್ರಮಾಣ ತಡೆಗಟ್ಟಲು ಹಲವು ಪ್ರಯತ್ನಗಳು ನಡೆಸಿದರೂ ಎಣಿಸಿದಷ್ಟು ಯಶಸ್ವಿಯಾ ಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ತೆರವಿಗೆ ಹಲವು ರಾಜ್ಯಗಳು ಅರೆ ಮನಸ್ಸು ಹೊಂದಿವೆ. ಟ್ರಂಪ್ ಲಾಕ್‌ಡೌನ್ ತೆರವಿಗೆ ಬಹಳ ಪ್ರಯತ್ನಿಸು ತ್ತಿದ್ದು, ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಉತ್ಸುಕರಾಗಿದ್ದಾರೆ. ಇದಕ್ಕಾಗಿ ಒತ್ತಡ ತಂತ್ರವನ್ನೂ ಅನುಸರಿಸಿದರೂ ಇವರ ಮತ್ತು ಗವರ್ನರ್‌ಗಳ ಮಧ್ಯೆ ಪೂರ್ಣ ಸಹಮತ ಇನ್ನಷ್ಟೇ ಮೂಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.