60 ವರ್ಷ ಮೇಲ್ಪಟ್ಟವರ ಮಾಹಿತಿ ಸಂಗ್ರಹ: ಉಪ ತಹಶೀಲ್ದಾರ್
Team Udayavani, Apr 30, 2020, 2:46 PM IST
ಮಲೇಬೆನ್ನೂರು: ಪಟ್ಟಣದ ಸುನ್ನಿ ಜಾಮಿಯಾ ಶಾದಿ ಮಹಲ್‌ನಲ್ಲಿ ನಡೆದ ಬಿಎಲ್‌ಒಗಳ ಸಭೆಯಲ್ಲಿ ಉಪತಹಶೀಲ್ದಾರ್ ಆರ್. ರವಿ ಮಾತನಾಡಿದರು
ಮಲೇಬೆನ್ನೂರು: ಕೋವಿಡ್ ವೈರಸ್ ಹಬ್ಬುವುದನ್ನು ತಡೆಗಟ್ಟಲು ಸರ್ಕಾರ ಆಪ್ತಮಿತ್ರ ಆ್ಯಪ್ ಸಿದ್ದಪಡಿಸುತ್ತಿದ್ದು, ಆ ತಂತ್ರಾಂಶದಲ್ಲಿ 60 ವರ್ಷ ಮೇಲ್ಪಟ್ಟವರ ಮಾಹಿತಿಯನ್ನು ಅಳವಡಿಸಲಾಗುತ್ತಿದೆ ಎಂದು ಉಪ ತಹಶೀಲ್ದಾರ್ ಆರ್. ರವಿ ತಿಳಿಸಿದರು.
ಅವರು ಪಟ್ಟಣದ ಸುನ್ನಿ ಜಾಮಿಯಾ ಶಾದಿಮಹಲ್‌ನಲ್ಲಿ ಹೋಬಳಿ ವ್ಯಾಪ್ತಿಯ ಬಿಎಲ್‌ಒಗಳ ಸಭೆಯಲ್ಲಿ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿನ 60 ವರ್ಷ ಮೆಲ್ಪಟ್ಟವರ, ಕೋವಿಡ್ ಬಾಧಿತ ಪ್ರದೇಶದಿಂದ ಬಂದವರು, ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ರಕ್ತದೊತ್ತಡ, ಅಸ್ತಮಾ, ಎಚ್‌ಐವಿ ಇರುವಂತಹ ಸಾರ್ವಜನಿಕರ ವಿವರವನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ನಮೂನೆ-1 ಮತ್ತು 2ರಲ್ಲಿ ಮಾಹಿತಿ ಸಿದ್ಧಪಡಿಸಿ ಒಂದು ವಾರದೊಳಗೆ ನೀಡಬೇಕು. ನಮೂನೆ 1ರಲ್ಲಿ 60 ವರ್ಷ ಮೇಲ್ಪಟ್ಟವರ ಆಧಾರ್, ಚುನಾವಣೆ ಗುರುತಿನ ಚೀಟಿ, ಪಡಿತರ ಚೀಟಿ ಜೊತೆಗೆ ಅವರ ಆರೋಗ್ಯದ ಸ್ಥಿತಿಗತಿಗಳನ್ನು ನಮೂದಿಸಬೇಕು. ನಮೂನೆ 2ರಲ್ಲಿ ಮತದಾರರಲ್ಲದವರ ಹಾಗೂ ಮಕ್ಕಳ ವಿವಿರ ದಾಖಲಿಸಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಮೋಹನ್ ಬಿಎಲ್ ಒಗಳಿಗೆ ತರಬೇತಿ ನೀಡಿ ಮಾತನಾಡಿ, ಹರಿಹರ ತಾಲೂಕಿನಲ್ಲಿ 3,899 ಜನರ ಹೋಂ ಕ್ವಾರಂಟೈನ್ ಪೂರ್ಣಗೊಂಡಿದೆ. 31 ಪುರುಷರು, 17 ಮಹಿಳೆಯರು, ಐವರು ಮಕ್ಕಳು ಸೇರಿದಂತೆ 53 ಜನರು ವಿದೇಶದಿಂದ ಹರಿಹರ ತಾಲೂಕಿಗೆ ಬಂದಿದ್ದು ಅವರೆಲ್ಲಾ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ ಎಂದರು. ಚುನಾವಣಾ ವಿಭಾಗದ ಅ ಧಿಾರಿ ಸೋಮಶೇಖರ್ ಇದ್ದರು. ಸರ್ವೆ ಮಾಡಿ ದತ್ತಾಂಶ ಸಂಗ್ರಹಣೆ ಮಾಡಲು ಒಂದು ವಾರ ಸಾಕಾಗುವುದಿಲ್ಲ ಹೆಚ್ಚಿನ ಕಾಲಾವಕಾಶ ನೀಡುವಂತೆ ಸಭೆಯಲ್ಲಿದ್ದ ಬಿಎಲ್‌ಒಗಳು ಮನವಿ ಮಾಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಹೊಸ ಸೇರ್ಪಡೆ
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.