ಕೋವಿಡ್ ಸೋಂಕು : ಎರಡನೇ ಅಲೆ ಬಂದರೆ ಏನು?
Team Udayavani, Apr 30, 2020, 6:13 PM IST
ನ್ಯೂಯಾರ್ಕ್: ಈಗಾಗಲೇ ಕೋವಿಡ್-19ನಿಂದಾಗಿ ಸಂಪೂರ್ಣವಾಗಿ ಕುಸಿದು ಹೋಗಿರುವ ಅಮೆರಿಕ, ಅದನ್ನು ಮಣಿಸಲು ಎಲ್ಲ ಪ್ರಯತ್ನ ನಡೆಸುತ್ತಿದೆ. ಆದರೆ, ಯಾವ ಕಾರ್ಯತಂತ್ರಗಳೂ ಸಫಲವಾಗುತ್ತಿಲ್ಲ. ಈ ಮಧ್ಯೆಯೇ ಮತ್ತೂಂದು ಆಘಾತಕಾರಿ ವಿಷಯ ಬಹಿರಂಗವಾಗಿದ್ದು, ಸೋಕಿನಿಂದಾಗಿ ತೀವ್ರ ಆತಂಕದಲ್ಲಿರುವ ಅಮೆರಿಕಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೋಂಕು ಎರಡನೇ ಹಂತಕ್ಕೆ ಕಾಲಿಟ್ಟರೆ ಮುಂದೇನು ಎಂಬ ಚಿಂತೆ ಈಗಾಗಲೇ ದೊಡ್ಡಣ್ಣನನ್ನು ಕಾಡತೊಡಗಿದೆ. ಆದರೆ ಈ ಚಿಂತೆಯನ್ನು ಹೆಚ್ಚುಗೊಳಿಸುವಂತೆ ಸಂಶೋಧನೆಯ ವರದಿಯೊಂದು ಹೊರ ಬಿದ್ದಿದ್ದು, ಎರಡನೇ ಹಂತದಲ್ಲಿ ಕೋವಿಡ್ ಆಕ್ರಮಿಸಿದರೆ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗ್ರತ ಕ್ರಮವಾಗಿ ಯಾವ ಯೋಜನೆಗಳನ್ನು ರೂಪಿಸಿಲ್ಲ ಎನ್ನಲಾಗಿದೆ.
ಶೇ.42 ರಷ್ಟು ಮುಖ್ಯ ಸಿಎಫ್‌ಒಗಳು ಸೋಂಕಿನ ಎರಡನೇ ಘಟ್ಟವನ್ನು ಎದುರಿಸಲು ಸಿದ್ಧರಾಗಿಲ್ಲ ಎಂಬ ಆತಂಕಕಾರಿ ವಿಷಯವೊಂದನ್ನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ ಎಂದು ಔಟ್‌ಲುಕ್ ಇಂಡಿಯಾ ವರದಿ ಮಾಡಿದೆ.
ಜಾಗ್ರತೆ ವಹಿಸುವಲ್ಲಿ ನಿರ್ಲಕ್ಷ್ಯ
ಕೇವಲ ಶೇ.22ರಷ್ಟು ಸಿಎಫ್‌ಒಗಳು ಮಾತ್ರ ಎರಡನೇ ಹಂತದ ಕೋವಿಡ್-19 ಬಿಕ್ಕಟ್ಟಿನ ಸನ್ನಿವೇಶವನ್ನು ನಿಯಂತ್ರಿಸುವ ಯೋಜನೆಗಳನ್ನು ಹೊಂದಿದ್ದಾರೆ. ಆದರೆ, ಆಕಸ್ಮಿಕವಾಗಿ ಸೋಂಕು ಪ್ರಸರಣ ತೀವ್ರಗೊಂಡರೆ ಅದನ್ನು ತಡೆಹಿಡಿಯಲು ಯಾವ ಯೋಜನೆಗಳೂ ಸಹ ಇನ್ನೂ ಸಿದ್ದವಾಗಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಮುನ್ನೆಚ್ಚರ ವಹಿಸುವಲ್ಲಿ ನಿರ್ಲಕ್ಷé ತೋರಿರುವ ಸಿಎಫ್‌ಒಗಳು ತಮ್ಮ ಕಾರ್ಯಾಚರಣೆಯನ್ನು ಯಾವಾಗ ಪ್ರಾರಂಭಿ ಸಲಿದ್ದಾರೆ ಹಾಗೂ ನೌಕರರ ಸ್ಥಿತಿಗತಿಗಳ ಬಗ್ಗೆ ಏನೆಲ್ಲ ಸುರಕ್ಷತೆಯ ವಿಧಾನವನ್ನು ಕೈಗೊಂಡಿದ್ದಾರೆ ಎಂಬುದನ್ನೂ ಇದುವರೆಗೆ ಬಹಿರಂಗಗೊಳಿಸಿಲ್ಲ ಎಂದಿದೆ ವರದಿ.
ಆದಾಯ-ಲಾಭದ ಬಗ್ಗೆ ಚಿಂತನೆ
2020ಕ್ಕೆ ಅನುಗುಣವಾಗುವಂತೆ ಆದಾಯ ಮತ್ತು ಲಾಭದ ಬಗ್ಗೆ ಚಿಂತಿಸಿರುವ ಸಿಎಫ್‌ಒಗಳು ಹಣಕಾಸು ಯೋಜನೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಆದಕಾರಣ ವ್ಯಾವಹಾರಿಕ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿರುವ ಸುಮಾರು ಶೇ.42ರಷ್ಟು ಅಧಿಕಾರಿಗಳು ಕೋವಿಡ್-19ರ ಎರಡನೇ ಹಂತದಲ್ಲಿ ಎದುರಾಗಲಿರುವ ಯಾವುದೇ ಸನ್ನಿವೇಶಗಳಿಗೆ ತಯಾರಾಗಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ ಎಂದಿದೆ ಸಮೀಕ್ಷಾ ವರದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.