ನಾಳೆಯಿಂದ ಕೇಂದ್ರ ಸರಕಾರದ ಪಡಿತರ ವಿತರಣೆ
ನ್ಯಾಯಬೆಲೆ ಅಂಗಡಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಸಿ ಮನವಿ
Team Udayavani, May 1, 2020, 4:48 AM IST
ಪುತ್ತೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೇ 2ರಿಂದ ಕೇಂದ್ರ ಸರಕಾರದ ವತಿಯಿಂದ ಸರಬರಾಜು ಗೊಂಡಿರುವ ಪಡಿತರ ವಿತರಣೆ ಆರಂಭವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತುಬದ್ಧವಾಗಿ ನ್ಯಾಯಬೆಲೆ ಅಂಗಡಿಗಳು ಸಮರ್ಪಕ ಪಡಿತರ ವಿತರಣೆಗೆ ನಡೆಸಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ| ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಗುರುವಾರ ಪುತ್ತೂರು ಮಿನಿವಿಧಾನಸೌಧ ಸಭಾಂಗಣದಲ್ಲಿ ನಡೆದ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ವ್ಯವಸ್ಥೆಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ದಿನವೊಂದಕ್ಕೆ ಎಷ್ಟು ಪಡಿತರ ವಿತರಿಸಲಾಗುತ್ತದೆ ಎಂಬುದಕ್ಕೆ ಹೊಂದಿ ಕೊಂಡು ಟೋಕನ್ ನೀಡಬೇಕು. ಈ ನಿಟ್ಟಿನಲ್ಲಿ ಟೋಕನ್ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದರು.
ಒಟಿಪಿ ಅಥವಾ ಬಯೋಮೆಟ್ರಿಕ್ ಕಡ್ಡಾಯ
ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಮಾತನಾಡಿ, ರಾಜ್ಯ ಸರಕಾರ ನೀಡಿದ ಪಡಿತರವನ್ನು ಸಮರ್ಪಕ ರೀತಿಯಲ್ಲಿ ವಿತರಣೆಯು ನ್ಯಾಯಬೆಲೆ ಅಂಗಡಿಗಳಿಂದ ನಡೆದಿದೆ. ಇದೀಗ ಕೇಂದ್ರ ಸರಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ನೀಡಲಾಗುವ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರ ವಿತರಣೆ ಮಾಡಬೇಕು. ಹಿಂದಿನ ಪಡಿತರ ವಿತರಣೆಯಲ್ಲಿ ಒಟಿಪಿ, ಬಯೋಮೆಟ್ರಿಕ್ ಕಡ್ಡಾಯವಾಗಿರಲಿಲ್ಲ. ಆದರೆ ಈ ಬಾರಿ ಒಟಿಪಿ ಅಥವಾ ಬಯೋಮೆಟ್ರಿಕ್ ಬಳಕೆ ಕಡ್ಡಾಯವಾಗಿದೆ. ಪಡಿತರ ವಿತರಣೆಗೆ ಟೋಕನ್ ಪದ್ಧತಿ ಅನುಸರಿಸಬೇಕು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಕೋವಿಡ್ ನೋಡಲ್ ಅಧಿಕಾರಿ ರಾಜು ಮೊಗವೀರ ಮಾತನಾಡಿ, ಜನತೆಗೆ ತೊಂದರೆಯಾಗದಂತೆ ವಿತರಣೆ ನಡೆಯಬೇಕು. ಎಲ್ಲಿಯೂ ಲೋಪವಾಗದಂತೆ ಸಕಾಲಿಕ ಕ್ರಮ, ವ್ಯವಸ್ಥೆ ಅನುಸರಿಸಬೇಕು ಎಂದರು.
ತೂಕದಲ್ಲಿ ವ್ಯತ್ಯಾಸ
ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜುಗೊಳ್ಳುತ್ತಿರುವ ಅಕ್ಕಿ, ಗೋಧಿ ಗೋಣಿಗಳಲ್ಲಿ ನಿಗದಿತ ಕೆ.ಜಿ.ಗಿಂತ ಕಡಿಮೆ ಇರುತ್ತದೆ. ಇದರಿಂದ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿರುವ ಕೃಷಿ ಪರಿಷತ್ತಿನ ಸಹಕಾರ ಸಂಘಗಳಿಗೆ ನಷ್ಟ ಉಂಟಾಗುತ್ತಿದೆ. ಆದರೆ ನಾವು ಜನತೆಗೆ ಸರಿಯಾದ ತೂಕದ ಆಧಾರದಲ್ಲಿ ಪಡಿತರ ನೀಡಬೇಕಾಗುತ್ತದೆ. ಇದರ ನಷ್ಟವನ್ನು ಭರಿಸುವುದು ಹೇಗೆ? ಈ ಕುರಿತು ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಸವಣೂರು, ಕಾಣಿಯೂರು ಸೊಸೈಟಿ ವ್ಯವಸ್ಥಾಪಕರು ಅಧಿಕಾರಿಗಳನ್ನು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಡಾ| ಯತೀಶ್ ಉಳ್ಳಾಲ್, ಈ ರೀತಿಯಲ್ಲಿ ಅಕ್ಕಿ, ಗೋಧಿ ಹಾಗೂ ಬೇಳೆ ಕಡಿಮೆ ಬಂದರೆ ವರದಿ ಮಾಡಿ, ಸರಕಾರದ ಗಮನಕ್ಕೆ ತಂದು ಸರಿಯಾದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಹಾಲಿ ಶೇ. 75 ಮತ್ತು ಶೇ. 25 ಪ್ರಮಾಣದಲ್ಲಿ ಕುಚ್ಚಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿ ವಿತರಣೆಗೆ ಸೂಚನೆ ಇದೆ ಎಂದು ಎಸಿ ತಿಳಿಸಿದರು. ಉಪತಹಶೀಲ್ದಾರ್ ಸುಲೋಚನಾ, ಆಹಾರ ಇಲಾಖೆಯ ಸರಸ್ವತಿ, ರಾಜಣ್ಣ ಭಾಗವಹಿಸಿದ್ದರು.
ಪಡಿತರ ವಿತರಣೆ ವಿವರ
ಬಿಪಿಎಲ್ ಕಾರ್ಡ್: ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಪ್ರತಿ ಕುಟುಂಬಕ್ಕೆ 4 ಕೆ.ಜಿ. ಗೋಧಿ ಮತ್ತು 1 ಕೆ. ಜಿ. ಬೇಳೆ ನೀಡಲಾಗುವುದು.
ಅಂತ್ಯೋದಯ ಕಾರ್ಡ್: ಪ್ರತೀ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಪ್ರತಿ ಕಾರ್ಡಿಗೆ 1 ಕೆ.ಜಿ. ಬೇಳೆ.
ಎಪಿಎಲ್ ಕಾರ್ಡ್: ಅಸ್ತಿತ್ವದಲ್ಲಿರುವ ಎಪಿಎಲ್ ಕಾರ್ಡಿನಲ್ಲಿ ಅಕ್ಕಿ ಬೇಕು ಎಂದು ಸಮ್ಮತಿ ಸೂಚಿಸದ (ನಾಟ್ ವಿಲ್ಲಿಂಗ್) ಪಡಿತರದಾರರಿಗೆ ಮಾತ್ರ ಈ ಬಾರಿ ಅಕ್ಕಿ ನೀಡಲಾಗುವುದು. ಏಕ ವ್ಯಕ್ತಿ ಪಡಿತರ ಕಾರ್ಡ್‌ದಾರರಿಗೆ 5 ಕೆ.ಜಿ., ಹೆಚ್ಚು ಮಂದಿ ಇರುವ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ನೀಡಲಾಗುತ್ತದೆ (ಕೆ.ಜಿ.ಗೆ 15 ರೂ.). ಸಮ್ಮತಿ ಸೂಚಿಸಿದ ಎಪಿಎಲ್ ಕಾರ್ಡುದಾರರಿಗೆ ಪಡಿತರ ವಿತರಣೆ ಇರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.