ಸಂಬಂಧಗಳ ಸುತ್ತ ಡಿಎನ್‌ಎ
Team Udayavani, May 1, 2020, 8:48 AM IST
ಈಗಾಗಲೇ ಕನ್ನಡದಲ್ಲಿ ಚಿತ್ರ-ವಿಚಿತ್ರ ಶೀರ್ಷಿಕೆಯ ಸಿನಿಮಾಗಳು ಬಂದಿವೆ. ಚಿತ್ರದ ಶೀರ್ಷಿಕೆ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯೋದು ಈ ಸಿನಿಮಾಗಳ ಉದ್ದೇಶ. ಈಗ ಈ ಸಾಲಿಗೆ ಮತ್ತೂಂದು ಚಿತ್ರ ಸೇರ್ಪಡೆಯಾಗುತ್ತಿದೆ. ಅದು ಡಿಎನ್‌ಎ. ಹೀಗೊಂದು ಚಿತ್ರ ಸದ್ದಿಲ್ಲದೇ ತಯಾರಾಗಿ ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿದೆ. ಡಿಎನ್‌ಎ ಎಂಬ ಶೀರ್ಷಿಕೆ ಕೇಳಿ ಇದು ವೈದ್ಯ ಲೋಕಕ್ಕೆ ಸಂಬಂಧ ಪಟ್ಟ ಸಿನಿಮಾವೇ ಎಂದು ನೀವು ಕೇಳಿದರೆ, ಅದಕ್ಕೆ ಉತ್ತರ ಖಂಡಿತಾ ಅಲ್ಲ.
, ಎರಡು ಸುಂದರ ಕುಟುಂಬಗಳ ನಡುವಿನ ಭಾವನೆಗಳು ಹಾಗೂ ಸಂಬಂಧಗಳ ಕುರಿತಾಗಿದೆ. ವಜ್ರೆಶ್ವರಿ ಕಂಬೈನ್ಸ್ ಸಂಸ್ಥೆಯಲ್ಲಿ ಹತ್ತು ವರುಷ, ಟಿ.ಎಸ್.ನಾಗಭರಣ ಅವರೊಂದಿಗೆ ಸಹಾಯಕರಾಗಿ ಅನುಭವ ಪಡೆದುಕೊಂಡಿರುವ ಚಾಮರಾಜನಗರದ ಪ್ರಕಾಶ್ ರಾಜ್ ಮೇಹು ರಚನೆ, ಚಿತ್ರಕತೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಮೈಸೂರು ಮಾತಿನ ಭಾಗ, ಹಾಡಿಗಾಗಿ ಮಾರಿಕಣಿವೆ ಡ್ಯಾಂ, ಕೆಆರ್‌ಎಸ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಯಮುನಾ, ಮಕ್ಕಳಾಗಿ ಧ್ರುವ, ಮೇಘ, ಯು ಟರ್ನ್ ಖ್ಯಾತಿಯ ರೋಜರ್ ನಾರಾಯಣ್, ಎಸ್ತರ್‌ನರೋಣ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್ ಕೃಷ್ಣ ಚೈತನ್ಯ. ಇವರೊಂದಿಗೆ ಅನಿತಾ ಭಟ್, ನೀನಾಸಂ ಶ್ವೇತ ಮುಂತಾದವರು ನಟಿಸಿದ್ದಾರೆ.
ಜಯಂತ್ ಕಾಯ್ಕಣಿ, ಯೋಗರಾಜ ಭಟ್, ಕೆ.ವೈ.ನಾರಾಯಣಸ್ವಾಮಿ ಮತ್ತು ನಿರ್ದೇಶಕರ ಸಾಹಿತ್ಯದ ಒಟ್ಟು ಐದು ಹಾಡುಗಳಿಗೆ ಗಾಯಕ ಚೇತನ್ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಅಲ್ಲದೆ ಅಲ್ಲಮಪ್ರಭು ಕವನವನ್ನು ಸನ್ನಿವೇಶಕ್ಕೆ ತಕ್ಕಂತೆ ತೆಗೆದುಕೊಂಡಿದೆ. ಛಾಯಾಗ್ರಹಣ ರವಿಕುಮಾರ್ ಸಾನಾ ಅವರದಾಗಿದೆ. ಮಾತೃಶ್ರೀ ಎಂಟರ್ ಪ್ರೈಸಸ್ ಮುಖಾಂತರ ಮೈಲಾರಿ.ಎಂ ನಿರ್ಮಾಣ ಮಾಡಿರುವುದು ಮೊದಲ ಪ್ರಯತ್ನ. ಅಂದುಕೊಂಡಂತೆ ಆದರೆ ಕೋವಿಡ್ ನಂತರ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.