ಹೊಸಬರ ಹಾದಿ ಕಷ್ಟ: ಕೋವಿಡ್ ಎಫೆಕ್ಟ್ ಸಿನಿಮಾ ಬಿಡುಗಡೆಯಲ್ಲಿ ಗಣನೀಯ ಇಳಿಕೆ


Team Udayavani, May 1, 2020, 9:36 AM IST

ಕೋವಿಡ್ ಎಫೆಕ್ಟ್ ಸಿನಿಮಾ ಬಿಡುಗಡೆಯಲ್ಲಿ ಗಣನೀಯ ಇಳಿಕೆ

ಎಲ್ಲಾ ಓಕೆ ಸಿನಿಮಾ ಬಿಡುಗಡೆ ಇಳಿಕೆಯಾದರೆ ಅದರಿಂದ ಚಿತ್ರರಂಗಕ್ಕೆ ಲಾಭನಾ, ನಷ್ಟನಾ ಎಂದು ನೀವು ಕೇಳಬಹುದು. ಗುಣಮಟ್ಟದ ಕೆಲವೇ ಕೆಲವು ಸಿನಿಮಾಗಳು ಬಿಡುಗಡೆಯಾಗಿ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಂಡರೆ ಅದರಿಂದ ಚಿತ್ರರಂಗಕ್ಕೆ ಲಾಭವೇ. ಆದರೆ ಏಕಾಏಕಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮುಂದಕ್ಕೆ ಹೋದರೆ ವ್ಯವಹಾರಿಕ ದೃಷ್ಟಿಯಿಂದ ನಷ್ಟ.

2019 ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾದ ವರ್ಷ ಎಂದೇ ಹೇಳಲಾಗಿತ್ತು. 200ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿ ದಾಖಲೆ ನಿರ್ಮಿಸಿದ್ದವು. ಆದರೆ ಈ ವರ್ಷ ಆ ಸಂಖ್ಯೆಯನ್ನು ತಲುಪೋದು ಕಷ್ಟವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಿನಿಮಾ ಬಿಡುಗಡೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಅದಕ್ಕೆ ಕಾರಣ ಕೋವಿಡ್ ಎಂದು
ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಕೋವಿಡ್ ಮಹಾ ಮಾರಿಗೆ ಇಡೀ ಜಗತ್ತೆ ತಲ್ಲಣಿಸಿದೆ. ಇದರಿಂದ ಕನ್ನಡ ಚಿತ್ರರಂಗ ಕೂಡಾ ಹೊರತಾಗಿಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಚಿತ್ರರಂಗದಲ್ಲಿ ಯಾವುದೇ ಚಟುವಟಿಕೆಗಳಿಲ್ಲ. ಸಿನಿಮಾ ಬಿಡುಗಡೆಯಾಗಲಿ, ಚಿತ್ರೀಕರಣವಾಗಲಿ ನಡೆಯುತ್ತಿಲ್ಲ. ಒಂದು ವೇಳೆ ಎಲ್ಲವೂ ಸರಿ ಇದ್ದರೆ ಈ ಒಂದೂವರೆ ತಿಂಗಳಲ್ಲಿ ಕಡಿಮೆ ಎಂದರೂ 20 ಪ್ಲಸ್‌ ಸಿನಿಮಾಗಳು ಬಿಡುಗಡೆಯಾ ಗುತ್ತಿದ್ದವು. ಆದರೆ ಈ ಸಿನಿಮಾಗಳೆಲ್ಲವೂ ಅನಿರ್ದಿಷ್ಟಾವಧಿ ಮುಂದೆ ಹೋಗಿವೆ. ಹಾಗಂತ ಲಾಕ್‌ ಡೌನ್‌ ಮೇಗೆ ತೆರವುಗೊಂಡರೂ ಸಿನಿಮಾ ಬಿಡುಗಡೆಗೆ ಕೂಡಲೇ ಅನುಮತಿ ಸಿಗುತ್ತದೆ ಎಂದು ಹೇಳುವಂತಿಲ್ಲ. ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರವನ್ನು ಪಾಲಿಸೋದು ಕಷ್ಟಸಾಧ್ಯವಾದ್ದರಿಂದ ಕೋವಿಡ್  ನಿಯಂತ್ರಣಕ್ಕೆ ಬರುವವರೆಗೆ ಸಿನಿಮಾ ಬಿಡುಗಡೆಗೆ ಅವಕಾಶ ಸಿಗೋದು ಕಷ್ಟ ಎನ್ನುತ್ತಿವೆ ಮೂಲಗಳು. ಅಲ್ಲಿಗೆ ಏನಿಲ್ಲವೆಂದರೂ 50ರಿಂದ 60 ಸಿನಿಮಾಗಳ ಬಿಡುಗಡೆ ಪ್ಲ್ಯಾನ್‌ ಉಲ್ಟಾ ಆಗುತ್ತವೆ. ಈ ಎಲ್ಲಾ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕದೇ ಬೇರೆ ವಿಧಿ ಇಲ್ಲ. ಹೇಗೋ ಧೈರ್ಯ ಮಾಡಿ ಸಿನಿಮಾ ಬಿಡುಗಡೆ ಮಾಡಿ ಬಿಡೋಣ ಎಂದು ಮುಂದೆ ಬರುವಂತೆಯೂ ಇಲ್ಲ. ಏಕೆಂದರೆ ಸ್ಟಾರ್‌ ಸಿನಿಮಾಗಳು ಸರತಿಯಲ್ಲಿ ನಿಂತಿವೆ. ರಾಬರ್ಟ್‌, ಕೋಟಿಗೊಬ್ಬ -3, ಪೊಗರು, ಸಲಗ, 100, ಯುವರತ್ನ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಈ ಸಿನಿಮಾಗಳ ನಡುವೆ ಬಂದರೆ ಸಿನಿಮಾ ಬಿಡುಗಡೆಯಾದ ಸಂತಸ ಸಿಗಬಹುದೇ ಹೊರತು ಅದರಾಚೆ ಯಾವುದೇ ಲಾಭವಾಗಬಹುದು. ಆ ಕಾರಣದಿಂದ ಹೊಸಬರ ಸಿನಿಮಾಗಳ ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ. ಅಲ್ಲಿಗೆ ಬಿಡುಗಡೆಯ ಸಂಖ್ಯೆಯಲ್ಲೂ ಗಣನೀಯವಾಗಿ ಇಳಿಕೆಯಾಗಲಿದೆ.

ಎಲ್ಲಾ ಓಕೆ ಸಿನಿಮಾ ಬಿಡುಗಡೆ ಇಳಿಕೆಯಾದರೆ ಅದರಿಂದ ಚಿತ್ರರಂಗಕ್ಕೆ ಲಾಭನಾ, ನಷ್ಟನಾ ಎಂದು ನೀವು ಕೇಳಬಹುದು. ಗುಣಮಟ್ಟದ ಕೆಲವೇ ಕೆಲವು ಸಿನಿಮಾಗಳು ಬಿಡುಗಡೆಯಾಗಿ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಂಡರೆ ಅದರಿಂದ ಚಿತ್ರರಂಗಕ್ಕೆ ಲಾಭವೇ. ಆದರೆ ಏಕಾಏಕಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮುಂದಕ್ಕೆ ಹೋದರೆ ವ್ಯವಹಾರಿಕ ದೃಷ್ಟಿಯಿಂದ ನಷ್ಟ. ಏಕೆಂದರೆ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆ ಎಂದು ಬಂದಾಗ ಅದರದ್ದೇ ಆದ ನೆಟ್‌ವರ್ಕ್‌ ಇದೆ. ವಿತರಕ, ಪ್ರದರ್ಶಕ, ಪ್ರಚಾರ, ಚಿತ್ರಮಂದಿರದ ಒಳ-ಹೊರಗಿನ ಲೆಕ್ಕಾಚಾರ … ಹೀಗೆ ಎಲ್ಲವೂ ಒಂದು ಸಿನಿಮಾದ ಬಿಡುಗಡೆಯನ್ನು ಅವಲಂಭಿಸಿರುತ್ತದೆ. ಅದಕ್ಕಿಂತ ಹೆಚ್ಚಾಗಿ ಸಿನಿಮಾದ ಸೋಲು-ಗೆಲುವು ಏನೇ ಇರಬಹುದು, ಚಿತ್ರರಂಗವನ್ನು ಸದಾ ಚಟುವಟಿಕೆ ಯಲ್ಲಿರುವಂತೆ
ಮಾಡೋದು ಸಿನಿಮಾದ ಬಿಡುಗಡೆಯೇ. ಶುಕ್ರವಾರದ ಸಂಭ್ರಮದಲ್ಲಿ ಸಾಕಷ್ಟು ಮಂದಿ ಬದುಕು ಕಟ್ಟಿಕೊಳ್ಳುತ್ತಾರೆ ಕೂಡಾ. ಆದರೆ ಈ ವರ್ಷ ಸಂಭ್ರಮ ಮಂಕಾಗಲಿದೆಯೇ ಎಂಬ ಭಯ ಸಿನಿಪ್ರೇಮಿಗಳನ್ನು ಕಾಡುತ್ತಿರೋದಂತೂ ಸುಳ್ಳಲ್ಲ.

ಹೊಸಬರ ಹಾದಿ ಕಷ್ಟ ಕೋವಿಡ್ ಎಫೆಕ್ಟ್ ದಿಂದ  ಚಿತ್ರರಂಗದಲ್ಲಿ ದೊಡ್ಡ ಹೊಡೆತ ತಿನ್ನುವವರು ಹೊಸಬರು. ಏಕೆಂದರೆ ಹೊಸಬರ ಸಿನಿಮಾಗಳು ಮೊದಲಿ ನಿಂದಲೂ ಒಮ್ಮೆಲೇ ಟೇಕಾಫ್‌ ಆಗೋದು ಸ್ವಲ್ಪ ತಡವಾಗಿಯೇ. ಆದರೆ, ಕೋವಿಡ್ ಹೊಡೆತದಿಂದಾಗಿ ಹೊಸಬರಿಗೆ ಚಿತ್ರಮಂದಿರ ಸಿಗೋದು ಕೂಡಾ ಕಷ್ಟ ಎಂಬಂತಾಗಿದೆ. ಸ್ಟಾರ್‌ಗಳ ಸಿನಿಮಾಕ್ಕಾದರೆ ಅವರದ್ದೇ ಆದ ಅಭಿಮಾನಿ ವರ್ಗವಿರುತ್ತದೆ. ಆದರೆ, ಹೊಸಬರು ಜೀರೋ  ದಿಂದಲೇ ತಮ್ಮ ಪಯಣ ಆರಂಭಿಸಬೇಕು.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Yogi spoke about Sidlingu 2 Movie

Sidlingu 2 Movie: ಕಾಮನ್‌ಮ್ಯಾನ್‌ ದುನಿಯಾದಲ್ಲಿ ಸಿದ್ಲಿಂಗು ಕನಸು

Pruthvi Amber spoke about his Bhuvanam Gaganam movie

Bhuvanam Gaganam: ನಗ್ತಾ ನಗ್ತಾ ಅಳಿಸ್ತೀನಿ…:  ಪೃಥ್ವಿ ನಿರೀಕ್ಷೆ

Unlock Raghava: ಅನ್‌ಲಾಕ್‌ ಮಿಲಿಂದ್‌; ಬರ್ತೀರಾ, ನೋಡ್ತೀರಾ, ನಗ್ತೀರಾ…

Unlock Raghava: ಅನ್‌ಲಾಕ್‌ ಮಿಲಿಂದ್‌; ಬರ್ತೀರಾ, ನೋಡ್ತೀರಾ, ನಗ್ತೀರಾ…

Roopesh Shetty starer Adhipatra kannada movie

Roopesh Shetty: ಕರಾವಳಿ ಸೊಗಡಿನ ‘ಅಧಿಪತ್ರ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.