ರಿಲಯನ್ಸ್‌ನಿಂದಲೂ ವೇತನ ಕಡಿತ
Team Udayavani, May 1, 2020, 10:29 AM IST
ಮುಂಬೈ: ಮಾ.25ರಿಂದ ದೇಶಾದ್ಯಂತ ಹೇರಲಾಗಿರುವ ದಿಗ್ಬಂಧನದ ಪರಿಣಾಮ ಎಲ್ಲ ಕಂಪನಿಗಳು ನಷ್ಟದ ಸುಳಿಯಲ್ಲಿವೆ. ಒಂದೊಂದೇ ಕಂಪನಿಗಳು ನೌಕರರ ವೇತನ ಕಡಿತ ಮಾಡುವ ನಿರ್ಧಾರ ಮಾಡುತ್ತಿವೆ. ಇದೀಗ ದೇಶದ ಬೃಹತ್ ಕಂಪನಿ, ಮುಕೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಕೂಡಾ, ಬಹುತೇಕ ನೌಕರರ ವೇತನ ಕಡಿತ ಮಾಡುವುದಾಗಿ ಪ್ರಕಟಿಸಿದೆ. ಕಂಪನಿಯ ಮುಖ್ಯಸ್ಥ ಮುಕೇಶ್ ತಮ್ಮ ಸಂಪೂರ್ಣ ವೇತನ ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ. ಅವರಿಗೆ ಸತತ 11 ವರ್ಷದಿಂದ 15 ಕೋ.ರೂ. ಸಂಭಾವನೆ ಬರುತ್ತಿದೆ.ವಾರ್ಷಿಕವಾಗಿ 15 ಲಕ್ಷ ರೂ. ವೇತನ ಪಡೆಯುವವರಿಗೆ ರಿಲಯನ್ಸ್ ವೇತನ ಕಡಿತ ಮಾಡುವುದಿಲ್ಲ. ಅದಕ್ಕಿಂತ ಹೆಚ್ಚು ಸಂಭಾವನೆ ಇದ್ದವರಿಗೆ, ಶೇ.10ರಿಂದ 50ರವರೆಗೆ ಕತ್ತರಿಯಾಗಲಿದೆ. ಇನ್ನು ಕಂಪನಿಯ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ನಾಯಕರು ಶೇ.30ರಿಂದ 50ರಷ್ಟು ವೇತನ ಬಿಟ್ಟುಕೊಡಲಿದ್ದಾರೆ.
ತ್ತೈಮಾಸಿಕ ಫಲಿತಾಂಶ: ಲಾಭ ಶೇ.39ರಷ್ಟು ಕುಸಿತ
ರಿಲಯನ್ಸ್‌ನ ಬಹು ನಿರೀಕ್ಷಿತ ಮೊದಲ ತ್ತೈಮಾಸಿಕ ಫಲಿತಾಂಶ ಪ್ರಕಟವಾಗಿದೆ. 2020ರ ಜನವರಿಯಿಂದ ಮಾರ್ಚ್‌ವರೆಗಿನ ಮೊದಲ ತ್ತೈಮಾಸಿಕ ಫಲಿತಾಂಶದಲ್ಲಿ ನಷ್ಟವೇ ಪ್ರಮುಖ ಸಂಗತಿಯಾಗಿದೆ. ತೈಲ ಬೆಲೆ ಕುಸಿದಿರುವುದರಿಂದ, ಅದರ ತೈಲ ಸಂಸ್ಕರಣ ಘಟಕಗಳು ಭಾರೀ ನಷ್ಟ ದಾಖಲಿಸಿವೆ. ನಿವ್ವಳ ಲಾಭ ಶೇ.39ರಷ್ಟು ಕುಸಿದು, 6348 ಕೋಟಿ ರೂ.ಗೆ ಮುಟ್ಟಿದೆ. ಕಳೆದವರ್ಷ ಇದೇ ಅವಧಿಯಲ್ಲಿ ಕಂಪನಿ, 10,362 ಕೋಟಿ ರೂ. ಲಾಭ ದಾಖಲಿಸಿತ್ತು. ದೂರಸಂಪರ್ಕದಿಂದ ಹಿಡಿದು ತೈಲದವರೆಗೆ ರಿಲಯನ್ಸ್ ಒಟ್ಟಾರೆ ಆದಾಯ, 1,39,283 ಕೋಟಿ ರೂ.ಗೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,42,565 ಕೋಟಿ ರೂ. ಆದಾಯವಿತ್ತು. ಇದೇ ವೇಳೆ ಕಂಪನಿ 53,125 ಕೋಟಿ ರೂ. ಹಣ ಸಂಗ್ರಹಿಸುವ ಮಹತ್ವದ ಯೋಜನೆಗೆ ಒಪ್ಪಿಗೆ ನೀಡಿದೆ.
ವಾರಂಟಿ ಅವಧಿ ವಿಸ್ತರಿಸಿದ ಮೊಬೈಲ್ ಕಂಪನಿಗಳು
ಮುಂಬೈ: ಕೋವಿಡ್ ಪರಿಣಾಮ ಗ್ರಾಹಕರು ಒತ್ತಡಕ್ಕೊಳಗಾಗಿದ್ದಾರೆ. ಅವರಿಗೆ ವಿವಿಧ ಕಂಪನಿಗಳು ಬೇರೆ ಬೇರೆ ರೀತಿಯಲ್ಲಿ ನೆರವಿಗೆ ಬರುತ್ತಿವೆ. ಈ ಪೈಕಿ ಮೊಬೈಲ್ ಕಂಪನಿಗಳು ಗ್ರಾಹಕರಿಗೆ ವಾರಂಟಿ ಅವಧಿಯನ್ನು ಉಚಿತವಾಗಿ ಹೆಚ್ಚಿಸಿ ಬೆಂಬಲಕ್ಕೆ ನಿಂತಿವೆ. ಮಾರ್ಚ್ 20ರಿಂದ ಏ.30ರ ನಡುವೆ ಯಾರ್ಯಾರ ವಾರಂಟಿ ಅವಧಿ ಮುಗಿಯುತ್ತದೋ, ಅದು ತನ್ನಷ್ಟಕ್ಕೆ ತಾನೇ ಮೇ 31ರವರೆಗೆ ವಿಸ್ತೃತಗೊಳ್ಳಲಿದೆ. ಸ್ಯಾಮ್ಸಂಗ್, ಎಲ್‌ಜಿ, ರಿಯಲ್ ಮಿ, ಒಪ್ಪೊ, ವಿವೊ, ಒನ್‌ಪ್ಲಸ್‌ನಂತಹ ಕಂಪನಿಗಳು ವಾರಂಟಿ ವಿಸ್ತರಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.