ಮೊಳಕಾಲ್ಮೂರಿಗೂ ವಿವಿ ಸಾಗರ ನೀರು!
ನೀರು ಬಿಡುಗಡೆಗೆ ಸರ್ಕಾರದ ಆದೇಶಗೆಲುವಿನ ನಗು ಬೀರಿದ ಸಚಿವ ಶ್ರೀರಾಮುಲು
Team Udayavani, May 1, 2020, 11:26 AM IST
ನಾಯಕನಹಟ್ಟಿ: ವಾಣಿವಿಲಾಸ ಸಾಗರದಿಂದ ನೀರು ಪಡೆಯಲು ಚಳ್ಳಕೆರೆ ಹಾಗೂ ಹಿರಿಯೂರು ಶಾಸಕರ ಸ್ಪರ್ಧೆ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ತಾವು ಪ್ರತಿನಿಧಿಸುವ
ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಗೆ 0.25 ಟಿಎಂಸಿ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2005ರಲ್ಲಿ ಚಳ್ಳಕೆರೆ ತಾಲೂಕಿಗೆ 0.25 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈ ಪ್ರಮಾಣದ ನೀರು ಹಿರಿಯೂರು ತಾಲೂಕಿನಲ್ಲಿಯೇ ಪೂರ್ಣಗೊಂಡಿತ್ತು. ವಿವಿ ಸಾಗರದಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಬಾರದು ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪಟ್ಟು ಹಿಡಿದಿದ್ದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಚಳ್ಳಕೆರೆ ತಾಲೂಕಿನ ಗಡಿಯಿಂದ 0.25 ಟಿಎಂಸಿ ನೀರು ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ವೇದಾವತಿ ನದಿಗೆ ವಿವಿ ಸಾಗರದಿಂದ ನೀರು ಹರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಇವರಿಬ್ಬರ ನಡುವೆ ತಮ್ಮ ಕ್ಷೇತ್ರ ವ್ಯಾಪ್ತಿಯ ಜನರಿಗೆ 0.25 ಟಿಎಂಸಿ ನೀರು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. “ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎನ್ನುವಂತೆ ಎರಡು ತಾಲೂಕುಗಳ ನಡುವಿನ ನೀರಿನ ಜಗಳದಲ್ಲಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಲಾಭವಾಗಿದೆ.
ಈ ಸಮಸ್ಯೆ ತಾರಕಕ್ಕೇರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಚಳ್ಳಕೆರೆಗೆ ದಕ್ಕಬೇಕಾದ 0.25 ನೀರು ಬಂದಿಲ್ಲ. ತಕ್ಷಣ ಚಳ್ಳಕೆರೆ ಗಡಿಯಲ್ಲಿ ಗೇಜ್ ಅಳವಡಿಸಿ 0.25 ಟಿಎಂಸಿ ನೀರು ಒದಗಿಸಬೇಕು. ಜತೆಗೆ ಇದೇ ನದಿ ಪಾತ್ರದಲ್ಲಿರುವ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿಗಾಗಿ 0.25 ಟಿಎಂಸಿ ನೀರು ಒದಗಿಸುವಂತೆ ಜಲ ಸಂಪನ್ಮೂಲ ಸಚಿವ ಹಾಗೂ ಮುಖ್ಯಮಂತ್ರಿಯವರಿಗೆ ಏ. 29 ರಂದು ಪತ್ರ ಬರೆದಿದ್ದರು. ತಕ್ಷಣ ಈ ಪತ್ರಗಳಿಗೆ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಸ್ಪಂದಿಸಿದ್ದಾರೆ. ಚಳ್ಳಕೆರೆಗೆ ನೀರು ಹರಿಸುವುದರ ಜತೆಗೆ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಗೆ 0.25 ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳಿಂದ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಏ. 30 ರಂದು ಆದೇಶ ರವಾನೆಯಾಗಿದೆ.
ಮೊಳಕಾಲ್ಮೂರಿನ ಯಾವ ಹಳ್ಳಿಗಳಿಗೆ ಅನುಕೂಲ?
ಮೊಳಕಾಲ್ಮೂರು ಕ್ಷೇತ್ರದ ಕ್ಯಾತಗೊಂಡನಹಳ್ಳಿ, ಗುಡಿಹಳ್ಳಿ, ರೇಣುಕಾಪುರ, ಬಸಾಪುರ, ಭೋಗನಹಳ್ಳಿ ಭೋಗನಹಳ್ಳಿ, ಮಿಟ್ಲಕಟ್ಟೆ ಗ್ರಾಮಗಳ ಜನರಿಗೆ ವಿವಿ ಸಾಗರ ನೀರಿನಿಂದ ಅನುಕೂಲವಾಗಲಿದೆ. ಚಳ್ಳಕೆರೆ ಮತ್ತು ಹಿರಿಯೂರು ಕ್ಷೇತ್ರದ ಶಾಸಕರ ಜಗಳದ ಮಧ್ಯಸ್ಥಿಕೆ ವಹಿಸಿದ್ದ ಬಿ. ಶ್ರೀರಾಮುಲು ಜಗಳ ಬಗೆಹರಿಸಿ ತಮ್ಮ ಕ್ಷೇತ್ರದ ಜನರಿಗೆ ನೀರು ಹರಿಸಿ ಹಳ್ಳಿಗಳ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.