ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳ ಶುಲ್ಕ ಹೆಚ್ಚಳ
Team Udayavani, May 1, 2020, 3:48 PM IST
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ಗಳ ಶುಲ್ಕವನ್ನು ಶೇ. 20ರಿಂದ 30ರಷ್ಟು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಖಾಸಗಿ ವೈದ್ಯಕೀಯ ಕಾಲೇಜು, ವಿಶ್ವವಿದ್ಯಾಲಯ ಹಾಗೂ ಡೀಮ್ಡ್ ವಿವಿಗಳಲ್ಲಿ ಖಾಸಗಿ ಕೋಟಾದಡಿ ಸೇರುವ ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.30ರಷ್ಟು ಹಾಗೂ ಸರ್ಕಾರಿ ಕೋಟಾದಡಿ ಸೇರು ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.20ರಷ್ಟು ಏರಿಕೆ ಮಾಡಲಾಗಿದೆ.
2020-21ನೇ ಸಾಲಿಗೆ ಅನ್ವಯವಾಗುವಂತೆ ರಾಜ್ಯದ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ಖಾಸಗಿ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಕ್ಲಿನಿಕಲ್ ವಿಭಾಗವರು 11,34,705 ರೂ. ಪ್ಯಾರ ಕ್ಲಿನಿಕಲ್ ವಿದ್ಯಾರ್ಥಿಗಳು 2,83,677 ರೂ. ಹಾಗೂ ಪ್ರಿ-ಕ್ಲಿನಿಕ್ ವಿದ್ಯಾಥಿ ಗಳು 1,42,698 ರೂ. ಶುಲ್ಕ ಪಾವತಿಸಬೇಕು. ಸರ್ಕಾರಿ ಕೋಟಾದ ವಿದ್ಯಾರ್ಥಿಗಳು ಕ್ರಮವಾಗಿ 6,98,280 ರೂ. ಮತ್ತು 1,74,570 ರೂ. ಹಾಗೂ 87,286 ರೂ. ಪಾವತಿಸಬೇಕು. ಸ್ನಾತಕೋ ತ್ತರ ದಂತವೈದ್ಯಕೀಯ ಕೋರ್ಸ್ಗೆ ಖಾಸಗಿ ಕೋಟಾದ ವಿದ್ಯಾರ್ಥಿಗಳು 6,05,176 ರೂ. ಹಾಗೂ ಸರ್ಕಾರಿ ಕೋಟಾದ ಅಭ್ಯರ್ಥಿಗಳು 3,57,076 ರೂ. ಪಾವತಿಸಬೇಕು ಎಂದು ಸರ್ಕಾರ ಶುಲ್ಕ ಪರಿಷ್ಕೃತ ಆದೇಶದಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.