ಸೀಲ್‌ಡೌನ್ ಬಡಾವಣೆಗೆ ಹೋಗಿದ್ದಿರಾ?
ಬಜೆಟ್ ಅಧಿವೇಶನದಲ್ಲಿ ಮಾತಾಡಿದ್ದು ಗೊತ್ತಾ? ಗುಳೆ ಹೋದವರಿಗೆ ಏನು ಮಾಡಿದ್ದಿರಿ?
Team Udayavani, May 1, 2020, 3:55 PM IST
ವಾಡಿ: ಲಾಕ್‌ಡೌನ್ ಸಂಕಟದಲ್ಲಿ ತೊಂದರೆ ಅನುಭವಿಸುತ್ತಿರುವ ಪಟ್ಟಣದ ಬಡ ಕುಟುಂಬಗಳಿಗೆ ಶಾಸಕ ಪ್ರಿಯಾಂಕ್ ಖರ್ಗೆ ಆಹಾರದ ಕಿಟ್ ವಿತರಿಸಿದರು. ತಹಶೀಲ್ದಾರ್ ಉಮಾಕಾಂತ ಹಳ್ಳೆ, ಮೈನಾಬಾಯಿ ರಾಠೊಡ, ಮಹೆಮೂದ್ ಸಾಹೇಬ ಇದ್ದರು.
ವಾಡಿ: ನಾನು ಕ್ಷೇತ್ರಕ್ಕೆ ಬಂದಿಲ್ಲ ಎಂದು ಆರೋಪ ಮಾಡುವವರು ಬಜೆಟ್ ಅಧಿವೇಶನ ಯಾವಾಗಿತ್ತು? ಸಂವಿಧಾನದ ಕುರಿತು ಚರ್ಚೆ ಯಾವಾಗ ಆಗಿತ್ತು? ಎಷ್ಟು ದಿನಗಳ ವರೆಗೆ ಸದನ ನಡೆಯಿತು? ಎದುರಾಗಲಿರುವ ಕೋವಿಡ್ ಸಂಕಟದ ಕುರಿತು ಅಲ್ಲಿ ನಾನೇನು ಮಾತಾಡಿದ್ದಿನಿ ಎನ್ನುವ ಅರಿವು ಇರಬೇಕು ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಾಹೇಬ ಫಂಕ್ಷನ್‌ಹಾಲ್‌ನಲ್ಲಿ ಗುರುವಾರ ವಿವಿಧ ಬಡಾವಣೆಯ 1500 ಪಡಿತರ ಚೀಟಿ ವಂಚಿತ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ರೇಷನ್ ಕಿಟ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚುನಾವಣೆ ವೇಳೆ ಮುಂಬೈ ಮತ್ತು ಪುಣೆ ನಗರದಲ್ಲಿದ್ದ ಬಂಜಾರಾ ಮತದಾರರನ್ನು ಕರೆತರಲು ಬಸ್ ಕಳಿಸುತ್ತಿದ್ದರು. ಈಗೇಕೆ ಕೋವಿಡ್ ಸಂಕಟದಲ್ಲಿ ಸಿಕ್ಕ ತಮ್ಮ ಸಮುದಾಯದವರನ್ನೆ ಸಂಸದರು ಕರೆಸುತ್ತಿಲ್ಲ? ಯಡಿಯೂರಪ್ಪ ಅವರಿಗೆ ಒಂದು ಪತ್ರನಾದರೂ ಬರೆದಿದ್ದಾರಾ? ಎಂದು ಪ್ರಶ್ನಿಸಿದರು.
ಲಾಕ್‌ಡೌನ್ ಘೋಷಣೆಯಿಂದ ಬೆಂಗಳೂರಿನಲ್ಲಿ ತೊಂದರೆಗೊಳಗಾದ ಕಲಬುರಗಿಯ 2400 ಕುಟುಂಬಗಳಿಗೆ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ, ಮುಂಬೈನಲ್ಲಿರುವ 400 ಕುಟುಂಬಗಳಿಗೆ
ರೇಷನ್ ಕಿಟ್ ಕೊಟ್ಟಿರೋದು ನಾನು. ಚಿತ್ತಾಪುರ ತಾಲೂಕಿನಲ್ಲಿ 3000 ಕಿಟ್ ಕೊಡುತ್ತಿರೋದು ನಾನು. 24 ತಾಸು ವಾಡಿ ನಗರದಲ್ಲೇ ಇರುವ ಮಾಜಿ ಶಾಸಕ ವಾಲ್ಮೀಕಿ ನಾಯಕ ಪಕ್ಕದಲ್ಲೇ
ಸೀಲ್‌ಡೌನ್ ಬಡಾವಣೆಗಳಿವೆ ಹೋಗಿ ನೋಡಿದ್ದಾರಾ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.