ಮಂಗಳೂರು ಮತ್ತು ಬಂಟ್ವಾಳದಲ್ಲಿ ಮತ್ತೆ ಕೋವಿಡ್ ಕಳವಳ: ಇಬ್ಬರಿಗೆ ಸೋಂಕು ದೃಢ
Team Udayavani, May 1, 2020, 6:15 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದೆ. ಒಂದು ಪ್ರಕರಣ ಬಂಟ್ವಾಳದಲ್ಲಿ ದೃಢವಾದರೆ ಮತ್ತೊಂದು ಮಂಗಳೂರಿನ ವ್ಯಕ್ತಿಗೆ ಸೋಂಕು ತಾಗಿರುವುದು ಖಚಿತವಾಗಿದೆ.
ಬಂಟ್ವಾಳದ 69 ವರ್ಷದ ವೃದ್ಧನಿಗೆ ಸೋಂಕು ದೃಢವಾಗಿದೆ. ಇವರಿಗೆ ಸೋಂಕಿತ ಸಂಖ್ಯೆ 390ರ ಸಂಪರ್ಕದಿಂದ ಸೋಂಕು ತಾಗಿದೆ. ಏಪ್ರಿಲ್ 19ರಂದು ಕೋವಿಡ್-19 ಸೋಂಕಿಗೆ ಬಲಿಯಾದ ಮಹಿಳೆಯ ಸಂಬಂಧಿಯಾಗಿರುವ ಇವರು ಸಾವನ್ನಪ್ಪಿದ ಮಹಿಳೆಯ ನೆರೆಮನೆಯಲ್ಲಿ ವಾಸವಿದ್ದರು.
ಮತ್ತೋರವ ಸೋಂಕಿತ 62 ವರ್ಷದ ಪುರುಷ ಮಂಗಳೂರಿನ ನಿವಾಸಿ. ಗುರುವಾರ ಕೋವಿಡ್-19 ಪಾಸಿಟಿವ್ ಆಗಿದ್ದ ಮಹಿಳೆಯ ( ಪಿ 536)ರ ಪತಿಯಾಗಿರುವ ಇವರಿಗೂ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 24 ಜನರಿಗೆ ಸೋಂಕು ತಾಗಿರುವುದು ಧೃಢವಾಗಿದೆ. ಇದರಿಂದ ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಇದರಲ್ಲಿ 251 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 22 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಮತ್ತು ಓರ್ವ ಸೋಂಕಿತ ಕೋವಿಡ್-19 ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.