ಸಾಸ್ತಾನ ಟೋಲ್ಗೇಟ್: ಒಂದೇ ಗೇಟ್ನಿಂದಾಗಿ ವಾಹನ ದಟ್ಟನೆ ಸಮಸ್ಯೆ
Team Udayavani, May 2, 2020, 5:31 AM IST
ಕೋಟ: ಲಾಕ್ಡೌನ್ ನಿಯಮದಲ್ಲಿ ಒಂದಷ್ಟು ಸಡಿಲವಾಗಿರು ವುದರಿಂದ ವಾಹನ ಸಂಚಾರ ಹೆಚ್ಚುತ್ತಿದೆ. ಆದರೆ ಸಾಸ್ತಾನ ಟೋಲ್ಗೇಟ್ನಲ್ಲಿ ಇನ್ನೂ ಎರಡು ಬದಿ ಒಂದೇ ಗೇಟ್ನಲ್ಲಿ ವಾಹನಗಳಿಗೆ ಅವಕಾಶವಿರುವುದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದು, ತುರ್ತು ಕಾರ್ಯಗಳಿಗೆ ತೆರಳುವವರಿಗೆ ಸಮಸ್ಯೆಯಾಗುತ್ತಿದೆ.
ಪ್ರತಿದಿನ ಬೆಳಗ್ಗೆ 11ರ ತನಕ ಟೋಲ್ನಲ್ಲಿ ವಾಹನದಟ್ಟನೆ ಹೆಚ್ಚುತ್ತಿದ್ದು, ಟೋಲ್ಗೇಟ್ ದಾಟಲು ಸಾಕಷ್ಟು ಕಾಯಬೇಕಾಗಿದೆ. ಈ ಹಿಂದೆ ಎರಡು ಗೇಟ್ಗಳಲ್ಲಿ ವಾಹನ ಸಂಚರಿಸಲು ವ್ಯವಸ್ಥೆ ಮಾಡುವಂತೆ ಪೊಲೀಸರು ಸೂಚನೆ ನೀಡಿದರೂ ಕೂಡ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.
ಸ್ವಯಂಚಾಲಿತ ಫಾಸ್ಟ್ಯಾಗ್ ರೀಡಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಬೇಕಾಗಿದೆ. ಒಂದೇ ಸ್ಕ್ಯಾನರ್ ಯಂತ್ರ ಇರುವುದರಿಂದ ಸಮಸ್ಯೆಯಾಗಿದೆ ಎನ್ನಲಾಗಿದೆ. ಆದರೆ ಹೆಚ್ಚುವರಿ ಯಂತ್ರದ ವ್ಯವಸ್ಥೆ ಮಾಡಿ ಎರಡು ಗೇಟ್ಗಳನ್ನು ತೆರೆಯಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ.
ಬೈಕ್ಗಳಿಗೂ ಸಮಸ್ಯೆ
ದ್ವಿಚಕ್ರ ವಾಹನಗಳು ಕೂಡ ಸಾಮಾನ್ಯ ಗೇಟ್ನಲ್ಲೇ ಸಂಚರಿಸಬೇಕಾಗಿರುವುದ ರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್ ಬೇಕು ಎಂಬ ಆಗ್ರಹವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರೈಲು ಬಡಿದು ವ್ಯಕ್ತಿ ಸಾವು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.