ಉಡುಪಿ, ಕಾರ್ಕಳ, ಕುಂದಾಪುರದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ
Team Udayavani, May 2, 2020, 5:42 AM IST
134ನೇ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಧ್ವಜಾರೋಹಣಗೈಯಲಾಯಿತು.
ಉಡುಪಿ: ಸಿಐಟಿಯು ಉಡುಪಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಉಡುಪಿ, ಸಾಲಿಗ್ರಾಮ, ಕಾರ್ಕಳ ಕಚೇರಿಯ ಎದುರು 134ನೇ ಅಂ.ರಾ. ಕಾರ್ಮಿಕ ದಿನವನ್ನು ಆಚರಿಸಲಾಯಿತು.
ಉಡುಪಿಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಧ್ವಜಾರೋಹಣ ಮಾಡಿ ಮಾತನಾಡಿದರು.ಸಿಐಟಿಯು ಜಿಲ್ಲಾ ಮುಖಂಡರಾದ ಶಶಿಧರ್ ಗೊಲ್ಲ, ವೆಂಕಟೇಶ ಕೋಣಿ, ಬೀಡಿ ಸಂಘದ ಮುಖಂಡರಾದ ಉಮೇಶ್ ಕುಂದರ್, ಬಿಸಿಯೂಟ ನೌಕರರ ಸಂಘದ ಮುಖಂಡರಾದ ಕಮಲ, ಉಡುಪಿ ಕಟ್ಟಡ ಸಂಘದ ಮುಖಂಡರಾದ ಶೇಖರ್ ಬಂಗೇರ, ಸುಭಾಶ್ ನಾಯಕ್ ಸಂಜೀವ, ಸರೋಜಾ, ಶಾರದಾ, ಸಿಟಿ ಬಸ್ ನೌಕರರ ಸಂಘದ ಮುಖಂಡ ಸಂತೋಷ್, ಉಡುಪಿ ತಾಲೂಕು ಸಿಐಟಿಯು ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಉಪಸ್ಥಿತರಿದ್ದರು.
ಸಾಲಿಗ್ರಾಮದಲ್ಲಿ ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಕಳದಲ್ಲಿ ಬೀಡಿ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ ಹಾಗೂ ಕಾರ್ಕಳ ಕಟ್ಟಡ ಸಂಘದ ಮುಖಂಡರಾದ ಶೇಖರ್ ಕುಲಾಲ್ ಕಾರ್ಯಕ್ರಮ ನಡೆಸಿಕೊಟ್ಟರು.
“ಕೆಲಸದ ಅವಧಿ ಹೆಚ್ಚಳ ಸಹಿಸಲು ಅಸಾಧ್ಯ’
ಕುಂದಾಪುರ: ಮೇ ದಿನ ಆರಂಭವಾಗಿರುವುದೇ ಬಂಡವಾಳಗಾರರು ಕಾರ್ಮಿಕರನ್ನು ಪ್ರಾಣಿಗಳಂತೆ ದುಡಿಸಿ ಕೊಳ್ಳುತ್ತಿರುವುದರ ವಿರುದ್ಧ ನಡೆದ ದೀರ್ಘ ಹೋರಾಟದ ಪ್ರತಿಫಲದಿಂದ. ಆದರೆ ಇಂದು ನಮ್ಮನ್ನಾಳುತ್ತಿರುವವರು ಕಾರ್ಮಿಕರನ್ನು ಗುಲಾಮರಾಗಿಸುವಂತೆ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಳಕ್ಕೆ ಮಂದಾಗಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಇಲ್ಲಿ ನಡೆದ 134ನೇ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದರು.ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರನ್ನು ಜನಸಾಮಾನ್ಯರನ್ನು ರಕ್ಷಿಸಲು ಯಾವುದೇ ಹೊಸ ಪ್ಯಾಕೇಜ್‌ಗಳನ್ನು ಘೋಷಿಸದೇ ಅನ್ಯಾಯ ಮಾಡಲಾಗಿದೆ ಎಂದು ಅವರು ದೂರಿದರು.
ಸಿಐಟಿಯು ಸಂಚಲನ ಸಮಿತಿ ಸಂಚಾಲಕ ಎಚ್. ನರಸಿಂಹ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ವಿ. ನರಸಿಂಹ, ಮಹಾಬಲ ವಡೇರಹೋಬಳಿ, ಲಕ್ಷ್ಮಣ ಬರೆಕಟ್ಟು, ರಾಜು ದೇವಾಡಿಗ, ಸಂತೋಷ ಕಲ್ಲಾಗರ, ನಾಗ ಮೆಂಡನ್, ರವಿ ವಿ.ಎಂ., ಗಣಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.