ತಡವಾದ ನಿರ್ಧಾರದಿಂದ ಕಂಗೆಟ್ಟ ಅಮೆರಿಕ ; ಅನಿವಾಸಿ ಭಾರತೀಯೆ ತನುಜಾ ಶೆಣೈ ಕುಂದಾಪುರ
Team Udayavani, May 2, 2020, 6:02 AM IST
ಕುಂದಾಪುರ: ಇಲ್ಲಿ ತಡವಾದ ನಿರ್ಧಾರದಿಂದಾಗಿ ಕರಾಳ ಅನುಭವವಾಯಿತು. ಭಾರತದಷ್ಟು ನಿರ್ಬಂಧಗಳೂ ಇಲ್ಲ. ಆದರೆ ಭಾರತದಲ್ಲಿ ಸಕಾಲಿಕ ನಿರ್ಣಯದಿಂದಾಗಿ ಪರಿಸ್ಥಿತಿ ತಹಬಂದಿಗೆ ಬಂತು. ಇಲ್ಲದಿದ್ದರೆ ಭಾರತದ ಜನಸಂಖ್ಯೆಗೆ ಹೋಲಿಸಿದರೆ ಕಡಿವಾಣ ಹಾಕೋದು ಕಷ್ಟ.
ಸರಕಾರ ನಡೆಸುವವರ ಉತ್ತಮ ನಾಯಕತ್ವದ ಲಕ್ಷಣ ಇದು ಎನ್ನುತ್ತಾರೆ ಮೂಲತಃ ಕುಂದಾಪುರ ನಗರ ನಿವಾಸಿಯಾಗಿದ್ದು ಬೆಂಗಳೂರು ಮಲ್ಲೇಶ್ವರದ ಸಾಫ್ಟ್ವೇರ್ ಎಂಜಿನಿಯರ್ ಪ್ರಕಾಶ್ ಶೆಣೈ ಅವರನ್ನು ವಿವಾಹಿತರಾಗಿ ಈಗ ಪತಿ ಜತೆ ಅಮೆರಿಕದ ನ್ಯೂಜೆರ್ಸಿ ಎಡಿಸನ್‌ನಲ್ಲಿರುವ ತನುಜಾ ಶೆಣೈ.
ಈ ದಂಪತಿ ಹೇಳುವಂತೆ; ಕಳೆದ ಎರಡು ತಿಂಗಳಿನಿಂದ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಹೋಗಿದ್ದೇವೆ. ಮನೆಗೂ ಯಾರನ್ನೂ ಕರೆದಿಲ್ಲ, ನಾವೂ ಯಾರ ಮನೆಗೂ ಹೋಗುತ್ತಿಲ್ಲ. ಮಕ್ಕಳನ್ನು ಆಚೆ ಬಿಡುತ್ತಿಲ್ಲ.
1898ರಲ್ಲಿ ಬೆಂಗಳೂರಿನಲ್ಲಿ ಪ್ಲೇಗ್ ಬಂದಾಗ ಅರ್ಧದಷ್ಟು ಜನಸಂಖ್ಯೆಯೇ ಸಾವಿಗೀಡಾಗಿತ್ತು. ಎಷ್ಟೇ ಬೌದ್ಧಿಕ, ಆರ್ಥಿಕ, ವಾಕ್ ಸ್ವಾತಂತ್ರ್ಯದ ಕುರಿತು ಮಾತುಗಳನ್ನಾಡಿದರೂ ಪ್ರಕೃತಿ ಇಂತಹ ಆಟ ಆಡಿಯೇ ಆಡುತ್ತದೆ.
ಆದ್ದರಿಂದ ಸಮಾಜ ಜೀವಿಗಳಾದ ನಾವು ಜತೆ ಜತೆಗೇ ಇದ್ದು ಹೇಗೆ ವಿಷಮ ಸ್ಥಿತಿ ಎದುರಿಸಬೇಕು ಎಂದು ತೋರಿಸಿಕೊಡಬೇಕು ವಿನಾ ಸರಕಾರ ಏನು ಮಾಡಿತು ಎನ್ನುವ ಪ್ರಶ್ನೆಗೆ ಆಸ್ಪದವಿಲ್ಲ ಎನ್ನುತ್ತಾರೆ.
ಕಾನೂನು ಮೀರಬಾರದು
ಭಾರತದಲ್ಲಿ ನಾವು ಬೆಳೆದು ಬಂದ ರೀತಿಯೇ ಹಾಗಿದೆ. ಕಾನೂನು ಬಿಟ್ಟು ಬೇರೆಲ್ಲಕ್ಕೂ ಬೆಲೆ ಇದೆ ಎಂಬ ಲೇವಡಿಗೆ ವಿರುದ್ಧಾರ್ಥವಾಗಿ ಈಗ ಲಾಕ್ ಡೌನ್ ಯಶಸ್ವಿಯಾಗಿದೆ.
ಇಷ್ಟು ವರ್ಷಗಳ ಬಳಿಕ ಸಮರ್ಥ ನಾಯಕತ್ವದಿಂದಾಗಿ ಭಾರತದಲ್ಲಿ ಇದು ಸಾಧ್ಯವಾಗಿದೆ. ಆದರೆ ಅಮೆರಿಕದಲ್ಲಿ ನಿರ್ಲಕ್ಷ್ಯ ಮಾಡಿದ ಕಾರಣ, ಲಾಕ್‌ಡೌನ್ ನಿಧಾನ ಮಾಡಿದ ಪರಿಣಾಮ ಎಲ್ಲರೂ ಅನುಭವಿಸುವಂತಾಗಿದೆ.
ಕಾನೂನು ಮಾಡುವುದೇ ಪಾಲನೆಗಾಗಿ. ಪಾಲನೆ ಸಾಧ್ಯವಿಲ್ಲವಾದರೆ ಕಾನೂನನ್ನೇ ಬದಲಿಸಿ ಬಿಡಿ, ಮಾಡಿದ ಕಾನೂನನ್ನು ಅಗೌರವಿಸಬೇಡಿ ಎನ್ನುತ್ತಾರೆ.
ಬದ್ಧತೆ ಬೇಕು
ಬೌದ್ಧಿಕ ಜೀವಿಗಳಾಗಿ ನಮಗೆ ಬದ್ಧತೆ ಬೇಕು. ಕುಡಿಯೋದು, ಕುಣಿಯೋದು ಇಷ್ಟೇ ಜೀವನ ಅಲ್ಲ. ಬದುಕಿದ್ದರೆ ಇನ್ನೂ ಮಾಡಬಹುದು. ಈಗ ಬದುಕಿಗಾಗಿ ಒಂದಷ್ಟು ತ್ಯಾಗಗಳನ್ನು ಮಾಡಬೇಕು. ನಮಗೆ ಸಾಮಾಜಿಕ ಕಳಕಳಿ ಇದೆ ಎಂದು ನಾವು ಬದುಕಿ ಇತರರನ್ನು ಬದುಕಿಸಿ ತೋರಿಸಬೇಕು.
ಕೋವಿಡ್ ಬರದಂತೆ ತಡೆಯಲು ನಮ್ಮ ಕೊಡುಗೆ ನೀಡಬೇಕು. ಸರಕಾರ ಹೇಳದಿದ್ದರೂ ಕೆಲವು ಕಟ್ಟು ಪಾಡುಗಳನ್ನು ನಾವಾಗಿಯೇ ಪಾಲಿಸಬೇಕು. ಸರಕಾರ ಹೇಳಿದ್ದನ್ನಂತೂ ಕೇಳಲೇಬೇಕು.
ಕೆಲಸದ ಪ್ರತಿಫಲ
ಈಗ ಭಾರತೀಯರು ನಿರ್ವಹಿಸಿದ ರೀತಿ ನಿಜಕ್ಕೂ ಪ್ರಶಂಸನೀಯ. ಅದರಲ್ಲೂ ಮೊದಲ ಸಾಲಿನಲ್ಲಿರುವ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಸರಕಾರಿ ಅಧಿಕಾರಿಗಳು, ಪೊಲೀಸರು ಪ್ರಾಮಾಣಿಕತೆಯಿಂದ ಬದ್ಧತೆಯಿಂದ ಮಾಡಿದ ಕೆಲಸದ ಪ್ರತಿಫಲ ಎದ್ದು ಕಾಣುತ್ತಿದೆ.
– ತನುಜಾ ಶೆಣೈ
-ಪ್ರಕಾಶ್ ಶೆಣೈ, ನ್ಯೂಜೆರ್ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.