ಅವಧಿಗೂ ಮುನ್ನವೇ ಮತ್ಸ್ಯೋದ್ಯಮ ಬಂದ್ ಭೀತಿ
ಕರಾವಳಿಯಲ್ಲಿ ಮೀನು ಲಭ್ಯತೆ ಪ್ರಮಾಣದಲ್ಲಿ ದಾಖಲೆಯ ಏರಿಕೆ!
Team Udayavani, May 2, 2020, 8:57 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಕೋವಿಡ್ ಲಾಕ್‌ಡೌನ್ ಕರಾವಳಿಯ ಮತ್ಸ್ಯೋದ್ಯಮಕ್ಕೂ ಭಾರೀ ಆಘಾತ ನೀಡಿದ್ದು, ಅವಧಿಗೂ ಮುನ್ನ ಮೀನುಗಾರಿಕಾ ಋತು ಪೂರ್ಣಗೊಳ್ಳುವುದು ಬಹುತೇಕ ನಿಶ್ಚಿತ. ವಿಶೇಷವೆಂದರೆ ಲಾಕ್‌ಡೌನ್ ಆರಂಭಕ್ಕೂ ಮೊದಲಿನ ಅಂಕಿ-ಅಂಶದಂತೆ ಕರಾವಳಿಯಲ್ಲಿ ಮೀನುಗಳ ಲಭ್ಯತೆ ಪ್ರಮಾಣ ಈ ಬಾರಿ ಹಿಂದಿನ ದಾಖಲೆ ಗಳನ್ನು ಮುರಿದಿರುವುದು ಗಮನಾರ್ಹ.
ಪಶ್ಚಿಮ ಕರಾವಳಿಯಲ್ಲಿ ಮೇ 31 ಆ ವರ್ಷದ ಮೀನುಗಾರಿಕೆಗೆ ಕೊನೆಯ ದಿನ. ಬಳಿಕ 61 ದಿನಗಳ ಕಾಲ ನಿಷೇಧ ಇರುತ್ತದೆ. 2015ರಲ್ಲಿ ಕೇಂದ್ರ ಸರಕಾರವು ಪಶ್ಚಿಮ ಕರಾವಳಿಗೆ ಏಕರೂಪದ 2 ತಿಂಗಳ ನಿಷೇಧ ವಿಧಿಸಿ ಆದೇಶ ಹೊರಡಿಸಿತ್ತು. ಕರ್ನಾಟಕ, ಗೋವಾ, ಕೇರಳ, ಗುಜರಾತ್, ಮಹಾರಾಷ್ಟ್ರ ದಲ್ಲಿಯೂ ಇದೇ ನಿಯಮವಿದೆ. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಮೇ 31ರ ಮುನ್ನವೇ ಮೀನುಗಾರಿಕಾ ಋತು ಕೊನೆಗೊಳ್ಳುವ ಲಕ್ಷಣ ಕಾಣುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಎಪ್ರಿಲ್‌ನಿಂದ ಮೀನುಗಾರಿಕೆಗೆ ನಿಷೇಧ ಹೇರಿದ್ದು, ದೇಶದ ವಿವಿಧ ಭಾಗಗಳ ಹೆಚ್ಚಿನ ಮೀನುಗಾರ ಕಾರ್ಮಿಕರು ಊರುಗಳಿಗೆ ತೆರಳಿ ದ್ದಾರೆ. ಬಂದರಿನಲ್ಲಿ ಬಾಕಿಯಾಗಿರುವ ತಮಿಳುನಾಡು, ಕೇರಳ ಮೂಲದ ಕೆಲವರು ತಮ್ಮ ಊರುಗಳಿಗೆ ತೆರಳುವ ತವಕ ದಲ್ಲಿದ್ದಾರೆ. ಒಂದು ವೇಳೆ ಮೇ ಮೊದಲ ವಾರದಲ್ಲಿ ಲಾಕ್‌ಡೌನ್ ಕೊನೆಗೊಂಡರೂ ಬಾಕಿ ಉಳಿಯುವ 20 ದಿನಗಳಿಗಾಗಿ ದೂರದ ಊರುಗಳಿಂದ ಕಾರ್ಮಿಕರು ಮರಳುವುದು ಅನುಮಾನ.
ಉತ್ಪಾದನೆ ಹೆಚ್ಚು; ನಷ್ಟವೂ ಹೆಚ್ಚು
ಇಲಾಖೆಯ ಅಂಕಿ-ಅಂಶದ ಪ್ರಕಾರ, ದ.ಕ. ಜಿಲ್ಲೆಯಲ್ಲಿ ಕಳೆದ 8 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅತೀಹೆಚ್ಚು ಪ್ರಮಾಣದ ಮೀನು ಲಭಿಸಿದೆ. ಜಿಲ್ಲೆಯಲ್ಲಿ 2019-20ರ ಅವಧಿಯಲ್ಲಿ ಮಾರ್ಚ್‌ವರೆಗೆ ಒಟ್ಟು 1,71,692 ಟನ್ ಮೀನು ದೊರಕಿದೆ. ಇದು ಸಾರ್ವಕಾಲಿಕ ದಾಖಲೆ. ಉಡುಪಿ ಜಿಲ್ಲೆಯಲ್ಲಿಯೂ 1,21,479 ಟನ್ ಸಿಕ್ಕಿರುವುದು ಇನ್ನೊಂದು ದಾಖಲೆ. ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಪ್ರಕಾರ, “ಕಳೆದ ಕೆಲವು ತಿಂಗಳಿಗೆ ಹೋಲಿಸಿದರೆ ಮೀನುಗಾರಿಕೆ ಬೋಟ್‌ಗಳ ಸಂಖ್ಯೆ ಹೆಚ್ಚಳವಾಗಿದೆ. ಕೆಲವು ಬೋಟ್
ಗಳಲ್ಲಿ ತಂತ್ರಜ್ಞಾನವೂ ಬದಲಾಗಿದೆ. ಮೀನು ಲಭಿಸುವ ಪ್ರಮಾಣ ಹೆಚ್ಚಾದರೂ ಬೋಟ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಲಭ್ಯ ಮೀನುಗಳು ಹಂಚಿಹೋಗುತ್ತವೆ. ಹಾಗಾಗಿ ಮೀನುಗಾರರ ಲಾಭಾಂಶ ಕಡಿಮೆಯಿದೆ. ಹಮಾಮಾನ ವೈಪರೀತ್ಯ, ಕರ್ಫ್ಯೂ, ಬಂದ್, ಕೋವಿಡ್ ಮೊದಲಾದ ಕಾರಣಗಳಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ’ ಎನ್ನುತ್ತಾರೆ ಅವರು.
ಈ ವರ್ಷದ ಮೀನುಗಾರಿಕಾ ಋತುವಿನಲ್ಲಿ ಹೆಚ್ಚಿನ ಪ್ರಮಾಣದ ಮೀನು ಲಭಿಸಿದೆ. ಆದರೆ ಬೋಟ್‌ಗಳು ಹೆಚ್ಚಿರುವುದರಿಂದ ಮೀನುಗಾರರು ನಷ್ಟದಲ್ಲಿದ್ದಾರೆ. ಲಾಕ್‌ಡೌನ್ ತೆರವುಗೊಂಡ ಬಳಿಕ ಸರಕಾರದ ಆದೇಶದಂತೆಟ್ರಾಲ್ ಬೋಟ್ ಮೀನುಗಾರಿಕೆ ಆರಂಭಗೊಳ್ಳಲಿದೆ.
– ಹರೀಶ್ ಕುಮಾರ್, ಮೀನುಗಾರಿಕಾ ಉಪನಿರ್ದೇಶಕರು, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.