ಬ್ರಿಟನ್: ಲಾಕ್‌ಡೌನ್ ಸಡಿಲಿಕೆ ಮಾರ್ಗಸೂಚಿ ಶೀಘ್ರ
Team Udayavani, May 2, 2020, 2:34 PM IST
ಲಂಡನ್: ಬ್ರಿಟನ್ ಕೋವಿಡ್ ವೈರಸ್‌ನ ಉತ್ತುಂಗವನ್ನು ದಾಟಿದ್ದು, ಲಾಕ್‌ಡೌನ್ ನಿಯಮಾವಳಿ ಸಡಿಲಿಕೆಗೆ ಸರಕಾರವು ಮುಂದಿನವಾರ ಮಾರ್ಗಸೂಚಿಯನ್ನು ಪ್ರಕಟಿಸಲಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಹೇಳಿದ್ದಾರೆ.
ಬಿಳಿಯರಿಗೆ ಹೋಲಿಸಿದರೆ ಬ್ಲ್ಯಾಕ್ ಕೆರಿಬಿಯನ್ ಹಿನ್ನೆಲೆಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಕೋವಿಡ್ ಸಾವಿನ ಪ್ರಮಾಣ 1.7 ಪಟ್ಟು ಜಾಸ್ತಿ ಇರುವುದು ಅಧ್ಯಯನಗಳಿಂದ ಬಹಿರಂಗಗೊಂಡಿದೆ.
ಅಗತ್ಯ ವಸ್ತುಗಳು ಹಾಗೂ ಆಹಾರಕ್ಕಾಗಿ ಜನ ಫುಡ್ ಬ್ಯಾಂಕ್‌ಗಳಿಗೆ ಅವಲಂಬಿಸಿರುವುದು ಹೆಚ್ಚಿದೆ. ಇಂಗ್ಲಂಡ್‌ನ ಅತಿ ದೊಡ್ಡ ಆಹಾರ ಅಭಿಯಾನವಾಗಿರುವ ದಿ ಟ್ರಸೆಲ್ ಟ್ರಸ್ಟ್ ಒಂದು ವಾರದ ಅವಧಿಯಲ್ಲಿ 50 ಸಾವಿರ ಆಹಾರ ಕಿಟ್‌ಗಳನ್ನು ವಿತರಿಸಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಇದು ಎರಡು ಪಟ್ಟು ಜಾಸ್ತಿ. ವಿಮಾನಯಾನ ಕ್ಷೇತ್ರದ ಪುನಶ್ಚೇತನಕ್ಕೂ ಪ್ರಯತ್ನಗಳು ನಡೆಯುತ್ತಿದ್ದು, ರಿಯಾನೈರ್ ಸಂಸ್ಥೆ 3,000 ಉದ್ಯೋಗಕ್ಕೆ ಕತ್ತರಿ ಹಾಕಲು ಮುಂದಾಗಿದೆ. ಜಾಗತಿಕವಾಗಿ ಲಾಕ್‌ಡೌನ್ ಘೋಷಣೆಯಾಗಿರುವ ಕಾರಣ ಬ್ರಿಟನ್‌ನ ಕೈಗಾರಿಕಾ ಉತ್ಪಾದನೆಗಳಿಗೆ ಬೇಡಿಕೆ ಕುಸಿದಿದೆ. ಈ ಸ್ಥಿತಿ ಸುಧಾರಿಸಲು ಇನ್ನೂ ಹಲವು ತಿಂಗಳು ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.