![Santhe-last](https://www.udayavani.com/wp-content/uploads/2025/02/Santhe-last-415x249.jpg)
![Santhe-last](https://www.udayavani.com/wp-content/uploads/2025/02/Santhe-last-415x249.jpg)
Team Udayavani, May 2, 2020, 3:11 PM IST
ಮಂಡ್ಯ: ಮೃತ ವ್ಯಕ್ತಿಯ ಶವವನ್ನು ಹೊತ್ತ ಸರ್ಕಾರಿ ಆ್ಯಂಬುಲೆನ್ಸ್ ಮುಂಬೈನಿಂದ 42 ಚೆಕ್‌ಪೋಸ್ಟ್‌ಗಳನ್ನು ದಾಟಿ ಪಾಂಡವಪುರ ತಾಲೂಕಿನ ಬಿ.ಕೊಡಗಹಳ್ಳಿಯನ್ನು ತಲುಪಿದೆ. ಸರ್ಕಾರಿ ಆ್ಯಂಬುಲೆನ್ಸ್ ಎಂಬ ಕಾರಣಕ್ಕೆ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಸುಲಭವಾಗಿ ದಾಟಿ ಬಂದಿದ್ದು, ಇದರಲ್ಲಿ ಜಿಲ್ಲಾಡಳಿತ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.
ಮೃತ ವ್ಯಕ್ತಿಯ ಶವಪರೀಕ್ಷಾ ವರದಿಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಆತನಲ್ಲಿ ಕೊರೊನಾ ವೈರಸ್ ಇತ್ತೇ, ಇಲ್ಲವೇ
ಎನ್ನುವುದು ಖಚಿತಪಟ್ಟಿಲ್ಲ. ಹಾಗಾಗಿ ಮೃತ ವ್ಯಕ್ತಿಯ ಪುತ್ರ ಮುಂಬೈನಲ್ಲಿ ಐಸಿಐಸಿಐ ಬ್ಯಾಂಕ್ ಉದ್ಯೋಗಿ ಯಾಗಿದ್ದು, ಆತನಿಂದ ಸೋಂಕು ಕಾಣಿಸಿಕೊಂಡಿರಬಹುದೆಂದು ಜಿಲ್ಲಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಂಬೈನ ದೇಸಾಯಿ ಆಸ್ಪತ್ರೆ ಸಂಪರ್ಕಿಸಿ ಮೃತ ವ್ಯಕ್ತಿಯಲ್ಲಿ ಕೊರೊನಾ ಇತ್ತೆ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮೃತ ವ್ಯಕ್ತಿಯ ಒಬ್ಬ ಪುತ್ರಿ ಮಂಡ್ಯ ಜಿಲ್ಲೆಯ ಕೆ. ಆರ್.ಪೇಟೆಯಲ್ಲಿ ವಾಸವಾಗಿದ್ದಾರೆ. ತಂದೆಯ ಅಂತಿಮ ದರ್ಶನ ಪಡೆಯಲು ಆಸೆ ವ್ಯಕ್ತ ಪಡಿಸಿದ್ದರಿಂದ
ಶವವನ್ನು ಮುಂಬೈನಿಂದ ತವರೂರಾದ ಬಿ.ಕೊಡಗಹಳ್ಳಿಗೆ ಕರೆತಂದಿದ್ದಾಗಿ ಹೇಳಲಾಗಿದೆ. ಮುಂಬೈನಿಂದ ಬಂದವರೆಂಬ ಕಾರಣದಿಂದ ಇವರೂ ಸೇರಿದಂತೆ
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 7 ಮಂದಿಯನ್ನು ಏ.24ರಂದೇ ಮೊರಾರ್ಜಿ ದೇಸಾಯಿ ಶಾಲೆಯ ಹಾಸ್ಟೆಲ್‌ನಲ್ಲಿ ಕ್ವಾರಂ ಟೈನ್ ಮಾಡಲಾಗಿತ್ತು. ಏ.28ರಂದು 7 ಜನರ ರಕ್ತ, ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ನಾಲ್ವರಲ್ಲಿ ಪಾಸಿಟೀವ್ ಬಂದಿದೆ. ಹೆಂಡತಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಸೋಂಕಿತರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಾಲ್ವರಲ್ಲೂ ರೋಗ ಲಕ್ಷಣಗಳಿಲ್ಲದಿರುವುದು ಕಂಡುಬಂದಿದ್ದು, ಇವರ ಪ್ರಾಥಮಿಕ ಹಾಗೂ ಎರಡನೇ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಆ್ಯಂಬುಲೆನ್ಸ್ ಚಾಲಕನನ್ನು ಕ್ವಾರಂಟೈನ್ ಮಾಡುವಂತೆ ಮುಂಬೈನ ದೇಸಾಯಿ ಆಸ್ಪತ್ರೆಯವರಿಗೆ ತಿಳಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.