ಅಮೆರಿಕ: ಲಾಕ್‌ಡೌನ್‌ ಹಿಂದೆಯೇ ಹೊಸ ಸವಾಲು

Team Udayavani, May 2, 2020, 4:39 PM IST

ಅಮೆರಿಕ: ಲಾಕ್‌ಡೌನ್‌ ಹಿಂದೆಯೇ ಹೊಸ ಸವಾಲು

ವಾಷಿಂಗ್ಟನ್‌: ಕೋವಿಡ್‌ 19 ಎಂಬ ಮಹಾಮಾರಿಯು ಅಮೆರಿಕದಲ್ಲಿ ಕೇವಲ ಆರ್ಥಿಕ ಚಟುವಟಿಕೆಯನ್ನಷ್ಟೆ ಅಪಾಯಕ್ಕೆ ತಳ್ಳಿಲ್ಲ, ಅದು ದೊಡ್ಡ ಸಂಖ್ಯೆಯಲ್ಲಿ ಜನರ ಆರೋಗ್ಯದ ಮೇಲೂ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರ್ಥಿಕ ಚಟುವಟಿಕೆಗಳನ್ನು ತ್ವರಿತವಾಗಿ ಮರುಪ್ರಾರಂಭಿಸುವ ಪ್ರಯತ್ನಗಳಲ್ಲಿ ಎರಡು ನೆಲೆಯಲ್ಲಿ ಯೋಚಿಸಬೇಕಾಗಿದೆ. ಒಂದು ಕೋವಿಡ್‌ ವೈರಸ್‌ನ ಹಾನಿಯನ್ನು ಸಹಿಸುತ್ತಲೇ ಮುಂದುವರಿಯುವುದು, ಇನ್ನೊಂದು ಅನಾರೋಗ್ಯ ಸವಾಲು ಇದ್ದರೂ ಆರ್ಥಿಕ ಚಟುವಟಿಕೆ ಆರಂಭಿಸುವುದು.

ಕೋವಿಡ್‌ನಿಂದಾಗಿ ಆರ್ಥಿಕವಾಗಿ ದುರ್ಬಲವಾದ ಕಂಪೆನಿಗಳು ಲಕ್ಷಾಂತರ ಅಮೆರಿಕನ್ನರನ್ನು ಉದ್ಯೋಗದಿಂದ ತೆಗೆದಿವೆ. ಉದ್ಯೋಗಕ್ಕಾಗಿ ಅವರೆಲ್ಲರೂ ತಮ್ಮ ಆರೋಗ್ಯವನ್ನು ಪಣವಾಗಿಟ್ಟುಕೊಂಡು ತಮ್ಮ ಸಂಸ್ಥೆಗಳನ್ನು ಮತ್ತೆ ಕಾರ್ಯಾರಂಭ ಮಾಡುವಂತೆ ಉದ್ಯೋಗದಾತರ ಮೇಲೆ ಒತ್ತಡ ತರುವ ಸ್ಥಿತಿಯಲ್ಲಿದ್ದಾರೆ. ಇವು ಅವರ ಆರೋಗ್ಯದ ಮೇಲೆ ದುಬಾರಿ ಪರಿಣಾಮ ಬೀರಬಹುದು.

ವೈರಸ್‌ ಸೋಂಕು ಹರಡುವುದನ್ನು ತಡೆಯುವ, ಪರೀಕ್ಷಾ ಸಾಮರ್ಥ್ಯ ಹಾಗೂ ಸೂಕ್ತ ಚಿಕಿತ್ಸೆ ದೇಶದಲ್ಲಿಲ್ಲ. ಆದರೂ ಬಹುತೇಕ ಕಂಪೆನಿಗಳು ಹಾಗೂ ಉದ್ಯಮಗಳು ಪುನಾರಂಭಕ್ಕೆ ಯೋಚಿಸುತ್ತಿವೆ. ಇದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಮತವೂ ಇದೆ.

ಆರ್ಥಿಕವಾಗಿ ಸಶಕ್ತವಾಗಿರುವವರು, ಸುಶಿಕ್ಷಿತರು ಹಾಗೂ ಶ್ರೀಮಂತ ವರ್ಗದವರು ಮನೆಯಿಂದಲೇ ಕೆಲಸ ಮಾಡಿ ಸೋಂಕಿನಿಂದ ದೂರ ಇರಬಹುದು. ಆದರೆ ಕಡಿಮೆ ಸಂಬಳ ಪಡೆಯುವವರು, ಕೆಲಸಕ್ಕಾಗಿ ಕಚೇರಿಗೆ ಹೋಗಲೇಬೇಕಾದ ಅನಿವಾರ್ಯ ಇರುವವರು ಆರೋಗ್ಯವನ್ನು ಪಣವಿಡಲೇಬೇಕಿದೆ. ಇದಕ್ಕೆ ಸಿದ್ಧರಿಲ್ಲದಿದ್ದರೆ ಅವರು ಉದ್ಯೋಗವನ್ನು ಕಳೆದುಕೊಳ್ಳಬೇಕಾದೀತು. ಈ ಕಷ್ಟಕ್ಕೆ ಸಿಲುಕಿರುವವರು ಕಾರ್ಮಿಕ ಸಮುದಾಯವೇ ಹೆಚ್ಚು, ಅದರಲ್ಲೂ ಲ್ಯಾಟಿನ್‌ ಅಮೆರಿಕನ್‌ ರಾಷ್ಟ್ರದವರೇ ತುಸು ಹೆಚ್ಚು.

ಜಾರ್ಜಿಯಾ ಮತ್ತು ದಕ್ಷಿಣ ಕೆರೊಲಿನಾದ ಗವರ್ನರ್‌ಗಳು ಕೂಡ ಕೆಲವು ವ್ಯವಹಾರಗಳನ್ನು ಪುನರಾರಂಭಿಸಲು ಅನುಮತಿಸಿದ್ದಾರೆ. ಇಲ್ಲಿ ಸೋಂಕು ಈಗಲೂ ಅಪಾಯದ ಮಟ್ಟದಲ್ಲಿದೆ. ಇಂಥ ಸಂದರ್ಭಗಳಲ್ಲಿ ವ್ಯವಹಾರ ಪುನರಾರಂಭಿಸುವ ನಿರ್ಧಾರವು ಮತ್ತಷ್ಟು ಮಂದಿಯನ್ನು ಅಪಾಯಕ್ಕೆ ತಳ್ಳಬಹುದು ಎಂದು ಎಚ್ಚರಿಸಿದ್ದಾರೆ ಆರೋಗ್ಯ ತಜ್ಞರು.

ಜಾರ್ಜಿಯಾ ಶುಕ್ರವಾರ ಹೇರ್‌ ಕಟ್ಟಿಂಗ್‌ ಸೆಲೂನ್‌, ಜಿಮ್‌ ಮುಂತಾದವುಗಳನ್ನು ತೆರೆಯಲು ಅವಕಾಶ ನೀಡಿದೆ. ಮುಂದಿನ ಸೋಮವಾರದಿಂದ ರೆಸ್ಟೋರೆಂಟ್‌ಗಳು ಮತ್ತು ಚಿತ್ರಮಂದಿರಗಳೂ ಕಾರ್ಯಾರಂಭ ಮಾಡಬಹುದು. ಕೊಲೊರಾಡೊ, ಮಿನ್ನೆಸೊಟ, ಮಿಸ್ಸಿಸ್ಸಿಪಿ ಮತ್ತು ಓಹಿಯೋ ಮುಂತಾದ ಕಡೆಗಳಲ್ಲೂ ಕೆಲವು ವ್ಯವಹಾರಗಳ ಆರಂಭಕ್ಕೆ ಸಮ್ಮತಿಸಲಾಗಿದೆ.
ಹೆಚ್ಚಿನ ಕಡೆಗಳಲ್ಲಿ ಸಂಸ್ಥೆಯವರೇ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ. ಸಣ್ಣ ವರ್ಗದ ಗ್ರಾಹಕರೂ ಇದೇ ಭಯದಲ್ಲಿದ್ದಾರೆ. ಆದರೆ ವ್ಯಾಪಾರ ವಹಿವಾಟು ನಡೆಸುವವರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಅನುಮತಿ ನೀಡಿದ ಮೇಲೂ ಬಾಗಿಲು ಮುಚ್ಚಿದರೆ ನಿರುದ್ಯೋಗ ಸೌಲಭ್ಯ ಸಿಗದು, ಇತ್ತ ವ್ಯಾಪಾರದ ಆದಾಯವೂ ಸಿಗದು ಎಂಬ ಸ್ಥಿತಿ ಅವರದ್ದು.

ಈಚೆಗೆ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿರುವವರಲ್ಲಿ 1.50 ಲಕ್ಷ ಡಾಲರ್‌ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗಿಂತ 50 ಸಾವಿರ ಡಾಲರ್‌ ವೇತನ ಪಡೆಯುವವರು ದುಪ್ಪಟ್ಟಾಗಿದ್ದಾರೆ.

ಕಪ್ಪು ಮತ್ತು ಲ್ಯಾಟಿನ್‌ ಅಮೆರಿಕನ್ನರು ಉದ್ಯೋಗ ಕಳೆದುಕೊಂಡು ಬದುಕುವುದು ಕಷ್ಟ. ಏಕೆಂದರೆ ಅವರಿಗೆ ಸಿಗುವ ಸಂಬಳ ಕಡಿಮೆ. ಹಾಗಾಗಿ ಆರ್ಥಿಕವಾಗಿ ಸದೃಢರಾಗಿಲ್ಲ. ಇದರಿಂದ ಕೆಲಸವಿಲ್ಲದೇ ಬದುಕುವುದು ಕಷ್ಟ. ಎಷ್ಟೇ ಕಷ್ಟವಾದರೂ ಉದ್ಯೋಗ ಮಾಡಲೇಬೇಕಾದ ಅನಿವಾರ್ಯ ಇದೆ.

ಫೆಡರಲ್‌ ರಿಸರ್ವ್‌ ಅಂಕಿಅಂಶಗಳ ಪ್ರಕಾರ, ಸರಾಸರಿ ಕಾರ್ಮಿಕ ಕುಟುಂಬವೊಂದು 2016ರಲ್ಲಿ ಕೇವಲ 18,000 ಡಾಲರ್‌ ಸಂಪತ್ತನ್ನು ಹೊಂದಿತ್ತು. ಇದು ಹಿಸ್ಪಾ³ನಿಕ್‌ ಕುಟುಂಬದಲ್ಲಿ 21,000 ಡಾಲರ್‌ ಆಸುಪಾಸಿನಲ್ಲಿತ್ತು. ಆದರೆ ಬೇರೆಯವರು ಇದಕ್ಕಿಂತ ಸುಮಾರು 10 ಪಟ್ಟು ಹೆಚ್ಚು ಆದಾಯ ಹೊಂದಿದ್ದರು ಎಂದಿದೆ. ಹೀಗೆ ಅಮೆರಿಕದ ಆರ್ಥಿಕ ಶಕ್ತರು ಮತ್ತು ಅಶಕ್ತರ ನಡುವಿನ ಅಂತರ ಹಾಗೂ ಪಕ್ಷಪಾತವು ದೊಡ್ಡ ಸವಾಲಾಗಿ ಎದ್ದು ನಿಲ್ಲುತ್ತಿದೆ. ಈಗ ಅದು ಮತ್ತಷ್ಟು ಪರಾಕಾಷ್ಠೆಗೇರಲಿದ್ದು, ಹೊಸ ಸಮಸ್ಯೆಗಳನ್ನೂ ಸೃಷ್ಟಿಸಬಹುದು ಎಂದಿದೆ ದಿ ನ್ಯೂಯಾರ್ಕ್‌ ಟೈಮ್ಸ್‌.

ಟಾಪ್ ನ್ಯೂಸ್

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.