ನೇಕಾರರ ಸಮಸ್ಯೆಗೆ ಸರ್ಕಾರದ ಸ್ಪಂದನೆ
Team Udayavani, May 2, 2020, 5:05 PM IST
ಸಾಂದರ್ಭಿಕ ಚಿತ್ರ
ಬನಹಟ್ಟಿ: ನೇಕಾರರು ಹಾಗೂ ನೇಕಾರಿಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ತಾಲೂಕು ಆಡಳಿತ ಸ್ಪಂದಿಸುತ್ತದೆ. ಸಹಾಯ ಸಹಕಾರಕ್ಕೆ ಸದಾ ಸಿದ್ಧರಿದ್ದೇವೆ. ಸದ್ಯ ಜೀವನ ನಡೆಸುವುದು ಹಾಗೂ ಕೋವಿಡ್-19 ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಹೇಳಿದರು.
ಶುಕ್ರವಾರ ಸ್ಥಳೀಯ ನಗರಸಭೆಯ ಸಭಾಭವನದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಡೆದ ನೇಕಾರರ ಸಭೆಯಲ್ಲಿ ಅವರು ಮಾತನಾಡಿದರು. ನೇಕಾರಿಕೆಯ ಉದ್ಯೋಗ ಆರಂಭಿಸಲು ತಾಲೂಕು ಆಡಳಿತದಿಂದ ಎಲ್ಲ ಸಹಾಯ ಸಹಕಾರ ಒದಗಿಸಲಾಗುವುದು. ಮಾನವೀಯತೆಯ ಮೇಲೆ ಲಾಕ್‌ಡೌನ್ ತೆರವುಗೊಂಡು ಉದ್ಯೋಗ ಆರಂಭವಾಗುವವರೆಗೆ ನೇಕಾರರ ಕುಟುಂಬಗಳಿಗೆ ಅಗತ್ಯವಾಗಿರುವ ಆಹಾರ ಮತ್ತು ಕುಟುಂಬ ನಿರ್ವಹಣೆಗೆ ಅಗತ್ಯವಿರುವ ವಸ್ತುಗಳನ್ನು ನೀಡಿ ಎಂದು ಮಾಲೀಕರಿಗೆ ತಿಳಿಸಿದರು.
ನೇಕಾರ ಮಾಲೀಕ ಸುರೇಶ ಚಿಂಡಕ ಮಾತನಾಡಿ, ರೈತರ ಬೆಳೆಗಳನ್ನು ಸರ್ಕಾರ ಬೆಂಬಲ ಬೆಲೆ ಕೊಟ್ಟು ಖರೀದಿಸುವಂತೆ ಮಾಲೀಕರ ಮನೆಯಲ್ಲಿರುವ ಸೀರೆಗಳಿಗೆ ಬೆಂಬಲ ಬೆಲೆ ಕೊಡದೆ, ಲಾಭವನ್ನು ನೀಡದೆ ಕೇವಲ ಖರ್ಚುಗಳನ್ನು ನೀಡಿ ಸರ್ಕಾರವೇ ಖರೀದಿಸಿದರೆ ಸರ್ಕಾರ ನೇಕಾರರಿಗೂ ಮತ್ತು ನೇಕಾರ ಮಾಲೀಕರಿಗೂ ಉಪಕಾರ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಲಾಕ್‌ಡೌನ್ ತೆರವುಗೊಂಡು ನೇಕಾರಿಕೆಯ ಉದ್ಯೋಗ ಪುನರ್ ಆರಂಭವಾಗಬೇಕಾದರೆ ಕನಿಷ್ಠ ಇನ್ನೂ ಎರಡು ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೆ ನೇಕಾರರು ಮತ್ತು ನೇಕಾರರ ಮಾಲೀಕರ ಪರಿಸ್ಥಿತಿ ಮತ್ತಷ್ಟು ಹದಗೆದಡುತ್ತದೆ ಎಂದು ಸುರೇಶ ಚಿಂಡಕ ಆತಂಕ ವ್ಯಕ್ತ ಪಡಿಸಿದರು.
ರಬಕವಿಯ ಪಾವರ್‌ಲೂಮ್ ಮಗ್ಗಗಳ ಮಾಲೀಕ ನೀಲಕಂಠ ಮುತ್ತೂರ ಮಾತನಾಡಿ, ಕಚ್ಚಾ ನೂಲು ಸಂಪೂರ್ಣವಾಗಿ ಖಾಲಿಯಾಗಿದ್ದರಿಂದ ಮಗ್ಗಗಳು ಬಂದ್ ಆಗಿವೆ. ನಮ್ಮ ಸೀರೆಗಳು ಮಾರಾಟವಾಗದೆ ಮನೆಯಲ್ಲಿ ಇವೆ. ಇನ್ನೂ ನಮಗೆ ಬರಬೇಕಾದ ಬಾಕಿ ಬಂದಿಲ್ಲ. ಆದ್ದರಿಂದ ಸರ್ಕಾರ ಉಳಿದ ಕಾರ್ಮಿಕರಿಗೆ ಕೊಡುವಂತೆ 3000 ರೂ. ಧನ ಸಹಾಯ ನೇಕಾರಿಗೆ ನೀಡಬೇಕು ಎಂದರು.
ನೇಕಾರ ಮಾಲೀಕರಾದ ಶಂಕರ ಜಾಲಿಗಿಡದ, ರಾಮಣ್ಣ ಹುಲಕುಂದ, ಶಂಕರ ಜುಂಜಪ್ಪನವರ, ಬ್ರಿಜ್‌ಮೋಹನ ಡಾಗಾ, ಗಜಾನನ ತೆಗ್ಗಿ ಮಾತನಾಡಿ, ನೇಕಾರ ಮಾಲೀಕರ ಬಳಿ ಇರುವ ಕಚ್ಚಾ ನೂಲು ಮತ್ತು ದುಡಿಯುವ ಬಂಡವಾಳ ಖಾಲಿಯಾಗಿದೆ. ಕಚ್ಚಾ ಸರಕುಗಳು ದೂರದ ಸೇಲಂ, ಇಚಲಕರಂಜಿ, ಬೆಳಗಾವಿ, ಮುಂಬೆ„ ಮತ್ತು ಕೊಯಮುತ್ತೂರಿನಿಂದ ಬರಬೇಕು. ನೇಕಾರರಿಗಿಂತ ನೇಕಾರ ಮಾಲೀಕರ ಪರಿಸ್ಥಿತಿ ಶೋಚನೀಯವಾಗಿದೆ ಎಂದರು.
ಬಾಗಲಕೋಟೆ ಜವಳಿ ಇಲಾಖೆಯ ಉಪ ನಿರ್ದೇಶಕ ಎಂ. ಜಿ. ಕೊಣ್ಣೂರ, ಡಿವೈಎಸ್‌ಪಿ ಆರ್. ಕೆ.ಪಾಟೀಲ, ತಹಶೀಲ್ದಾರ್ ಪ್ರಶಾಂತ ಚನಗೊಂಡ, ಸಿಪಿಐ ಜಿ.ಕರುಣೇಶಗೌಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಗ್ರೇಡ್ 2 ತಹಶೀಲ್ದಾರ್ ಎಸ್.ಬಿ. ಕಾಂಬಳೆ ಪಿಎಸ್‌ಐ ರವಿಕುಮಾರ ಧರ್ಮಟ್ಟಿ, ಅಶೋಕ ಬಡ್ಡೂರ, ಸತೀಶ ಹಜಾರೆ, ಮಹಾದೇವ ಕೋಟ್ಯಾಳ, ಪ್ರಭು ಕರಲಟ್ಟಿ, ಶಿವು ಭದ್ರನವರ, ಬಸವರಾಜ ತೆಗ್ಗಿ, ಮಲ್ಲಿನಾಥ ಕಕಮರಿ, ಮಹಾದೇವ ಚರ್ಕಿ, ಮಲ್ಲಿಕಾರ್ಜುನ ಭದ್ರನವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.