ಪ್ರಜಾಪ್ರಭುತ್ವದಲ್ಲಿ ಕಾರ್ಮಿಕರ ಪಾತ್ರ ಹಿರಿದು
Team Udayavani, May 2, 2020, 5:57 PM IST
ಹರಪನಹಳ್ಳಿ: ಕಾರ್ಮಿಕರ ದಿನಾಚರಣೆ ಅಂಗವಾಗಿ ನರೇಗಾ ಕಾಮಗಾರಿಗೆ ತಾಪಂ ಇಒ ಅನಂತರಾಜ್ ಚಾಲನೆ ನೀಡಿದರು.
ಹರಪನಹಳ್ಳಿ: ಪ್ರಜಾಪ್ರಭುತ್ವ ದೇಶದಲ್ಲಿ ಕಾರ್ಮಿಕರ ಪಾತ್ರ ಹಿರಿದಾಗಿದ್ದು, ಅವರ ಬೆವರಿನ ಪ್ರತಿಫಲದಿಂದ ದೇಶ ಅಭಿವೃದ್ಧಿ ಪಥದತ್ತ ದಾಪುಗಾಲು ಆಗುತ್ತದೆ. ಕಾರ್ಮಿಕರು ದೇಶದ ನಿಜವಾದ ಆಸ್ತಿ ಎಂದು ತಾಪಂ ಇಒ ಅನಂತರಾಜ್ ಹೇಳಿದರು.
ತಾಲೂಕಿನ ಹೊಸಕೋಟೆ ಗ್ರಾಪಂ ವ್ಯಾಪ್ತಿಯ ದೊಡ್ಡಹಳ್ಳದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಕೆಲಸವನ್ನು ಯಂತ್ರಗಳ ಬಳಕೆಗೆ ಅವಕಾಶ ನೀಡದೆ ದುಡಿಯುವ ಕೈಗೆ ಒದಗಿಸಲಾಗಿದ್ದು, ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. ಕೂಲಿ ಕಾರ್ಮಿಕರು ಕೆಲಸದ ವೇಳೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಮಿಕ ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಸರ್ಕಾರ ಕಾರ್ಮಿಕರ ವಿರೋಧಿ ನೀತಿಗಳನ್ನು ಕೈ ಬಿಡಬೇಕು. ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಕೂಲಿ ಕಾರ್ಮಿಕರ ಖಾತೆಗೆ 2 ಸಾವಿರ ಸಹಾಯ ಧನವನ್ನು ತಕ್ಷಣವೇ ಜಮಾ ಮಾಡಬೇಕು. ಕಾರ್ಮಿಕರ ಜೀವನ ಭದ್ರತೆಗೆ ಗೃಹಸಾಲ, ವಿವಾಹ ಪ್ರೋತ್ಸಾಹ ಧನ, ಆರೋಗ್ಯ, ಅಪಘಾತ, ವಿಮೆ ಹೆಚ್ಚಳ ಮಾಡಬೇಕು
ಎಂದು ಒತ್ತಾಯಿಸಿದರು. ಇದೇ ವೇಳೆ ಮಾದಿಹಳ್ಳಿ ಗ್ರಾಮದ ಹಿರಿಯ ಕಟ್ಟಡ ಕಾರ್ಮಿಕ ಸೈಫುಲ್ಲಾ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು. ನಂತರ ಕೂಲಿ ಕಾರ್ಮಿಕರಿಗೆ ಸಿಹಿ ವಿತರಿಸಲಾಯಿತು. ತಾಪಂ ಸಹಾಯಕ ನಿರ್ದೇಶಕ ಎಲ್.ತಿಮ್ಮಾನಾಯ್ಕ, ಹೊಸಕೋಟೆ ಗ್ರಾಪಂ ಪಿಡಿಒ ಸಂಗಪ್ಪ, ಪರಮೇಶ್ವರಪ್ಪ, ಅಧ್ಯಕ್ಷೆ ಪಾರ್ವತಮ್ಮ, ನಿಂಗಪ್ಪ, ಹಾಲಪ್ಪ, ಕಾರ್ಮಿಕ ಸಂಘಟನೆಯ ಭಾಗ್ಯಮ್ಮ, ಶ್ರುತಿ, ಶಿವಕುಮಾರ್, ನಾಗರಾಜ್, ಶಿಲ್ಪ, ಮಲ್ಲೇಶ್, ದಂಡ್ಯಪ್ಪ, ಮಂಜುನಾಥ್, ಪ್ರಗತಿಪರ ಹೊರಾಟಗಾರ ಮಾದಿಹಳ್ಳಿ ಮಂಜಪ್ಪ, ಮಲ್ಲಿಕಾರ್ಜುನ್,
ಬಸವರಾಜ್, ನಿಂಗಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.