ಆಶಾ ಕಾರ್ಯಕರ್ತೆಯರಿಗೆ 3 ಕೋಟಿ ಮೌಲ್ಯದ ಹೈಜೆನಿಕ್ ಕಿಟ್ ಹಸ್ತಾಂತರ
Team Udayavani, May 3, 2020, 11:57 AM IST
ಹೈಜೆನಿಕ್ ಕಿಟ್ ಅನ್ನು ಫಲಾನುಭವಿಗಳಿಗೆ ಮೇಯರ್ ಗೌತಮ್ಕುಮಾರ್ ವಿತರಣೆ ಮಾಡಿದರು.
ಬೆಂಗಳೂರು: ಮೈಂಡ್ ಟ್ರೀ ಸಂಸ್ಥೆಯು ಬಿಬಿಎಂಪಿಗೆ 3 ಕೋಟಿ ರೂ. ಮೌಲ್ಯದ 3.5 ಲಕ್ಷ ಹೈಜನಿಕ್ ಕಿಟ್ಗಳನ್ನು ಶನಿವಾರ ಹಸ್ತಾಂತರಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿದ
ಮೇಯರ್ ಎಂ.ಗೌತಮ್ಕುಮಾರ್ ಅವರು, ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಆರೋಗ್ಯ ಕಾಪಾಡಿಕೊಳ್ಳಲು ಮೈಂಡ್ ಟ್ರೀ ಸಂಸ್ಥೆಯು 3.5 ಲಕ್ಷ ಹೈಜಿನಿಕ್ ಕಿಟ್ ಸಿದ್ಧಪಡಿಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಗೆ 3 ಕೋಟಿ ರೂ. ನೀಡಿತ್ತು. ಈ ಕಿಟ್ನಲ್ಲಿ ಮೈಸೂರು ಸ್ಯಾಂಡಲ್ ಸೋಪು, ಡಿಟರ್ಜೆಂಟ್ ಸೋಪು, ಕೊಬ್ಬರಿ ಎಣ್ಣೆ, ಟೂತ್ ಪೇಸ್ಟ್ ಮತ್ತು ಬ್ರಷ್, ನ್ಯಾಪ್ ಕಿನ್ ಒಳಗೊಂಡಿದೆ. ಇದನ್ನು ಹಂತ ಹಂತವಾಗಿ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದರು.
ಈ ವೇಳೆ ಉಪಮೇಯರ್ ರಾಮಮೋಹನ್ ರಾಜು, ಮೈಂಡ್ ಟ್ರೀ ಪ್ರಧಾನ ವ್ಯವಸ್ಥಾಪಕ ಅಬ್ರಹಾಂ ಮೋಸೆಸ್, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್, ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ, ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್ ವಿಶ್ವನಾಥ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್ ಕೃಷಿ
Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!
Arrested: 15 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಫರ್ಹಾನ್ ಸೆರೆ
Bengaluru Airport: ಏರ್ ಪೋರ್ಟ್ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.