ಜನರ ಸಮಸ್ಯೆಗೆ ಸ್ಪಂದಿಸದ ರಾಜ್ಯ ಸರ್ಕಾರ: ಪಾಟೀಲ
Team Udayavani, May 3, 2020, 1:15 PM IST
ಕಲಾದಗಿ: ಮಹಾಮಾರಿ ಕೋವಿಡ್ 19 ಗೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಜನರು ಗೃಹಬಂಧನದಲ್ಲಿ ಇರುವಂತೆ ಮಾಡಿದೆ. ಸರಕಾರ ಪಡಿತರ ಬಿಟ್ಟು ಜನರಿಗೆ ಮತ್ತೇನು ಕೊಟ್ಟಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಸರಕಾರವನ್ನು ಟೀಕಿಸಿದರು.
ಗ್ರಾಮದಲ್ಲಿ ಕಿಟ್ ವಿತರಿಸಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಸರಕಾರ ಪ್ರತಿ ತಿಂಗಳುಬಿಪಿಎಲ್ ಕಾರ್ಡ್‌ದಾರಿಗೆ ಪಡಿತರ ಕೊಡುತ್ತಿತ್ತು, ಈಗಲೂ ಅದನ್ನೇ ಕೊಡುತ್ತಿದ್ದಾರೆ. ಒಂದು ತಿಂಗಳ ಪಡಿತರವನ್ನು ಮುಂಗಡವಾಗಿ ಕೊಟ್ಟಿದ್ದು ಬಿಟ್ಟರೆ ಸರಕಾರದ ಸಾಧನೆ ಇಲ್ಲ, ಜನರು ಸಂಕಷ್ಟದಲ್ಲಿದ್ದಾರೆ ಎಂದರು. ಸರಕಾರಕ್ಕೆ ಮಾತೃ ಹೃದಯ ಇರಬೇಕು. ಇಲ್ಲವೇ ತಾಯಿ ಕರುಳು ಇರಬೇಕು. ಬಿಜೆಪಿ ಸರಕಾರಕ್ಕೆ ಎರಡೂ ಇಲ್ಲ ಎಂದು ಟೀಕಿಸಿದರು.
ಉದ್ಯೋಗ ಕಳೆದುಕೊಂಡು ಊಟಕ್ಕೂ ತೊಂದರೆ ಉಂಟಾಗಿದೆ. ಅವರಿಗೆ ಕೇವಲ ಅಕ್ಕಿ, ಗೋಧಿ ಕೊಟ್ಟರೆ ಸಾಕಾಗುವುದಿಲ್ಲ. ಕೇವಲ ಅಕ್ಕಿ ತಿನ್ನಲು ಸಾದ್ಯವೇ? ಅದರ ಜತೆಗೆ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಬೇಕು. ಬಿಪಿಎಲ್ ಕಾರ್ಡು ಅರ್ಜಿ ಸಲ್ಲಿಸಿದವರಿಗೆ ಕೂಡಾ ಪಡಿತರ ಕೊಡಲು ಚರ್ಚೆಯಾಗಿದೆ. ಆದರೆ, ಇನ್ನೂ ಅರ್ಜಿದಾರರಿಗೆ ಪಡಿತರ ನೀಡಿಲ್ಲ, ಸರಕಾರ ಕಿವುಡು ಸರಕಾರ, ಕುರುಡು ಸರಕಾರ, ಚರ್ಮಗೇಡಿ ಸರಕಾರ ಎಂದು ಟೀಕಿಸಿದರು. ಅಂತರರಾಜ್ಯ, ಜಿಲ್ಲೆ ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ಬರಲು ಇಚ್ಚಿಸಿದ್ದಾರೆ.
ಅಂತವರಿಗೆ ಸರಕಾರ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡಬೇಕು. ಅದು ಬಿಟ್ಟು ಕಾರ್ಮಿಕರು ಪ್ರಯಾಣಕ್ಕೆ ತಮ್ಮ ಜೇಬಿನಿಂದ ಹಣ ನೀಡಬೇಕು ಎಂದು ಹೇಳುತ್ತಿರುವುದು ದುರದೃಷ್ಟಕರ. ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಸರಕಾರಕ್ಕೆ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.