ಜನರಲ್ಲಿ ಆತ್ಮಸ್ಥೈರ್ಯ ತುಂಬಿದ್ದೇ ಜನಪದ
Team Udayavani, May 3, 2020, 5:54 PM IST
ಶಿವಮೊಗ್ಗ: ಜನಪದ ಜನರಲ್ಲಿ ಆತ್ಮನಂಬಿಕೆ, ಆತ್ಮವಿಚಾರ, ಆತ್ಮಸತ್ಯ, ಆತ್ಮಸ್ಥೈರ್ಯ ನೀಡಿದ್ದ ಜನಪದ ಇಂದು ಸಂಭ್ರಮಕ್ಕೆ ಕಾರಣವಾಗಿದೆ. ಇಂದಿನ ಸಂದಿಗ್ಧ ಕಾಲದಲ್ಲಿ ಶ್ರಮಿಕರ ದಿನದೊಂದು ನರಳುತ್ತಿರುವ ಜನಪದ ಕಲೆಯನ್ನು ಆನ್‌ಲೈನ್ ಮೂಲಕ ಅರಳುವಂತೆ ಮಾಡುತ್ತಿರುವ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜನಪದ ಹಿರಿಯ ಕಲಾವಿದರಾದ ಅಪ್ಪಗೆರೆ ತಿಮ್ಮರಾಜು ಅವರು ಅಭಿಪ್ರಾಯ ವ್ಯಕ್ತಡಿಸಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆನ್ ಲೈನ್ ಮೂಲಕ ಏರ್ಪಡಿಸಿದ್ದ ಜನಪದ ಸಂಭ್ರಮ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿರುವ ತಮ್ಮ ಮನೆಯಿಂದ ಏಕತಾನ ನುಡಿಸುತ್ತ ಜನಪದ ಹಾಡುಹೇಳಿ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಹಳ್ಳಿಗರ ಶ್ರಮದ ಜತೆಯಲ್ಲಿ ನಂಬಿಕೆ, ಪ್ರೀತಿ, ಭಾವೈಕ್ಯತೆ, ಸಂಪ್ರದಾಯ, ಸಂಬಂಧಗಳನ್ನು ಕಟ್ಟಿದ ಹೆಗ್ಗಳಿಕೆಯಾಗಿದೆ. ಬೇಲಿಯ ಮೇಲಿರುವ ಕಾಡು ಮಲ್ಲಿಗೆ ಹೂವುಯಿದ್ದಂತೆ ನಮ್ಮ ಜನಪದ ಎಂದರು.
ಮುಖ್ಯ ಅತಿಥಿ, ಸಾಹಿತಿಗಳು, ಸಹ್ಯಾದ್ರಿ ಕಲಾ ಕಾಲೇಜು ಸಹ ಪ್ರಾಧ್ಯಾಪಕರಾದ ಮೋಹನ ಚಂದ್ರಗುತ್ತಿ ಮಾತನಾಡಿ, ಜನಪದಕ್ಕೆ ಸಾವಿಲ್ಲ. ಅದು ಮತ್ತೆ ಮತ್ತೆ ಜನರ ನಡುವೆ ಪುನರ್ ಸೃಷ್ಟಿಯಾಗುತ್ತದೆ. ಕೊರೊನಾ ತಂದ ಆತಂಕದ ಸಂದರ್ಭದಲ್ಲಿ ಮಾನವ ಸಂಬಂಧಗಳು ಹಣದ ಎದುರು ವಿಜಯಶಾಲಿಯಾಗಿದೆ. ಈ ಶತಮಾನದ ದೊಡ್ಡವಿದ್ಯಮಾನವನ್ನು ನೋಡುತ್ತಿದ್ದೇವೆ. ನಮ್ಮ ಹಿರಿಯರ ಸಂಗಡ, ಅಪ್ಪ ಅಮ್ಮನ ಅನುಭವಗಳು ಇಂದು ಇಷ್ಟವಾಗುತ್ತಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್. ಉಮೇಶ್ ಮಾತನಾಡಿ, ವಿಶ್ವದಲ್ಲೇ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು ನಿಂತುಹೋಗಿರುವ ಕಾಲದಲ್ಲಿ ಶಿವಮೊಗ್ಗದಲ್ಲಿ ಕರ್ನಾಟಕ ಜಾನಪದ ಪರಿಷತ್ ಮತ್ತು ಕನ್ನಡ ಸಾಹಿತ್ಯ ಸಂಸ್ಕೃತಿಕ ವೇದಿಕೆಯು ಆನ್‌ಲೈನ್ ಮೂಲಕ ಇಂತಹ ಪ್ರಯತ್ನದ ಮೂಲಕ ಮಾದರಿಯಾಗಿದೆ ಎಂದರು.
ಕಜಾಪ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಜಗತ್ತಿನ ಜನಪದ ಶಕ್ತಿಯುತವಾಗಿ ಬೆಳೆಯಲು ಭಾರತದ ಜನಪದ ಸತ್ವ ಮಹತ್ವ ಪಡೆದಿದೆ. ಮನುಷ್ಯ ಎಷ್ಟೇ ವಿಜ್ಞಾನಿಯಾಗಿದ್ದರೂ ಜನಪದ ಯಾರನ್ನೂ ಬಿಟ್ಟಿಲ್ಲ. ಜನಪದ ಅರಿವು ಎಲ್ಲರಿಗೂ ಬೇಕು. ಜನಪದ ವ್ಯಕ್ತಿಯಲ್ಲಿ ಸೃಷ್ಟಿಯಾಗಿ ಸಮುದಾಯದಲ್ಲಿ ಮರುಸೃಷ್ಟಿಯಾಗಿ ಮತ್ತೆ ಅನುಸೃಷ್ಟಿ ಪಡೆಯುತ್ತದೆ. ಅದಕ್ಕಾಗೆ ಅದು ಶಕ್ತಿಯುತವಾಗಿದೆ. ಅದನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು.
ಸಂಗೀತ ಅವರ ಜನಪದ ಹಾಡಿನಿಂದ ಕಾರ್ಯಕ್ರಮ ಶುರುವಾಯಿತು. ಉಪಾಧ್ಯಕ್ಷರಾದ ಡಿ. ಸಿ. ದೇವರಾಜ್ ಸ್ವಾಗತಿಸಿದರು. ಭದ್ರಾವತಿಯ ಹರೀಶ್ ಡಿ.ಆರ್. ತಂಡದವರು ಜನಪದ ಹಾಡು ಹೇಳಿದರು. ನಾಗರಕೊಡಿಗೆಯ ಶುಭಾ ದಿನೇಶ್ ಮತ್ತು ತಂಡದವರು ಸೋಬಾನೆ ಹಾಡಿದರು. ಶಿಕಾರಿಪುರದ ಎಂ. ಎಚ್. ಸತ್ಯನಾರಾಯಣ ಡೊಳ್ಳಿನಪದ ಹಾಡಿದರು. ಸಾಗರದ ವಸಂತಕುಗ್ವೆ ಲಾವಣಿ ಹಾಡಿದರು. ಹಿರಿಯೂರಿನ ರೇವಣಪ್ಪ ಅವರು ಕೋಲಾಟದ ಹಾಡು ಹೇಳಿದರು. ಭದ್ರಾವತಿಯ ಜಿ. ಎನ್. ಬಸವರಾಜ್ ಬೆಡಗು, ಒಗಟು, ಗಾದೆಗಳನ್ನು ಹೇಳಿದರು.
ಬಟ್ಟೆಮಲ್ಲಪ್ಪ ನಿವಾಸಿ ಆಂಜನೇಯ ಜೋಗಿ ಅವರು ಗೀಗೀ ಪದಹಾಡಿದರು, ಭದ್ರಾವತಿಯ ಲಕ್ಷ್ಮಣರಾವ್ ತಂಡದವರು ಚೌಡಿಕೆ ಹಾಡಿದರು. ಹೊಸೂರಿನ ಗುಡ್ಡಪ್ಪಜೋಗಿ ಅವರು ತತ್ವಪದ ಹಾಡಿದರು. ರೇವತಿ ಜನಪದ ಹಾಡು ಹಾಡಿದರು. ಮಮತಾ ಶಿವಣ್ಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
Sarji sweet box case: ಲವ್ ಫೈಲ್ಯೂರ್ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.