ಕ್ವಾರೆಂಟೈನ್ ವೀರ: ಬರೋಬ್ಬರಿ ನಾಲ್ಕು ಬಾರಿ ಕ್ವಾರೆಂಟೈನ್ ಗೆ ಒಳಗಾದ ಯುವಕ!

ವಿದೇಶದಲ್ಲಿ ಮತ್ತು ಭಾರತದಲ್ಲಿ ನಾಲ್ಕು ಬಾರಿ ಕ್ವಾರೆಂಟೈನ್ ಗೊಳಗಾದ ಯುವಕನಿಗೆ ಇದೀಗ ಮತ್ತೆ ಹೋಂ ಕ್ವಾರೆಂಟೈನ್!

Team Udayavani, May 3, 2020, 9:09 PM IST

ಕ್ವಾರೆಂಟೈನ್ ವೀರ: ಬರೋಬ್ಬರಿ ನಾಲ್ಕು ಬಾರಿ ಕ್ವಾರೆಂಟೈನ್ ಗೆ ಒಳಗಾದ ಯುವಕ!

ನವದೆಹಲಿ: ಉತ್ತರಾಖಂಡ್‌ ಮೂಲದ ಈ ಯುವಕ‌ ಒಂದಲ್ಲ, ಎರಡಲ್ಲ, 4 ಬಾರಿ ಕ್ವಾರಂಟೈನ್‌ ಅನುಭವಿಸಿದ್ದಾರೆ!

ಇರಾನ್ ದೇಶದ ರಾಜಧಾನಿ ಟೆಹರಾನ್‌ನಲ್ಲಿ ಶಿಪ್ಪಿಂಗ್‌ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರವೀಣ್‌ ಬುರಾಠಿ ಎಂಬ ಯುವಕ ತಿಂಗಳ ಹಿಂದೆ ರಜೆ ಪಡೆದು ತನ್ನ ಸ್ವಂತ ಊರಾದ ಉತ್ತರಾಖಂಡದ ಖಾಟೋಲಿಯಕ್ಕೆ ಹೊರಟಿದ್ದರು.

ಫೆ.28 ರಂದು ಹೊರಟಿದ್ದ ವೇಳೆಗೆ ಇರಾನ್ ನಲ್ಲಿ ಲಾಕ್‌ಡೌನ್‌ ಘೋಷಿಸಲಾಯಿತು. ಭಾರತಕ್ಕೆ ಮರಳುವ ಉದ್ದೇಶದಿಂದ ಪ್ರವೀಣ್‌, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದಾಗ ‘14 ದಿನ ಕ್ವಾರಂಟೈನ್‌ಗೆ ಒಳಪಟ್ಟು, ಮುಂದಿನ ವಿಮಾನ ವ್ಯವಸ್ಥೆಯಾದಾಗ ಭಾರತಕ್ಕೆ ಹೋಗಿ’ ಎಂಬ ಸೂಚನೆ ಸಿಕ್ಕಿತು.

ಹೀಗೆ ಅಲ್ಲೇ 14 ದಿನಗಳ ಕ್ವಾರೆಂಟೈನ್ ಮುಗಿಸಿ ಮಾ.16ರಂದು ಇತರೆ 195 ಭಾರತೀಯರೊಂದಿಗೆ ಹೊರಟು ಪ್ರವೀಣ್ ದೆಹಲಿಗೆ ಬಂದಿಳಿದರು. ಅಲ್ಲಿ ಮತ್ತೆ ಅವರನ್ನೆಲ್ಲಾ ಕ್ವಾರಂಟೈನ್‌ ಮಾಡಲಾಯಿತು. ಮಾ.31ಕ್ಕೆ ಮರು ರಕ್ತ ಪರೀಕ್ಷೆಗೊಳಪಡಿಸಿ, ಪುನಃ ಕ್ವಾರಂಟೈನ್‌ಗೆ ಒಳ ಪಡಿಸಲಾಯಿತು.

ಅಲ್ಲಿಗೆ ಮೂರು ಬಾರಿ ಕ್ವಾರೆಂಟೈನ್ ಗೊಳಪಟ್ಟು ದೆಹಲಿಯಿಂದ ತನ್ನ ಸ್ವಂತ ಊರಿಗೆ ಬಂದು ತಲುಪಿದಾಗ ಇಲ್ಲಿನ ಚಂಪಾವತ್‌ ನಲ್ಲಿ ಪ್ರವೀಣ್ ಅವರನ್ನು ಪರೀಕ್ಷಿಸಿ ಮತ್ತೆ ಅಲ್ಲಿ ಕ್ವಾರಂಟೈನ್‌ನಲ್ಲೇ ಇರಿಸಲಾಯಿತು.

ಒಟ್ಟಾರೆ ಸರಿ ಸುಮಾರು ಎರಡು ತಿಂಗಳುಗಳಿಂದ ಕ್ವಾರೆಂಟೈನ್ ಮೇಲೆ ಕ್ವಾರೆಂಟನ್ ನಲ್ಲಿದ್ದು ಸದ್ಯಕ್ಕೆ ತನ್ನ ಮನೆಗೆ ತಲುಪಿರುವ ಪ್ರವೀಣ್ ಬುರಾಠಿ ಇದೀಗ ಮನೆಯಲ್ಲೇ ಸತತ ಐದನೇ ಬಾರಿ ಹೋಂ ಕ್ವಾರಂಟೈನ್‌ಗೆ ಸಜ್ಜಾಗಿದ್ದಾರೆ.

ಹೀಗೆ ವಿದೇಶದಿಂದ ತನ್ನ ಊರಿಗೆ ತೆರಳಿ ಮನೆಮಂದಿಯನ್ನು ಸೇರಿಕೊಳ್ಳಬೇಕೆಂಬ ಈ ಯುವಕನ ಆಸೆಗೆ ಕೋವಿಡ್ ತಂದಿಟ್ಟ ಕ್ವಾರೆಂಟೈನ್ ಸತತ ಎರಡು ತಿಂಗಳುಗಳಿಂದ ತಣ್ಣೀರೆರಚಿದೆ.

ಟಾಪ್ ನ್ಯೂಸ್

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.