ವಿವಿಧೆಡೆ ಗುಡುಗು,ಸಿಡಿಲು ಸಹಿತ ಮಳೆ
Team Udayavani, May 4, 2020, 5:23 AM IST
ಸಾಂದರ್ಭಿಕ ಚಿತ್ರ.
ಮಂಗಳೂರು/ ಉಡುಪಿ/ ಕಾಸರಗೋಡು: ದ. ಕ.ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗು ತ್ತಿದ್ದು, ರವಿವಾರವೂ ಮಳೆ ಮುಂದುವರಿದಿದೆ. ಉಡುಪಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಕಾಸರ ಗೋಡು ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದಿದೆ.ದ.ಕ. ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಉಪ್ಪಿನಂಗಡಿ ಸಹಿತ ವಿವಿಧೆಡೆ ಗುಡುಗು, ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದೆ. ಬಂದಾರು ಗ್ರಾಮದ ಅಂಡಕೇರಿಯಲ್ಲಿ ರಿಕ್ಷಾದ ಮೇಲೆ ಮರ ಬಿದ್ದು ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಕಲ್ಮಂಜ, ದಿಡುಪೆ, ಮುಂಡಾಜೆ, ಕನ್ಯಾಡಿ, ಗುರಿಪ್ಪಳ್ಳ, ಚಿಬಿದ್ರೆ, ತೋಟತ್ತಾಡಿ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತು. ಮೂಡುಬಿದಿರೆ ಪರಿಸರದಲ್ಲಿ ಸಂಜೆ ಮಳೆಯಾಗಿದೆ.
ಕಾರ್ಕಳದಲ್ಲಿ ಗಾಳಿ ಮಳೆ; ಹಾನಿ
ಉಡುಪಿ ಜಿಲ್ಲೆಯ ವಿವಿಧೆಡೆ ರವಿವಾರ ಸಂಜೆ ಮಳೆ ಯಾಗಿದೆ. ಉಡುಪಿ ನಗರ, ಸುತ್ತಮುತ್ತ ಸಂಜೆ ತನಕವೂ ಮೋಡದ ವಾತಾವರಣವಿತ್ತು. ಸಂಜೆ 7ರ ಬಳಿಕ ತಣ್ಣನೆಯ ಗಾಳಿ ಬೀಸಿ ಹನಿಹನಿ ಮಳೆಯಾಗಿದೆ. ಕಾರ್ಕಳ ತಾಲೂಕಿನ ವಿವಿಧೆಡೆಗಳಲ್ಲಿ ಗಾಳಿ ಮಳೆ ಸುರಿದಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಕುಂದಾಪುರದ ವಿವಿಧೆಡೆ ರಾತ್ರಿ ಗುಡುಗು ಸಹಿತ ಮಳೆಯಾಗಿದೆ. ಕಾಸರಗೋಡು ಜಿಲ್ಲೆಯಾದ್ಯಂತ ಗುಡುಗು, ಸಿಡಿಲು, ಗಾಳಿಯೊಂದಿಗೆ ಉತ್ತಮ ಮಳೆ ಸುರಿದಿದೆ.
ಕಡಬ: ಭಾರೀ ಮಳೆಗೆ ವಿವಿಧೆಡೆ ಹಾನಿ
ಕಡಬ: ರವಿವಾರ ಸಂಜೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಕಡಬ ತಾಲೂಕಿನ ವಿವಿಧೆಡೆ ಹಲವು ಮನೆಗಳಿಗೆ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
102 ನೆಕ್ಕಿಲಾಡಿ ಗ್ರಾಮದ ಪಟ್ರೋಡಿ ಯಲ್ಲಿ ತಂಗಪ್ಪ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ. ಪಕ್ಕದಲ್ಲಿರುವ ವಿಕ್ರಂ ಮನೆಗೆ ಹಾನಿಯಾಗಿದ್ದು, ಹುಕ್ರ ಅವರ ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಹಲವು ವಿದ್ಯುತ್ ಕಂಬಗಳು ನೆಲಕ್ಕೆ ಉರು ಳಿದ್ದು, ಪರಿಸರದಲ್ಲಿನ ಹಲವು ರಬ್ಬರ್‌ಮರಗಳು, ಅಡಿಕೆ, ತೆಂಗು ಸಹಿತ ಅಪಾರ ಕೃಷಿ ನಾಶವಾಗಿವೆ. ಹೊಗೆಕೆರೆಯಲ್ಲಿ ರಮೇಶ್ ಅವರ ಮನೆ ಬಳಿಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಉರಿದುಹೋಗಿದೆ. ಕಡಬ, ಬಿಳಿನೆಲೆ, ಪಂಜ, ಸುಬ್ರಹ್ಮಣ್ಯ, ನೆಲ್ಯಾಡಿ, ಇಚಿಲಂಪಾಡಿ, ಆಲಂಕಾರು, ಆತೂರು, ಬಡ್ಡಮೆ, ಆನೆಗುಂಡಿ, ಕೊಯಿಲ ಪ್ರದೇಶದಲ್ಲಿ ಮನೆಗಳಿಗೆ ಹಾನಿಯಾಗಿದೆ. ಗಂಡಿಬಾಗಿಲು ನಿವಾಸಿ ಮೂಸಾನ್ ಅವರ ಮನೆಯ ಮಾಡಿನ ಹೆಂಚು ಹಾರಿ ಹೋಗಿದೆ. ಮನೆಗೆ ಸಿಮೆಂಟು ಸೀಟ್ ಮೂಲಕ ವಿಸ್ತರಿಸಿ ಕಟ್ಟಲಾಗಿದ್ದ ಹೊರ ಚಾವಡಿಯ ಮಾಡು ಸಂಪೂರ್ಣ ನೆಲಕ್ಕದುರಿದೆ. ಇಲ್ಲಿನ ಪಿ.ಎಸ್. ಅಬೂಬಕ್ಕರ್ ಅವರ ಮನೆಯ ಮಾಡಿನ ಸೀಟು ಬಿದ್ದಿದೆ. ಶರೀಫ್ ಅವರ ಮನೆಯ ಮೇಲೆ ಮಾವಿನ ಮರ ಬಿದ್ದು ಮನೆ ಭಾಗಶಃ ಹಾನಿಗೀಡಾಗಿದೆ. ಗಂಡಿಬಾಗಿಲುನಿಂದ ಕುಂಡಾಜೆ ತನಕ 13 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.