20,000 ಕ್ರೆಟಾಕ್ಕೆ ಬೇಡಿಕೆ ; ಹೊಸ ವಿನ್ಯಾಸದ ಕಾರಿಗಾಗಿ ಮುಂಗಡ ಬುಕಿಂಗ್
Team Udayavani, May 4, 2020, 3:05 AM IST
ಮುಂಬೈ: ಎಲ್ಲ ಕಡೆ ನೋವಿನದ್ದೇ ಸುದ್ದಿ ಕೇಳಿ ಬರುತ್ತಿರುವ ಈ ಕಾಲದಲ್ಲಿ ಸಂಭ್ರಮದ ಸುದ್ದಿಯೂ ಇದೆ. ಹ್ಯುಂಡಾಯ್ ಕಂಪನಿ, 2020ರಲ್ಲಿ ಬಿಡುಗಡೆ ಮಾಡಿರುವ ಹೊಸ ಮಾದರಿಯ ಕ್ರೆಟಾ ಕಾರಿಗೆ 20,000 ಬೇಡಿಕೆ ಬಂದಿದೆ.
ಮಾ. 25ರ ಲಾಕ್ಡೌನ್ಗಿಂತ ಮುನ್ನ 18,000 ಕಾರುಗಳಿಗೆ ಬೇಡಿಕೆಯಿತ್ತು. ಅನಂತರ 2000 ಕಾರಿಗೆ ಬೇಡಿಕೆ ಬಂದಿದೆ. ಇದು ಬರೀ ಹ್ಯುಂಡಾಯ್ಗೆ ಮಾತ್ರವಲ್ಲ, ಭಾರತದ ವಾಹನ ತಯಾರಿ ಕ್ಷೇತ್ರಕ್ಕೇ ಶುಭ ಸಮಾಚಾರ ಎಂದು ತಜ್ಞರು ಹೇಳಿದ್ದಾರೆ.
ಹೊಸ ವಿನ್ಯಾಸದ ಕ್ರೆಟಾವನ್ನು ಲಾಕ್ ಡೌನ್ ಮುಗಿದ ಮೇಲೆ ಪೂರೈಸಲಾಗುತ್ತದೆ. ಈಗಾಗಲೇ 6703 ಕಾರನ್ನು ಭಾರತದ ವಿವಿಧ ಮೂಲೆಯಲ್ಲಿರುವ ಡೀಲರ್ಗಳಿಗೆ ಕಳುಹಿಸಲಾಗಿದೆ.
ಹೆಚ್ಚುವರಿ 10,000 ಕಾರುಗಳನ್ನು ಕಳುಹಿಸಲು ಸಿದ್ಧತೆ ನಡೆದಿದೆ. ಸದ್ಯ ಬೇಡಿಕೆಯಿರುವ ಕಾರುಗಳ ಪೈಕಿ ಕ್ರೆಟಾ ಅಗ್ರಸ್ಥಾನ ಪಡೆದಿದೆ ಎಂದು ಹ್ಯುಂಡಾಯ್ ಹೇಳಿಕೊಂಡಿದೆ.
ಹೇಗಿದೆ ಹೊಸ ವಿನ್ಯಾಸ?: 2020ರ ಕ್ರೆಟಾದಲ್ಲಿ 14 ವಿಶೇಷತೆಗಳಿವೆ. ಭಿನ್ನ ಎಂಜಿನ್ ಹೊಂದಿರುವ 3 ಮಾದರಿಯ ಕಾರುಗಳನ್ನು ಸಿದ್ಧಪಡಿಸಲಾಗಿದೆ.
1. 1.5 ಲೀಟರ್ ಪೆಟ್ರೋಲ್ (113 ಬಿಎಚ್ಪಿ ಮತ್ತು 144 ಎನ್ಎಂ). 2. 1.4 ಜಿಡಿಐ ಟಬೋ ಪೆ ಟ್ರೋಲ್ ಎಂಜಿನ್ ಬೆಲ್ಟ್ (138 ಬಿಎಚ್ಪಿ, 242 ಎನ್ಎಂ) 3. 1.5 ಲೀಟರ್ ಡೀಸೆಲ್ ಎಂಜಿನ್ (113 ಬಿಎಚ್ಪಿ, 250 ಎನ್ ಎಂ). ಈ ಪೈಕಿ ಡೀಸೆಲ್ ಎಂಜಿನ್ ಕಾರಿಗೆ ಗರಿಷ್ಠ ಶೇ.55ರಷ್ಟು ಬೇಡಿಕೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.