ಸಾಮಾಜಿಕ ಅಂತರ-ಸ್ವಚ್ಛತೆಯಿಂದ ಸೋಂಕು ತಡೆ
ರಾಮಸಾಗರ ಗ್ರಾಪಂನಲ್ಲಿ ಜಾಗೃತಿ ಅಭಿಯಾನದಲ್ಲಿ ಶಾಸಕ ಜೆ.ಎನ್. ಗಣೇಶ್ ಭಾಗಿ
Team Udayavani, May 4, 2020, 1:06 PM IST
ಸಾಂದರ್ಭಿಕ ಚಿತ್ರ
ಕಂಪ್ಲಿ: ದೇಶ ಹಾಗೂ ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಸ್ವತ್ಛತೆಯಿಂದ ಮಾತ್ರ ಈ ಮಾರಕ ವೈರಸ್‌ನ್ನು ನಿಯಂತ್ರಿಸಲು ಸಾಧ್ಯ. ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.
ತಾಲ್ಲೂಕಿನ ರಾಮಸಾಗರ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಕೊರೊನಾ ಸೋಂಕು ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಗ್ರಾಮಕ್ಕೆ ಬೇರೆ ಊರಿನಿಂದ 119 ಜನ ಬಂದಿದ್ದು, ಅವರಿಗೆ ಜಾಗೃತಿ ಮೂಡಿಬೇಕು. ಈಗಾಗಲೇ ವೈರಸ್ ತಡೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈರಸ್ ತಡೆಗಾಗಿ ಗ್ರಾಮೀಣ ಪ್ರದೇಶಗಳು ಸೇರಿದಂತೆ ಪಟ್ಟಣಗಳಲ್ಲಿ ಆರೋಗ್ಯ, ಪೊಲೀಸ್, ಕಂದಾಯ, ಆಶಾ, ಅಂಗನವಾಡಿ, ಪಿಡಿಒ, ಮುಖ್ಯಾ ಧಿಕಾರಿಗಳು, ಜನಪ್ರತಿನಿಧಿ ಗಳು ವಿಶೇಷ ಕಾಳಜಿ ವಹಿಸಿದ್ದು, ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಹಾಗೂ ಸ್ವತ್ಛತೆ ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರ ಹಾಗೂ ವಿವಿಧ ಇಲಾಖೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಈಗಾಗಲೇ ಕ್ಷೇತ್ರದ ಎಲ್ಲಾ ಗ್ರಾಪಂಗಳಲ್ಲಿ, ಪುರಸಭೆಗಳಲ್ಲಿ ಅಧಿ ಕಾರಿಗಳು, ವಿವಿಧ ಇಲಾಖೆ ಅಧಿ ಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಜಾಗೃತಿ ಸಭೆ ನಡೆಸುವ ಮೂಲಕ ಸಲಹೆ, ಸೂಚನೆ ನೀಡಲಾಗಿದೆ ಎಂದರು. ಆನೆ ಪಾರ್ವತೆಮ್ಮ, ಇಟಗಿ ಬಸವರಾಜಗೌಡ, ಎಚ್. ಶಿವಶಂಕರಗೌಡ, ಬಿ.ನಾರಾಯಣಪ್ಪ, ಆಶಾ ಕಾರ್ಯಕರ್ತೆಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.