ಬ್ರಿಟನ್: ಶಾಲೆ, ರೆಸ್ಟೋರೆಂಟ್ ಆರಂಭಕ್ಕೆ ಜನರೇ ಒಪ್ಪುತ್ತಿಲ್ಲ
Team Udayavani, May 4, 2020, 4:52 PM IST
ಬ್ರಿಟನ್: ಕೋವಿಡ್ ಸೋಂಕು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿದ್ದರೂ ಸರಕಾರ ನಿಧಾನವಾಗಿ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆಯೂ ಯೋಚಿಸುತ್ತಿದೆ. ಸದ್ಯದ ಸ್ಥಿತಿಯಲ್ಲಿ ಈ ಕೂಡಲೇ ಲಾಕ್‌ಡೌನ್ ತೆರವುಗೊಳಿಸುವುದು ಕಷ್ಟವೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಈ ಮಧ್ಯೆಯೇ, ಹಲವು ಸಂಸ್ಥೆಗಳು ಜನರ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಿವೆ. ಅಬ್ಸರ್ವರ್ ಸಂಸ್ಥೆ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ಐದು ಮಂದಿಯಲ್ಲಿ ಒಬ್ಬರು ಮಾತ್ರ ಈ ಕೂಡಲೇ ಶಾಲೆಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು ಹಾಗೂ ಸ್ಟೇಡಿಯಂಗಳನ್ನು ಆರಂಭಿಸಬಹುದು ಎಂದು ಹೇಳಿದ್ದಾರೆ.
ಅದರಂತೆಯೇ ಒಪಿನಿಯಂ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕೇವಲ ಶೇ. 17 ರಷ್ಟು ಮಂದಿ ಇದೇ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ. 67 ರಷ್ಟು ಮಂದಿ ಈಗ ಇವುಗಳನ್ನು ಆರಂಭಿ ಸಬಾರದು ಎಂದು ಹೇಳಿದ್ದರೆ. ಉಳಿದ 16 ರಷ್ಟು ಮಂದಿ ತಟಸ್ಥರಾಗಿದ್ದಾರೆ.
ಪ್ರಸ್ತುತ ಬ್ರಿಟನ್‌ನಲ್ಲಿ ಸೋಂಕು ಪ್ರಸರಣವಿನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಸರಕಾರಗಳು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಆದರೆ, ಯುರೋಝೋನ್‌ನಲ್ಲಿ ಹಲವು ರಾಷ್ಟ್ರ ಗಳು ಲಾಕ್‌ಡೌನ್ ತೆರವುಗೊಳಿಸಲು ಮುಂದಾ ಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ಸಹ ಪರೋಕ್ಷ ಒತ್ತಡಕ್ಕೆ ಒಳಗಾಗುತ್ತಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.