ಬಣಕಲ್ ಪೊಲೀಸರ ಶ್ವಾನ ಪ್ರೇಮ
Team Udayavani, May 4, 2020, 2:35 PM IST
ಕೊಟ್ಟಿಗೆಹಾರ: ಬಣಕಲ್ ಪೊಲೀಸ್ ಠಾಣೆಯ ಪೊಲೀಸರು ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಣಕಲ್ನ ಪೊಲೀಸ್ ಠಾಣೆಯಲ್ಲಿ ರಿಕ್ಕಿ ಮತ್ತು ಮಂಜುಳಾ ಎಂಬ ಹೆಸರಿನ ನಾಯಿಗಳಿದ್ದು, ಠಾಣೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೆಚ್ಚಿನ ಜೀವಗಳಾಗಿವೆ. ಠಾಣೆಯಲ್ಲಿ ಕೆಲವು ವರ್ಷಗಳಿಂದ ಈ ನಾಯಿಗಳಿದ್ದು, ಠಾಣೆಯ ಯಾರೇ ಅಧಿಕಾರಿಗಳು ಅಥವಾ ಸಿಬ್ಬಂದಿ ವರ್ಗಾವಣೆಯಾದರೂ ಅಥವಾ ಠಾಣೆಗೂ ಬಂದರೂ, ಎಲ್ಲರ ನೆಚ್ಚಿನ ಭಂಟನಾಗಿ ಈ ನಾಯಿಗಳಿವೆ.
ಆರಂಭದಲ್ಲಿ ಪೊಲೀಸರು ಠಾಣೆಯ ಬಳಿ ಕಂಡ ಈ ನಾಯಿಗಳಿಗೆ ಬಿಸ್ಕೆಟ್, ಬನ್ ಮುಂತಾದ ತಿನಿಸು ನೀಡುತ್ತ, ಸಾಕತೊಡಗಿದರು. ಬಣಕಲ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಬೇರೆ ಠಾಣೆಗೆ ವರ್ಗವಾದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಣಕಲ್ ಮಾರ್ಗವಾಗಿ ಧರ್ಮಸ್ಥಳ ಹೊರನಾಡಿಗೆ ಪ್ರವಾಸ ಬಂದಾಗ ಠಾಣೆಗೆ ಬೇಟಿ ನೀಡಿ ನಾಯಿ ಮುದ್ದಿಸಿ ಹೋಗುತ್ತಾರೆ.
ನಾನೀಗ ಬಣಕಲ್ ಠಾಣೆಯಿಂದ ವರ್ಗಾವಣೆಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಕೋರ್ಟ್ಗೆ ಸಂಬಂಧಿಸಿದ ಕಾರ್ಯಗಳಿಗೆ ಮೂಡಿಗೆರೆಗೆ ಬಂದಾಗ ಬಣಕಲ್ ಠಾಣೆಗೆ ಭೇಟಿ ನೀಡಿ ನಾಯಿಗಳ ಮುದ್ದಿಸಿ ಬರುತ್ತೇನೆ. ಅವುಗಳ ನಿಸ್ವಾರ್ಥ ಪ್ರೇಮ ಮರೆಯುವಂತಿಲ್ಲ. ಜಗದೀಶ್, ವೃತ ನಿರೀಕ್ಷಕ.
ಮುಖ್ಯಮಂತ್ರಿಗಳ ಭದ್ರತಾ ವಿಭಾಗ.
ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.